ಮೈಸೂರು

ಅಮಾಯಕರ ಸುಲಿಗೆ: ಐವರು ದರೋಡೆಕೋರರ ಬಂಧನ
ಮೈಸೂರು

ಅಮಾಯಕರ ಸುಲಿಗೆ: ಐವರು ದರೋಡೆಕೋರರ ಬಂಧನ

December 22, 2019

ಮೈಸೂರು,ಡಿ.21(ಎಸ್‍ಬಿಡಿ)- ರಸ್ತೆ ಗಳಲ್ಲಿ ಅಮಾಯಕರ ತಡೆದು, ಬೆದರಿಸಿ ದರೋಡೆ ಮಾಡುತ್ತಿದ್ದ ಐವರನ್ನು ಮೈಸೂರು ಜಿಲ್ಲಾ ಪೊಲೀಸರು ಶನಿವಾರ ಮುಂಜಾನೆ ಬಂಧಿಸಿದ್ದಾರೆ. ನಂಜನಗೂಡು ಪಟ್ಟಣದ ಜೀರೋ ಕ್ರಾಸ್ ನಿವಾಸಿ ವರುಣಾ ಅಲಿಯಾಸ್ ಕುಂಟ (19), ನೀಲಕಂಠನಗರ ಗೌತಮ ರಸ್ತೆ ನಿವಾಸಿ ಸೈಯದ್ ಅಯಾಜ್ ಅಲಿ ಯಾಸ್ ಅಜಾಯ್(19), ಆರ್‍ಪಿ ರಸ್ತೆ ನಿವಾಸಿ ಜಯಂತ್(19) ಹಾಗೂ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಬಂಧಿಸಿ, ವಿವಿಧ ಕಂಪನಿಯ 10 ಮೊಬೈಲ್, 18 ಸಾವಿರ ರೂ. ನಗದು, ದುಷ್ಕøತ್ಯಕ್ಕೆ ಬಳಸುತ್ತಿದ್ದ 2 ದ್ವಿಚಕ್ರ ವಾಹನಗಳು…

6 ಮಂದಿ ಸುಲಿಗೆಕೋರರ ಸೆರೆ: 5,68,750 ರೂ. ಮೌಲ್ಯದ ಆಭರಣ, ವಾಹನ ವಶ
ಮೈಸೂರು

6 ಮಂದಿ ಸುಲಿಗೆಕೋರರ ಸೆರೆ: 5,68,750 ರೂ. ಮೌಲ್ಯದ ಆಭರಣ, ವಾಹನ ವಶ

December 22, 2019

ಮೈಸೂರು,ಡಿ.21(ಆರ್‍ಕೆ)- ಆರು ಮಂದಿ ರಸ್ತೆ ದರೋಡೆ ಕೋರರನ್ನು ಬಂಧಿಸಿರುವ ಮಂಡಿ ಠಾಣೆ ಪೊಲೀಸರು, 5,68,750 ರೂ. ಮೌಲ್ಯದ ಚಿನ್ನಾಭರಣ ಹಾಗೂ ವಾಹನ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರಿನ ಮೇಟಗಳ್ಳಿ ನಿವಾಸಿ ಮಂಜುನಾಥ ಅಲಿ ಯಾಸ್ ಕರೀಮ(23), ಕುಂಬಾರಕೊಪ್ಪಲಿನ 4ನೇ ಕ್ರಾಸ್ ನಿವಾಸಿ ಮಂಜು(50), ಕೆ.ಆರ್. ಮೊಹಲ್ಲಾ, ನಾಲಾ ಬೀದಿ ನಿವಾಸಿ ಶ್ರೀಧರ್(35), ಬನ್ನೂರಿನ ಜಾಮಿಯಾ ಮಸೀ ದಿಯ ಇಮ್ರಾನ್ ಪಾಷ(38), ಮೇಟಗಳ್ಳಿ 1ನೇ ಕ್ರಾಸ್‍ನ ನಾರಾಯಣ(45) ಹಾಗೂ ಸರಸ್ವತಿಪುರಂ 6ನೇ ಕ್ರಾಸ್ ನಿವಾಸಿ ಪುಟ್ಟರಾಜು(45) ಬಂಧಿತ ದರೋಡೆಕೋರರು….

ಪ್ರೊ.ಶೇಷಗಿರಿರಾವ್ ನಿಧನದಿಂದ ಕನ್ನಡ ಮತ್ತು ನಿಘಂಟು ಕ್ಷೇತ್ರಕ್ಕೆ ತುಂಬಲಾಗದ ನಷ್ಟ
ಮೈಸೂರು

ಪ್ರೊ.ಶೇಷಗಿರಿರಾವ್ ನಿಧನದಿಂದ ಕನ್ನಡ ಮತ್ತು ನಿಘಂಟು ಕ್ಷೇತ್ರಕ್ಕೆ ತುಂಬಲಾಗದ ನಷ್ಟ

December 22, 2019

ಮೈಸೂರು,ಡಿ.21- ಮಹಾಜನ ಪ್ರಥಮ ದರ್ಜೆ ಕಾಲೇಜಿನ ವಾರದ ಸಮಾವೇಶದಲ್ಲಿ ಪ್ರೊ. ಶೇಷಗಿರಿರಾವ್ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸ ಲಾಯಿತು. ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ಜಯ ಕುಮಾರಿ ನುಡಿ ನಮನ ಸಲ್ಲಿಸುತ್ತಾ, ಪ್ರೊ. ಶೇಷಗಿರಿ ರಾವ್, ದೇಶ ಕಂಡ ಅಪ್ರತಿಮ ಸಾಹಿತಿಗಳು, ವಿಮರ್ಶಕರು ಹಾಗೂ ನಿಘಂಟುಗಾರರು ಎಂದು ಹೇಳಿದರು. ಸಾಹಿತ್ಯ ಲೋಕದಲ್ಲಿ ಎಲ್.ಎಸ್.ಎಸ್. ಎಂದೇ ಪ್ರಖ್ಯಾತ ರಾಗಿದ್ದ ಶೇಷಗಿರಿರಾವ್ ಅವರು ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರೂ ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಛಾಪು ಮೂಡಿಸಿದ್ದರು ಎಂದು ಶ್ಲಾಘಿಸಿದರು. ವಿವಿಧ ಕಾಲೇಜು ಗಳಲ್ಲಿ ಪ್ರಾಧ್ಯಾಪಕರಾಗಿ…

ಸಿಎಎ, ಎನ್‍ಆರ್‍ಸಿ ಸಂವಿಧಾನ ವಿರೋಧಿ
ಮೈಸೂರು

ಸಿಎಎ, ಎನ್‍ಆರ್‍ಸಿ ಸಂವಿಧಾನ ವಿರೋಧಿ

December 22, 2019

ಮೈಸೂರು, ಡಿ.21(ಪಿಎಂ)- ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಸಂವಿಧಾನದ ವಿರುದ್ಧವಾಗಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಆರೋಪಿಸಿದರು. ಮೈಸೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸದರಿ ಕಾಯ್ದೆಯು ಸಂವಿಧಾನದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯದ ವಿರುದ್ಧವಾಗಿದ್ದು, ಇಂತಹ ಕಾಯ್ದೆಯನ್ನು ಜನತೆ ಮೇಲೆ ಹೇರುವ ಮೂಲಕ ಕೇಂದ್ರ ಸರ್ಕಾರ ಸರ್ವಾಧಿಕಾರ ಧೋರಣೆ ಅನುಸರಿ ಸುತ್ತಿದೆ ಎಂದರು. ಈ ರೀತಿಯ ಕೇಂದ್ರ ಸರ್ಕಾರದ ನಡೆ ವಿರುದ್ಧ ಕೇವಲ ರಾಜಕೀಯ ಪಕ್ಷಗಳು ಹೋರಾಟ ಮಾಡುತ್ತಿಲ್ಲ….

ಸಿಎಎ, ಎನ್‍ಆರ್‍ಸಿ ವಿರುದ್ಧದ ಹೋರಾಟ ಎಚ್ಚರಿಕೆಯಿಂದ ಮುನ್ನಡೆಯಬೇಕು ಸಾಹಿತಿ ದೇವನೂರ ಮಹಾದೇವ
ಮೈಸೂರು

ಸಿಎಎ, ಎನ್‍ಆರ್‍ಸಿ ವಿರುದ್ಧದ ಹೋರಾಟ ಎಚ್ಚರಿಕೆಯಿಂದ ಮುನ್ನಡೆಯಬೇಕು ಸಾಹಿತಿ ದೇವನೂರ ಮಹಾದೇವ

December 22, 2019

ಮೈಸೂರು, ಡಿ.21(ಪಿಎಂ)- `ಪೌರತ್ವ ತಿದ್ದುಪಡಿ ಕಾಯ್ದೆ’ ಹಾಗೂ `ರಾಷ್ಟ್ರೀಯ ಪೌರತ್ವ ನೋಂದಣಿ’ ವಿರುದ್ಧದ ಹೋರಾಟ ವಿದ್ಯಾರ್ಥಿ ಸಮೂಹದ ಅಂಗಳಕ್ಕೂ ವ್ಯಾಪಿಸಿದ್ದು, ವಿದ್ಯಾರ್ಥಿಗಳು ಅತ್ಯಂತ ಎಚ್ಚರಿಕೆಯಿಂದ ಮತ್ತು ಹೊಣೆಗಾರಿಕೆಯಿಂದ ಹೋರಾಟವನ್ನು ಮುನ್ನಡೆಸಬೇಕು ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ತಿಳಿಸಿದರು. ಮೈಸೂರಿನಲ್ಲಿ ಶನಿವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಹೋರಾಟದ ದಿಕ್ಕು ತಪ್ಪಿಸುವ ಹುನ್ನಾರಗಳು ನಡೆಯು ತ್ತಿದ್ದು, ಈ ಹಿನ್ನೆಲೆಯಲ್ಲಿ ಅತ್ಯಂತ ಜಾಗ್ರತೆಯಾಗಿ ಹೋರಾಟ ಮುನ್ನಡೆಸಬೇಕು. ಎನ್‍ಆರ್‍ಸಿ ಜಾರಿಯಾದರೆ ಮೂಲನಿವಾಸಿ ಗಳನ್ನು ಒಕ್ಕಲೆಬ್ಬಿಸುವ ಅಪಾಯ ಇದೆ. ವಲಸಿಗರು ಬರುವುದಕ್ಕಿಂತ…

ರಾಮಕೃಷ್ಣ ವಿದ್ಯಾಶಾಲಾ ಕಾಲೇಜು ವಾರ್ಷಿಕೋತ್ಸವ
ಮೈಸೂರು

ರಾಮಕೃಷ್ಣ ವಿದ್ಯಾಶಾಲಾ ಕಾಲೇಜು ವಾರ್ಷಿಕೋತ್ಸವ

December 22, 2019

ಮೈಸೂರು,ಡಿ.21(ವೈಡಿಎಸ್)-ಎಲ್ಲರ ನೋವನ್ನು ನಿವಾರಿಸುವ ಶಿಕ್ಷಣದ ಅವಶ್ಯ ವಿದ್ದು, ಇದೇ ಶಿಕ್ಷಣದ ಮೂಲ ಉದ್ದೇಶವೂ ಆಗಿದೆ ಎಂದು ಬಾರ್ ಅಸೋಸಿಯೇ ಷನ್ ಆಫ್ ಇಂಡಿಯಾದ ಉಪಾಧ್ಯಕ್ಷರೂ ಆದ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್‍ನ ಹಿರಿಯ ವಕೀಲ ಎಸ್.ಎಸ್.ನಾಗಾನಂದ ಅವರು ಅಭಿಪ್ರಾಯಪಟ್ಟರು. ಯಾದವಗಿರಿಯ ಶ್ರೀ ರಾಮಕೃಷ್ಣ ವಿದ್ಯಾ ಶಾಲಾ ಆವರಣದಲ್ಲಿ ಆಯೋಜಿಸಿದ್ದ 67ನೇ ಕಾಲೇಜು ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಬಹುಮಾನ ವಿತ ರಿಸಿ ಮಾತನಾಡಿದ ಅವರು, ಶಿಕ್ಷಣ ಸ್ವಾರ್ಥ ರಹಿತ ಸಮಾಜ ಸೇವೆಗೆ ಸಹಾಯಕ. ಸಮಾಜ ದಲ್ಲಿ ವಿವಿಧ ರೀತಿಯ…

ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗಲೆಂದು ವಿಶೇಷ ಪೂಜೆ
ಮೈಸೂರು

ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗಲೆಂದು ವಿಶೇಷ ಪೂಜೆ

December 22, 2019

ಮೈಸೂರು,ಡಿ.21(ವೈಡಿಎಸ್)- ಪೇಜಾ ವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಬೇಗ ಗುಣ ಮುಖರಾಗಿ ಬರಲೆಂದು ಮೈಸೂರು ನಗರ ಬ್ರಾಹ್ಮಣ ಸಂಘದ ವತಿಯಿಂದ ಸರಸ್ವತಿ ಪುರಂನ ಶ್ರೀಕೃಷ್ಣಧಾಮದಲ್ಲಿ ವಿಷ್ಣುಸಹಸ್ರ ನಾಮ, ಪಾರಾಯಣ, ಸಾಮೂಹಿಕ ಪ್ರಾರ್ಥನೆ ಮಾಡಿ ವಿಶೇಷಪೂಜೆ ಸಲ್ಲಿಸಲಾಯಿತು. ನಂತರ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್ ಮಾತನಾಡಿ, ಪೇಜಾವರ ಶ್ರೀಗಳು ತಮ್ಮ 83ನೇ ಚಾತುರ್ಮಾಸವನ್ನು ಮೈಸೂರಿನಲ್ಲಿ ಹಮ್ಮಿಕೊಂಡಿದ್ದರಿಂದ ಅವರ ಅನುಗ್ರಹ, ಆಶೀರ್ವಾದ ನಗರದ ಜನತೆಗೆ ಸಿಕ್ಕಿದೆ. ಅವರು ಜಾತಿ, ಮತ ಭೇದವಿಲ್ಲದೆ ಯಾರೇ ಕರೆದರೂ…

ಮುಕ್ತ ಮಾರುಕಟ್ಟೆ, ಸಗಟು ಗೋದಾಮು: ಈರುಳ್ಳಿ ದಾಸ್ತಾನಿಗೆ ನಿರ್ಬಂಧ
ಮೈಸೂರು

ಮುಕ್ತ ಮಾರುಕಟ್ಟೆ, ಸಗಟು ಗೋದಾಮು: ಈರುಳ್ಳಿ ದಾಸ್ತಾನಿಗೆ ನಿರ್ಬಂಧ

December 22, 2019

ಮೈಸೂರು, ಡಿ.21- ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ ಕರ್ನಾಟಕ ಅಗತ್ಯ ವಸ್ತುಗಳ ಪರವಾನಗಿ ಆದೇಶ 1986 (ತಿದ್ದುಪಡಿ ಆದೇಶ 2019)ರ ಕ್ಲಾಸ್ Schedule IV(g) ಅಡಿಯಲ್ಲಿ ಮುಕ್ತ ಮಾರುಕಟ್ಟೆ ಯಲ್ಲಿ ಈರುಳ್ಳಿ ಸಗಟು ಮಾರಾಟಗಾರರಲ್ಲಿ/ ಡೀಲರ್‍ಗಳಲ್ಲಿ/ ಉತ್ಪಾದಕರಲ್ಲಿ/ ಕಮಿಷನ್ ಏಜೆಂಟ್‍ಗಳಲ್ಲಿ ದಾಸ್ತಾನಿನ ಮಿತಿಯನ್ನು 250 ಕ್ವಿಂಟಾಲ್‍ಗೆ (25 ಎಂ.ಟಿ) ಹಾಗೂ ಈರುಳ್ಳಿ ಚಿಲ್ಲರೆ ಮಾರಾಟಗಾರರಲ್ಲಿ ದಾಸ್ತಾನಿನ ಮಿತಿಯನ್ನು 20 ಕ್ವಿಂಟಾಲ್‍ಗೆ (2 ಎಂ.ಟಿ) ಮಿತಿಗೊಳಿಸಿ ಆದೇಶಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ…

ಸಾಮಾಜಿಕ ಕಾರ್ಯಗಳ ಮೂಲಕ ಮೈಸೂರು ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡರ ಹುಟ್ಟುಹಬ್ಬ ಆಚರಣೆ
ಮೈಸೂರು

ಸಾಮಾಜಿಕ ಕಾರ್ಯಗಳ ಮೂಲಕ ಮೈಸೂರು ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡರ ಹುಟ್ಟುಹಬ್ಬ ಆಚರಣೆ

December 22, 2019

ಮೈಸೂರು,ಡಿ.20- ಮೈಸೂರು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಅವರ 69ನೇ ಹುಟ್ಟು ಹಬ್ಬವನ್ನು ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಶುಕ್ರವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಚಾಮುಂಡಿಬೆಟ್ಟದಲ್ಲಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ಮರೀಗೌಡ ಹಾಗೂ ಜಯಶ್ರೀ ದಂಪತಿ, ಬಳಿಕ ಅಲ್ಲಿನ ಪೌರ ಕಾರ್ಮಿಕ ಮಹಿಳೆಯರು ಹಾಗೂ ಶಕ್ತಿಧಾಮದಲ್ಲಿರುವ ಮಹಿಳೆಯರಿಗೆ ಸೀರೆ ವಿತರಣೆ, ಮಕ್ಕಳಿಗೆ ನೀರಿನ ಬಾಟಲ್ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಿದರು. ಬಳಿಕ ದೇವಯ್ಯನಹುಂಡಿ ಸರ್ಕಾರಿ ಶಾಲೆಗೆ ತೆರಳಿ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ನೀರಿನ ಬಾಟಲ್…

ಜ.9ರಂದು ತಿ.ನರಸೀಪುರ ತಾಲೂಕು ಸಾಹಿತ್ಯ ಸಮ್ಮೇಳನ ಶಾಸಕ ದ್ವಯರ ಅಧ್ಯಕ್ಷತೆಯ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
ಮೈಸೂರು

ಜ.9ರಂದು ತಿ.ನರಸೀಪುರ ತಾಲೂಕು ಸಾಹಿತ್ಯ ಸಮ್ಮೇಳನ ಶಾಸಕ ದ್ವಯರ ಅಧ್ಯಕ್ಷತೆಯ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ

December 22, 2019

ತಿ.ನರಸೀಪುರ, ಡಿ.21(ಎಸ್‍ಕೆ)-ತಾಲೂಕಿನ ಐತಿಹ್ಯ, ಸಾಹಿತ್ಯ ಲೋಕದ ದಿಗ್ಗಜರ ಹಿನ್ನೆಲೆ, ಸಾಹಿತ್ಯ ಪರಂಪರೆ ಅನಾವರಣಗೊಳಿಸುವಂತೆ ಜ.9ರಂದು ಪಟ್ಟಣದಲ್ಲಿ ಅರ್ಥಪೂರ್ಣವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಶಾಸಕದ್ವಯರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸಲು ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಎಂ.ಅಶ್ವಿನ್‍ಕುಮಾರ್, ಸಭೆಯಲ್ಲಿ ಪ್ರತಿಯೊಬ್ಬರೂ ನೀಡುವ ಸಲಹೆ ಸೂಚನೆಗಳನ್ನು ಗ್ರಹಿಸಿಕೊಂಡು ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸಿ, ಶಿಸ್ತುಬದ್ಧವಾಗಿ ಕಾರ್ಯಕ್ರಮ ರೂಪುಯರೇಷೆ ಸಿದ್ಧಪಡಿಸಿಕೊಳ್ಳಬೇಕು. ಸನ್ಮಾನಿತರ ಆಯ್ಕೆಗೆ ಸಮಿತಿ ರಚಿಸಲಾಗುವುದು….

1 741 742 743 744 745 1,611
Translate »