ಸಿಎಎ, ಎನ್‍ಆರ್‍ಸಿ ವಿರುದ್ಧದ ಹೋರಾಟ ಎಚ್ಚರಿಕೆಯಿಂದ ಮುನ್ನಡೆಯಬೇಕು ಸಾಹಿತಿ ದೇವನೂರ ಮಹಾದೇವ
ಮೈಸೂರು

ಸಿಎಎ, ಎನ್‍ಆರ್‍ಸಿ ವಿರುದ್ಧದ ಹೋರಾಟ ಎಚ್ಚರಿಕೆಯಿಂದ ಮುನ್ನಡೆಯಬೇಕು ಸಾಹಿತಿ ದೇವನೂರ ಮಹಾದೇವ

December 22, 2019

ಮೈಸೂರು, ಡಿ.21(ಪಿಎಂ)- `ಪೌರತ್ವ ತಿದ್ದುಪಡಿ ಕಾಯ್ದೆ’ ಹಾಗೂ `ರಾಷ್ಟ್ರೀಯ ಪೌರತ್ವ ನೋಂದಣಿ’ ವಿರುದ್ಧದ ಹೋರಾಟ ವಿದ್ಯಾರ್ಥಿ ಸಮೂಹದ ಅಂಗಳಕ್ಕೂ ವ್ಯಾಪಿಸಿದ್ದು, ವಿದ್ಯಾರ್ಥಿಗಳು ಅತ್ಯಂತ ಎಚ್ಚರಿಕೆಯಿಂದ ಮತ್ತು ಹೊಣೆಗಾರಿಕೆಯಿಂದ ಹೋರಾಟವನ್ನು ಮುನ್ನಡೆಸಬೇಕು ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ತಿಳಿಸಿದರು.

ಮೈಸೂರಿನಲ್ಲಿ ಶನಿವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಹೋರಾಟದ ದಿಕ್ಕು ತಪ್ಪಿಸುವ ಹುನ್ನಾರಗಳು ನಡೆಯು ತ್ತಿದ್ದು, ಈ ಹಿನ್ನೆಲೆಯಲ್ಲಿ ಅತ್ಯಂತ ಜಾಗ್ರತೆಯಾಗಿ ಹೋರಾಟ ಮುನ್ನಡೆಸಬೇಕು. ಎನ್‍ಆರ್‍ಸಿ ಜಾರಿಯಾದರೆ ಮೂಲನಿವಾಸಿ ಗಳನ್ನು ಒಕ್ಕಲೆಬ್ಬಿಸುವ ಅಪಾಯ ಇದೆ. ವಲಸಿಗರು ಬರುವುದಕ್ಕಿಂತ ಮುನ್ನ ದೇಶದಲ್ಲಿ ಮೂಲ ನಿವಾಸಿಗಳು, ಆದಿವಾಸಿಗಳು ಇದ್ದರು ಎಂದರು.

Translate »