ರಾಮಕೃಷ್ಣ ವಿದ್ಯಾಶಾಲಾ ಕಾಲೇಜು ವಾರ್ಷಿಕೋತ್ಸವ
ಮೈಸೂರು

ರಾಮಕೃಷ್ಣ ವಿದ್ಯಾಶಾಲಾ ಕಾಲೇಜು ವಾರ್ಷಿಕೋತ್ಸವ

December 22, 2019

ಮೈಸೂರು,ಡಿ.21(ವೈಡಿಎಸ್)-ಎಲ್ಲರ ನೋವನ್ನು ನಿವಾರಿಸುವ ಶಿಕ್ಷಣದ ಅವಶ್ಯ ವಿದ್ದು, ಇದೇ ಶಿಕ್ಷಣದ ಮೂಲ ಉದ್ದೇಶವೂ ಆಗಿದೆ ಎಂದು ಬಾರ್ ಅಸೋಸಿಯೇ ಷನ್ ಆಫ್ ಇಂಡಿಯಾದ ಉಪಾಧ್ಯಕ್ಷರೂ ಆದ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್‍ನ ಹಿರಿಯ ವಕೀಲ ಎಸ್.ಎಸ್.ನಾಗಾನಂದ ಅವರು ಅಭಿಪ್ರಾಯಪಟ್ಟರು.

ಯಾದವಗಿರಿಯ ಶ್ರೀ ರಾಮಕೃಷ್ಣ ವಿದ್ಯಾ ಶಾಲಾ ಆವರಣದಲ್ಲಿ ಆಯೋಜಿಸಿದ್ದ 67ನೇ ಕಾಲೇಜು ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಬಹುಮಾನ ವಿತ ರಿಸಿ ಮಾತನಾಡಿದ ಅವರು, ಶಿಕ್ಷಣ ಸ್ವಾರ್ಥ ರಹಿತ ಸಮಾಜ ಸೇವೆಗೆ ಸಹಾಯಕ. ಸಮಾಜ ದಲ್ಲಿ ವಿವಿಧ ರೀತಿಯ ವೈಕಲ್ಯಗಳಿಂದ ಕೂಡಿದ ಜನರಿದ್ದು, ಅವರನ್ನು ಮುಖ್ಯವಾಹಿನಿಗೆ ತರಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು. ಸಮಾಜವನ್ನು ಶುದ್ಧಗೊಳಿಸಲು ಜ್ಞಾನ ಬೇಕು. ಈ ಜ್ಞಾನ ಶಿಕ್ಷಣದಿಂದ ಮಾತ್ರ ಸಿಗುತ್ತದೆ. ಪ್ರತಿಭೆ ಮತ್ತು ಶಕ್ತಿಯನ್ನು ಬಳಸಿ ನಾವು ಸಮಾಜವನ್ನು ಅತ್ಯುತ್ತಮವಾಗಿ ರೂಪಿಸಬಹುದು ಎಂದರು.

ರಾಮಕೃಷ್ಣ ವಿದ್ಯಾಶಾಲಾ ಪರಿಸರ ಅತ್ಯು ತ್ತಮವಾಗಿದೆ. ರಾಷ್ಟ್ರಕವಿ ಕುವೆಂಪು ಅವರು ಇಲ್ಲಿನ ಕಾರ್ಯಕ್ರಮವೊಂದರಲ್ಲಿ `ಓ ನನ್ನ ಚೇತನ ಆಗು ನೀ ಅನಿಕೇತನ’ ಸಂದೇಶ ನೀಡಿದ್ದು, ನನಗೆ ನೆನಪಿದೆ. ಪ್ರಸ್ತುತ ಸತ್ಯ, ಪ್ರೇಮ, ಅಹಿಂಸೆಯಿಂದ ಕೂಡಿದ ಸಮಾಜ ಕಲ್ಪಿಸಬೇಕಿದೆ. ಸಾಧನೆಯು ನಮ್ಮಲ್ಲಿನ ದೌರ್ಬಲ್ಯಗಳನ್ನು ಅಳಿಸಲು, ಸುಪ್ತ ಪ್ರತಿಭೆ ಅರಿ ಯಲು ಸಹಾಯಕವಾಗುತ್ತದೆ ಎಂದರು.

ಡೆಕ್ಸ್‍ಟೆರಿಟಿ ಗ್ಲೋಬಲ್‍ನ ಸಂಸ್ಥಾಪಕ ಶರದ್ ಸಾಗರ್ ಮಾತನಾಡಿ, ವಿದ್ಯಾರ್ಥಿ ಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹು ಮಾನಗಳನ್ನು ಪಡೆದಿದ್ದು, ಅವರ ಸರ್ವ ತೋಮುಖ ಬೆಳವಣಿಗೆ ಕಂಡು ನನಗೆ ಸಂತೋಷವಾಗಿದೆ. ಜತೆಗೆ ಪ್ರತೀ ವಿದ್ಯಾ ರ್ಥಿಯೂ ತನ್ನಲ್ಲಿನ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶಗಳನ್ನು ಇಲ್ಲಿ ಕಲ್ಪಿಸಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ, ಅಗತ್ಯ ವನ್ನು ತಿಳಿಸುವುದರ ಜೊತೆಗೆ, ನಾಯ ಕತ್ವದ ಸ್ಪಷ್ಟ ಕಲ್ಪನೆಯನ್ನು ವಾಸ್ತವಿಕತೆಯ ಹಿನ್ನೆಲೆಯಲ್ಲಿ ತಿಳಿಸಬೇಕು. ನಾಯಕತ್ವ ಎಂಬುದು ಯಾವುದೇ ಸ್ಧಾನ-ಮಾನ ಪಡೆ ಯುವ ಪ್ರಯತ್ನ ಅಥವಾ ಪ್ರಕ್ರಿಯೆ ಅಲ್ಲ, ಬದಲಾಗಿ ವ್ಯಕ್ತಿತ್ವವನ್ನು ಉಜ್ವಲಗೊಳಿ ಸುವ ಸಾಧನ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸ್ವಾಮಿ ಶಾಂಭವಾ ನಂದಜೀ ಮೆಮೊರಿಯಲ್ ಅಂತರ ಪ್ರೌಢ ಶಾಲಾ ಸಾಮಾನ್ಯ ಜ್ಞಾನ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ 10ನೇ ತರಗತಿ ವಿಭಾಗ: ಸದ್ವಿದ್ಯಾ ಪ್ರೌಢಶಾಲೆಯ ಎಸ್.ಧ್ಯಾನ್ (ಪ್ರ), ಜೆಎಸ್‍ಎಸ್ ಪಬ್ಲಿಕ್ ಸ್ಕೂಲ್‍ನ ವೈ.ಎಸ್.ಪೂರ್ವಿಕ್‍ಗೌಡ(ದ್ವಿ), ಸದ್ವಿದ್ಯಾ ಪ್ರೌಢಶಾಲೆಯ ಪ್ರಜ್ವಲ್(ತೃ). ವಿಶೇಷ ಬಹುಮಾನ: ಮರಿಮಲ್ಲಪ್ಪ ಪ್ರೌಢಶಾಲೆಯ ಕೆ.ಬಿ.ಲಹರಿ(ಪ್ರ), ವಿಜಯನಗರದ ಸಂತ ಜೋಸೆಫ್ ಸೆಂಟ್ರಲ್ ಸ್ಕೂಲ್‍ನ ವೈ. ಸೋಹನ್‍ಕುಮಾರ್(ದ್ವಿ), ಸದ್ವಿದ್ಯಾ ಪ್ರೌಢ ಶಾಲೆಯ ಯು.ಸುಹಾಸ್(ತೃ), ಪಿ.ಎನ್. ದಿಶಾ(4ನೇ) ಹಾಗೂ ಬಿವಿಬಿ ಸ್ಕೂಲ್‍ನ ಎನ್.ಸುಜಿತ್ ಸೊಹಾನ್(5ನೇ).

9ನೇ ತರಗತಿ ವಿಭಾಗ: ಆಚಾರ್ಯ ವಿದ್ಯಾಕುಲದ ರೋಹಿತ್ ಎಸ್.ಮೂರ್ತಿ (ಪ್ರ), ಸದ್ವಿದ್ಯಾ ಪ್ರೌಢಶಾಲೆಯ ಜಿ. ಸುವರ್ಣ (ದ್ವಿ), ವಿಜಯವಿಠಲ ವಿದ್ಯಾಶಾಲಾದ ವೈಷ್ಣವ್ ಕಿರಣ್(ತೃ). ವಿಶೇಷ ಬಹುಮಾನ: ಬಿವಿಬಿ ಸ್ಕೂಲ್‍ನ ಹೃತ್ವಿಕ್ ಎಸ್.ಪ್ರಸಾದ್ (ಪ್ರ), ಸದ್ವಿದ್ಯಾ ಪ್ರೌಢ ಶಾಲೆಯ ಶ್ರೀನಿಧಿ ಬಿ.ಐಯ್ಯರ್(ದ್ವಿ), ವಿಜಯನಗರ ಸಂತ ಜೋಸೆಫ್ ಸೆಂಟ್ರಲ್‍ನ ಕೆ.ಎಸ್. ಅನಿರುದ್ಧ(ತೃ). ಸದ್ವಿದ್ಯಾ ಪ್ರೌಢಶಾಲೆಯ ಆರ್.ಬಿ.ಸಂಜೀವ್(4ನೇ) ಹಾಗೂ ವಿಜಯ ನಗರ ಸಂತ ಜೋಸೆಫ್ ಸೆಂಟ್ರಲ್‍ನ ರಿದ್ವಾ ರೈ(5ನೇ) ಬಹುಮಾನ ಪಡೆದುಕೊಂಡರು.

ಸಂಸ್ಥೆಗಳಿಗೆ ಬಹುಮಾನ: ಸದ್ವಿದ್ಯಾ ಪ್ರೌಢ ಶಾಲೆ(ಪ್ರ), ಮರಿಮಲ್ಲಪ್ಪ ಪ್ರೌಢಶಾಲೆ(ದ್ವಿ), ಎಕ್ಸೆಲ್ ಪಬ್ಲಿಕ್ ಸ್ಕೂಲ್(ತೃ), ವಿಜಯ ನಗರ ಸಂತ ಜೋಸೆಫ್ ಸೆಂಟ್ರಲ್ ಸ್ಕೂಲ್ (4ನೇ) ಹಾಗೂ ಭಾರತೀಯ ವಿದ್ಯಾಭವನ ಶಾಲೆ(5ನೇ) ಬಹುಮಾನ ಪಡೆದು ಕೊಂಡಿತು. ಸಮಗ್ರ ಪ್ರಶಸ್ತಿಯನ್ನು ಸದ್ವಿದ್ಯಾ ಪ್ರೌಢಶಾಲೆ ಪಡೆಯಿತು. ಚಿನ್ನದ ಪದಕ: ಎಲ್ಲ ಸ್ಪರ್ಧೆಗಳಲ್ಲೂ ಉತ್ತಮ ಆಟ ಪ್ರದರ್ಶಿ ಸಿದ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ವಿಭಾಗದ ಕ್ರಮವಾಗಿ ಎಂ.ಎನ್. ವಿಹಾನ್ ಮತ್ತು ಸಿ.ಗೌತಮ್ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ವಿದ್ಯಾಶಾಲೆಯ ವಿದ್ಯಾರ್ಥಿ ಪುನೀತ್ ಟಿ.ಘಂಟಿಗೆ ಸನ್ನಡತೆಗಾಗಿ ಚಿನ್ನದಪದಕ ಪ್ರದಾನ ಮಾಡಲಾಯಿತು. ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾ ನಂದಜಿ ಮಹಾರಾಜ್, ಶ್ರೀ ರಾಮಕೃಷ್ಣ ವಿದ್ಯಾಶಾಲಾ ಮುಖ್ಯಸ್ಥರಾದ ಯುಕ್ತೇಶಾ ನಂದ, ಪ್ರಾಂಶುಪಾಲ ಬಾಲಾಜಿ ಇದ್ದರು. ನಂತರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

Translate »