6 ಮಂದಿ ಸುಲಿಗೆಕೋರರ ಸೆರೆ: 5,68,750 ರೂ. ಮೌಲ್ಯದ ಆಭರಣ, ವಾಹನ ವಶ
ಮೈಸೂರು

6 ಮಂದಿ ಸುಲಿಗೆಕೋರರ ಸೆರೆ: 5,68,750 ರೂ. ಮೌಲ್ಯದ ಆಭರಣ, ವಾಹನ ವಶ

December 22, 2019

ಮೈಸೂರು,ಡಿ.21(ಆರ್‍ಕೆ)- ಆರು ಮಂದಿ ರಸ್ತೆ ದರೋಡೆ ಕೋರರನ್ನು ಬಂಧಿಸಿರುವ ಮಂಡಿ ಠಾಣೆ ಪೊಲೀಸರು, 5,68,750 ರೂ. ಮೌಲ್ಯದ ಚಿನ್ನಾಭರಣ ಹಾಗೂ ವಾಹನ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರಿನ ಮೇಟಗಳ್ಳಿ ನಿವಾಸಿ ಮಂಜುನಾಥ ಅಲಿ ಯಾಸ್ ಕರೀಮ(23), ಕುಂಬಾರಕೊಪ್ಪಲಿನ 4ನೇ ಕ್ರಾಸ್ ನಿವಾಸಿ ಮಂಜು(50), ಕೆ.ಆರ್. ಮೊಹಲ್ಲಾ, ನಾಲಾ ಬೀದಿ ನಿವಾಸಿ ಶ್ರೀಧರ್(35), ಬನ್ನೂರಿನ ಜಾಮಿಯಾ ಮಸೀ ದಿಯ ಇಮ್ರಾನ್ ಪಾಷ(38), ಮೇಟಗಳ್ಳಿ 1ನೇ ಕ್ರಾಸ್‍ನ ನಾರಾಯಣ(45) ಹಾಗೂ ಸರಸ್ವತಿಪುರಂ 6ನೇ ಕ್ರಾಸ್ ನಿವಾಸಿ ಪುಟ್ಟರಾಜು(45) ಬಂಧಿತ ದರೋಡೆಕೋರರು.

ಡಿಸೆಂಬರ್ 12ರಂದು ಮಧ್ಯರಾತ್ರಿ ಮೈಸೂರಿನ ಹೈವೇ ಸರ್ಕಲ್‍ನಿಂದ ಜಾವಾ ಫ್ಯಾಕ್ಟರಿ ಕಡೆಗೆ ಹೋಗುವ ರಸ್ತೆಯ ಹಂದಿ ಹಳ್ಳ ಸರ್ಕಲ್ ಬಳಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾಗ ಮಂಡಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಐಪಿಸಿ ಸೆಕ್ಷನ್ 399, 402ರ ರೀತ್ಯಾ ಪ್ರಕರಣ ದಾಖಲಿಸಿದ್ದಾರೆ. ಬಂಧಿತರಿಂದ 5,68,750 ರೂ. ಮೌಲ್ಯದ 117 ಗ್ರಾಂ ಚಿನ್ನಾಭರಣ, 1 ಬಜಾಜ್ ಪಲ್ಸರ್ ಬೈಕ್ ಮತ್ತು ಓಮ್ನಿ ವ್ಯಾನ್ ವಶಪಡಿಸಿಕೊಂಡಿದ್ದಾರೆ. ಇದರಿಂದಾಗಿ ಬನ್ನೂರು ಮತ್ತು ಮೈಸೂರು ದಕ್ಷಿಣ ಗ್ರಾಮಾಂ ತರ ಠಾಣೆ ಹಾಗೂ ದೇವರಾಜ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣಗಳು ಬೆಳಕಿಗೆ ಬಂದಿವೆ.

ರಸ್ತೆಗಳಲ್ಲಿ ಮಧ್ಯರಾತ್ರಿ ಹೊಂಚು ಹಾಕಿ ಆ ಮಾರ್ಗ ಬರುವ ಒಬ್ಬಂಟಿಗರ ಮೇಲೆ ದಾಳಿ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾಗುವುದು ಈ ಸುಲಿಗೆಕೋರರ ಚಾಳಿಯಾಗಿತ್ತು. ಎಲ್ಲಾ 6 ಮಂದಿ ಆರೋಪಿಗಳನ್ನು ನ್ಯಾಯಾ ಲಯಕ್ಕೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿಸಿಪಿ ಬಿ.ಟಿ.ಕವಿತಾ, ಎನ್.ಆರ್. ಉಪ ವಿಭಾಗದ ಎಸಿಪಿ ಎಂ.ಶಿವಶಂಕರ್ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಮಂಡಿ ಠಾಣೆ ಇನ್ಸ್‍ಪೆಕ್ಟರ್ ಎಲ್.ಅರುಣ್, ಸಬ್ ಇನ್ಸ್‍ಪೆಕ್ಟರ್ ಗಳಾದ ಶಿವಕುಮಾರ್, ಶಬರೀಶ, ಎಎಸ್‍ಐ ಕೆ.ಎಸ್. ಗುರು ಸ್ವಾಮಿ, ಸಿಬ್ಬಂದಿಗಳಾದ ಜಯಪಾಲ, ಜಿ.ಸಿ. ರಾಜೇಂದ್ರ, ಎಸ್. ಜಯಕುಮಾರ್, ಚಂದ್ರಶೇಖರ್, ಎಲಿಯಾಸ್, ರವಿಗೌಡ, ಹನುಮಂತ ಕಲ್ಲೇದ ಮತ್ತು ಶಂಕರ್ ಟಿ.ಬಂಡಿವಡ್ಡರ್ ಪಾಲ್ಗೊಂಡಿದ್ದರು. ಈ ಯಶಸ್ವಿ ಪತ್ತೆ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಶ್ಲಾಘಿಸಿದ್ದಾರೆ.

Translate »