ಪ್ರೊ.ಶೇಷಗಿರಿರಾವ್ ನಿಧನದಿಂದ ಕನ್ನಡ ಮತ್ತು ನಿಘಂಟು ಕ್ಷೇತ್ರಕ್ಕೆ ತುಂಬಲಾಗದ ನಷ್ಟ
ಮೈಸೂರು

ಪ್ರೊ.ಶೇಷಗಿರಿರಾವ್ ನಿಧನದಿಂದ ಕನ್ನಡ ಮತ್ತು ನಿಘಂಟು ಕ್ಷೇತ್ರಕ್ಕೆ ತುಂಬಲಾಗದ ನಷ್ಟ

December 22, 2019

ಮೈಸೂರು,ಡಿ.21- ಮಹಾಜನ ಪ್ರಥಮ ದರ್ಜೆ ಕಾಲೇಜಿನ ವಾರದ ಸಮಾವೇಶದಲ್ಲಿ ಪ್ರೊ. ಶೇಷಗಿರಿರಾವ್ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸ ಲಾಯಿತು. ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ಜಯ ಕುಮಾರಿ ನುಡಿ ನಮನ ಸಲ್ಲಿಸುತ್ತಾ, ಪ್ರೊ. ಶೇಷಗಿರಿ ರಾವ್, ದೇಶ ಕಂಡ ಅಪ್ರತಿಮ ಸಾಹಿತಿಗಳು, ವಿಮರ್ಶಕರು ಹಾಗೂ ನಿಘಂಟುಗಾರರು ಎಂದು ಹೇಳಿದರು.

ಸಾಹಿತ್ಯ ಲೋಕದಲ್ಲಿ ಎಲ್.ಎಸ್.ಎಸ್. ಎಂದೇ ಪ್ರಖ್ಯಾತ ರಾಗಿದ್ದ ಶೇಷಗಿರಿರಾವ್ ಅವರು ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರೂ ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಛಾಪು ಮೂಡಿಸಿದ್ದರು ಎಂದು ಶ್ಲಾಘಿಸಿದರು. ವಿವಿಧ ಕಾಲೇಜು ಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಬೆಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಅಪಾರ ಪ್ರಭುತ್ವವನ್ನು ಹೊಂದಿದ್ದ ಅವರು ತಮ್ಮ ಸಾಹಿತ್ಯ ಕೃಷಿಯನ್ನು ಕನ್ನಡದಲ್ಲಿ ಕೈಗೊಂಡಿದ್ದರು. ‘ಕಪ್ಪು ಹುಡುಗಿ’ ಎಂಬ ಕಥೆಯ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಟ್ಟು, ನಂತರ ಕನ್ನಡ-ಕನ್ನಡ ನಿಘಂಟು, ಇಂಗ್ಲಿಷ್-ಕನ್ನಡ ನಿಘಂಟುಗಳನ್ನು ತರುವಲ್ಲಿ ಇವರ ಪಾತ್ರ, ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಕೊಂಡಾಡಿದರು. ಶೇಷಗಿರಿ ರಾವ್ ಅವರು ಇಂಗ್ಲೀಷ್ ಸಾಹಿತ್ಯ ಚರಿತ್ರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದರು. ಅಲ್ಲದೆ 74ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಎಂದರು.

Translate »