ಅಮಾಯಕರ ಸುಲಿಗೆ: ಐವರು ದರೋಡೆಕೋರರ ಬಂಧನ
ಮೈಸೂರು

ಅಮಾಯಕರ ಸುಲಿಗೆ: ಐವರು ದರೋಡೆಕೋರರ ಬಂಧನ

December 22, 2019

ಮೈಸೂರು,ಡಿ.21(ಎಸ್‍ಬಿಡಿ)- ರಸ್ತೆ ಗಳಲ್ಲಿ ಅಮಾಯಕರ ತಡೆದು, ಬೆದರಿಸಿ ದರೋಡೆ ಮಾಡುತ್ತಿದ್ದ ಐವರನ್ನು ಮೈಸೂರು ಜಿಲ್ಲಾ ಪೊಲೀಸರು ಶನಿವಾರ ಮುಂಜಾನೆ ಬಂಧಿಸಿದ್ದಾರೆ.

ನಂಜನಗೂಡು ಪಟ್ಟಣದ ಜೀರೋ ಕ್ರಾಸ್ ನಿವಾಸಿ ವರುಣಾ ಅಲಿಯಾಸ್ ಕುಂಟ (19), ನೀಲಕಂಠನಗರ ಗೌತಮ ರಸ್ತೆ ನಿವಾಸಿ ಸೈಯದ್ ಅಯಾಜ್ ಅಲಿ ಯಾಸ್ ಅಜಾಯ್(19), ಆರ್‍ಪಿ ರಸ್ತೆ ನಿವಾಸಿ ಜಯಂತ್(19) ಹಾಗೂ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಬಂಧಿಸಿ, ವಿವಿಧ ಕಂಪನಿಯ 10 ಮೊಬೈಲ್, 18 ಸಾವಿರ ರೂ. ನಗದು, ದುಷ್ಕøತ್ಯಕ್ಕೆ ಬಳಸುತ್ತಿದ್ದ 2 ದ್ವಿಚಕ್ರ ವಾಹನಗಳು ಹಾಗೂ ಮಾರ ಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ವರುಣಾ ಹಾಗೂ ಸೈಯದ್ ಆಟೋ ಚಾಲಕರಾಗಿದ್ದು, ಜಯಂತ್ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ಇಬ್ಬರು ಅಪ್ರಾಪ್ತ ಆರೋಪಿಗಳು ಎಸ್‍ಎಸ್‍ಎಲ್‍ಸಿ ಮುಗಿಸಿ, ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದಾರೆ. ಮುಂಜಾನೆ ಒಂಟಿಯಾಗಿ ಅಥವಾ ಇಬ್ಬರು ಹೋಗುತ್ತಿದ್ದರೆ ಈ ಗುಂಪು ದಾಳಿ ನಡೆಸಿ, ಮೊಬೈಲ್, ಚಿನ್ನಾಭರಣ ಹಾಗೂ ಹಣ ವನ್ನು ದೋಚುತ್ತಿತ್ತು. ಮೋಜು-ಮಸ್ತಿಗಾಗಿ ಸುಲಭವಾಗಿ ಹಣ ಮಾಡುವ ಉದ್ದೇಶ ದಿಂದ ದರೋಡೆ ಮಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಶನಿವಾರ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.

ಭೀತಿ ಸೃಷ್ಟಿಸಿದ್ದ ಗುಂಪು: ನಂಜನಗೂಡು ವ್ಯಾಪ್ತಿಯಲ್ಲಿ ಸುಲಿಗೆ, ದರೋಡೆ ಪ್ರಕರಣ ಗಳು ನಿರಂತರವಾಗಿ ನಡೆಯುತ್ತಿದ್ದ ಕಾರಣ ಸಾರ್ವಜನಿಕರು ಭಯಭೀತಗೊಂಡಿ ದ್ದರು. ಹಾಗಾಗಿ ಪಟ್ಟಣದ 2 ಕಡೆ ಚೆಕ್ ಪೋಸ್ಟ್ ನಿರ್ಮಿಸಿ, ಪ್ರಮುಖವಾಗಿ ದ್ವಿಚಕ್ರ ವಾಹನ ತಪಾಸಣೆ ನಡೆಸಲಾಗುತ್ತಿತ್ತು. ಅಲ್ಲದೆ ಎಲ್ಲಾ ಠಾಣೆಯ ಅಪರಾಧ ವಿಭಾ ಗದ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ನಿಯೋಜಿಸಲಾಗಿತ್ತು. ಆದಾಗ್ಯೂ ನಂಜನಗೂಡು ಕೈಗಾರಿಕಾ ಪ್ರದೇಶ ಕತ್ವಾಡಿಪುರ ವೃತ್ತದ ಬಳಿ 2 ಬೈಕ್‍ಗಳಲ್ಲಿ ಬಂದ ಐವರ ಗುಂಪು, ಎಸ್.ಇಳಂಗೋವನ್ ಅವರನ್ನು ಅಡ್ಡಗಟ್ಟಿ, ಚಾಕುವನ್ನು ಕತ್ತಿನ ಬಳಿ ಇಟ್ಟು ಜೀವಬೆದರಿಕೆ ಹಾಕಿ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿತ್ತು. ಅದೇ ದಿನ ಯುಬಿ ಕಾರ್ಖಾನೆ ಬಳಿ ರವಿ ಎಂಬುವರ ಮೊಬೈಲ್ ಕಿತ್ತುಕೊಳ್ಳಲಾಗಿತ್ತು. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆಪರೇಷನ್ ಡಿಕಾಯ್: ನಿಗಾ ಇಟ್ಟಿ ದ್ದರೂ ಮತ್ತೆ 2 ಪ್ರಕರಣಗಳು ನಡೆದ ಹಿನ್ನೆಲೆ ಯಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿ ಸಲಾಯಿತು. ಹೇಗಾದರೂ ದರೋಡೆ ಕೋರರ ಹೆಡೆಮುರಿ ಕಟ್ಟಲು ಪೊಲೀಸರ ತಂಡ `ಆಪರೇಷನ್ ಡಿಕಾಯ್’ ಆರಂಭಿ ಸಿತು. ತಂಡದ ಸಿಬ್ಬಂದಿ ಮಫ್ತಿಯಲ್ಲಿ ಮುಂಜಾನೆ ಒಂಟಿಯಾಗಿ ಅಥವಾ ಇಬ್ಬರು ಮೊಬೈಲ್‍ಗಳಲ್ಲಿ ಮಾತನಾಡುತ್ತಾ ಓಡಾಡುತ್ತಿದ್ದರು. ಕಡೆಗೂ ಶನಿವಾರ ಮುಂಜಾನೆ 4 ಗಂಟೆ ವೇಳೆಯಲ್ಲಿ ಐವರು ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ಹಲವೆಡೆ ದರೋಡೆ: ಈ ಐವರು ನಂಜನಗೂಡಿನ ಹಳ್ಳದಗೇರಿ, ಮಲ್ಲೂ ಪುರ, ಕೈಗಾರಿಕಾ ಪ್ರದೇಶ, ಮೈಸೂರಿನ ರಿಂಗ್ ರಸ್ತೆ, ಮೈಸೂರು-ನಂಜನಗೂಡು ಹೆದ್ದಾರಿ, ಗುಂಡ್ಲುಪೇಟೆ, ಸಂತೇಮರಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ದರೋಡೆ ಮಾಡಿರುವುದಾಗಿ ಪೊಲೀಸರ ವಿಚಾರಣೆ ಯಲ್ಲಿ ತಿಳಿದುಬಂದಿದೆ. ಸದ್ಯ ನಂಜನಗೂಡು ವ್ಯಾಪ್ತಿಯ 5 ಪ್ರಕರಣಗಳ ಪತ್ತೆಯಾಗಿದೆ. ಹೆಚ್ಚಿನ ವಿಚಾರಣೆಯಲ್ಲಿ ಮೈಸೂರು, ಚಾಮ ರಾಜನಗರ ಜಿಲ್ಲೆಗಳ ಹಲವು ಪ್ರಕರಣ ಗಳೂ ಪತ್ತೆಯಾಗಬಹುದು ಎಂದು ತಿಳಿಸಿದ ಎಸ್ಪಿ ರಿಷ್ಯಂತ್, ನಂಜನಗೂಡು ನಿವಾಸಿ ಗಳು ಆತಂಕಪಡುವ ಅಗತ್ಯವಿಲ್ಲ. ಮತ್ತಷ್ಟು ಅಪರಾಧಗಳ ಬಗ್ಗೆ ಮಾಹಿತಿ ಬಂದಿದ್ದು, ಎಲ್ಲವನ್ನೂ ಶೀಘ್ರವೇ ಪತ್ತೆಹಚ್ಚಲಾಗುತ್ತದೆ. ಮೊಬೈಲ್ ಇನ್ನಿತರ ವಸ್ತುಗಳ ಸುಲಿಗೆ ಯಾಗಿದ್ದರೆ ಆತಂಕಪಡದೆ ಧೈರ್ಯವಾಗಿ ಬಂದು ದೂರು ನೀಡಿ. ಪೊಲೀಸರ ಕಾರ್ಯಾಚರಣೆಗೂ ಸಹಕಾರಿಯಾಗು ತ್ತದೆ ಎಂದು ಮನವಿ ಮಾಡಿದ್ದಾರೆ.

ತಂಡಕ್ಕೆ ಪ್ರಶಂಸೆ: ಎಎಸ್ಪಿ ಪಿ.ವಿ.ಸ್ನೇಹ ಮಾರ್ಗದರ್ಶನದಲ್ಲಿ ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಪ್ರಭಾಕರ್ ರಾವ್ ಸಿಂಧೆ ನೇತೃತ್ವದಲ್ಲಿ ರಚನೆ ಯಾಗಿದ್ದ ವಿಶೇಷ ತಂಡದಲ್ಲಿ ನಂಜನ ಗೂಡು ಸರ್ಕಲ್ ಇನ್‍ಸ್ಪೆಕ್ಟರ್ ಎಂ.ಸಿ.ರಾಜ ಶೇಖರ, ಸಬ್‍ಇನ್‍ಸ್ಪೆಕ್ಟರ್‍ಗಳಾದ ಸತೀಶ, ಸುರೇಂದ್ರ, ಯಾಸ್ಮೀನ್‍ತಾಜ್, ಪ್ರೊಬೆಷ ನರಿ ಸಬ್‍ಇನ್‍ಸ್ಪೆಕ್ಟರ್‍ಗಳಾದ ಹನುಮಂತ ಉಪ್ಪಾರ, ಮಹೇಂದ್ರ, ಎಎಸ್‍ಐಗಳಾದ ಜಮೀರ್ ಅಹಮದ್, ಷರೀಫ್, ಕೃಷ್ಣೇ ಗೌಡ, ಸಿಬ್ಬಂದಿಗಳಾದ ಮಹೇಶನ್, ಸುರೇಶ, ನಾಗರಾಜು, ಕಿರಣ್, ಎಂ.ಎನ್.ಚಂದ್ರ, ಲತೀಫ್, ಕೃಷ್ಣ, ಶ್ರೀಕಾಂತ ಹಾಗೂ ಸಿದ್ದಪ್ಪಾಜಿ ಇದ್ದರು. ಜೊತೆಗೆ ವಸಂತ್, ಮಲ್ಲಿಕಾರ್ಜುನ್ ಸೇರಿದಂತೆ ಟೆಕ್ನಿಕಲ್ ಟೀಂ ಹಾಗೂ ಎಲ್ಲಾ ಠಾಣೆ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಚಾಲಾಕಿ ದರೋಡೆಕೋರರ ಬಂಧಿಸು ವಲ್ಲಿ ಯಶಸ್ವಿಯಾದ ಈ ತಂಡಕ್ಕೆ ಪ್ರಶಂಸನಾ ಪತ್ರದೊಂದಿಗೆ 30 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದರು.

Translate »