ಮುಕ್ತ ಮಾರುಕಟ್ಟೆ, ಸಗಟು ಗೋದಾಮು: ಈರುಳ್ಳಿ ದಾಸ್ತಾನಿಗೆ ನಿರ್ಬಂಧ
ಮೈಸೂರು

ಮುಕ್ತ ಮಾರುಕಟ್ಟೆ, ಸಗಟು ಗೋದಾಮು: ಈರುಳ್ಳಿ ದಾಸ್ತಾನಿಗೆ ನಿರ್ಬಂಧ

December 22, 2019

ಮೈಸೂರು, ಡಿ.21- ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ ಕರ್ನಾಟಕ ಅಗತ್ಯ ವಸ್ತುಗಳ ಪರವಾನಗಿ ಆದೇಶ 1986 (ತಿದ್ದುಪಡಿ ಆದೇಶ 2019)ರ ಕ್ಲಾಸ್ Schedule IV(g) ಅಡಿಯಲ್ಲಿ ಮುಕ್ತ ಮಾರುಕಟ್ಟೆ ಯಲ್ಲಿ ಈರುಳ್ಳಿ ಸಗಟು ಮಾರಾಟಗಾರರಲ್ಲಿ/ ಡೀಲರ್‍ಗಳಲ್ಲಿ/ ಉತ್ಪಾದಕರಲ್ಲಿ/ ಕಮಿಷನ್ ಏಜೆಂಟ್‍ಗಳಲ್ಲಿ ದಾಸ್ತಾನಿನ ಮಿತಿಯನ್ನು 250 ಕ್ವಿಂಟಾಲ್‍ಗೆ (25 ಎಂ.ಟಿ) ಹಾಗೂ ಈರುಳ್ಳಿ ಚಿಲ್ಲರೆ ಮಾರಾಟಗಾರರಲ್ಲಿ ದಾಸ್ತಾನಿನ ಮಿತಿಯನ್ನು 20 ಕ್ವಿಂಟಾಲ್‍ಗೆ (2 ಎಂ.ಟಿ) ಮಿತಿಗೊಳಿಸಿ ಆದೇಶಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಈರುಳ್ಳಿ ಸಗಟು ಮಾರಾಟಗಾರರಿಗೆ/ ಡೀಲರ್‍ಗಳಿಗೆ/ ಉತ್ಪಾದಕರುಗಳಿಗೆ/ಕಮಿಷನ್ ಏಜೆಂಟ್‍ಗಳಿಗೆ ಹಾಗೂ ಚಿಲ್ಲರೆ ಮಾರಾಟಗಾರರು ಮುಕ್ತಮಾರುಕಟ್ಟೆಯಲ್ಲಿ ಈರುಳ್ಳಿ ಸಗಟು ಮಾರಾಟಗಾರರು/ ಡೀಲರ್‍ಗಳು/ ಉತ್ಪಾದಕರುಗಳು/ ಕಮಿಷನ್ ಏಜೆಂಟ್‍ಗಳು ಈರುಳ್ಳಿ ದಾಸ್ತಾನಿನ ಮಿತಿಯನ್ನು 250 ಕ್ವಿಂಟಾಲ್‍ಗೆ (25 ಎಂ.ಟಿ) ಹಾಗೂ ಈರುಳ್ಳಿ ಚಿಲ್ಲರೆ ಮಾರಾಟಗಾರರು ಈರುಳ್ಳಿ ದಾಸ್ತಾನಿನ ಮಿತಿಯನ್ನು 20 ಕ್ವಿಂಟಾಲ್‍ಗೆ (2 ಎಂ.ಟಿ) ಮಿತಿಗೊಳಿಸುವಂತೆ ಸೂಚಿಸಿದೆ. ಈ ಗರಿಷ್ಟ ದಾಸ್ತಾನಿನ ಮಿತಿ ಯನ್ನು ಮೀರಿ ಅಧಿಕ ಈರುಳ್ಳಿಯನ್ನು ದಾಸ್ತಾನಿರಿಸಿದ್ದಲ್ಲಿ ಅಗತ್ಯ ವಸ್ತುಗಳ ಕಾಯ್ದೆ-1955 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದೆಂದು ತಿಳಿಸಿದೆ ಹಾಗೂ ಜಿಲ್ಲೆಯ ಈರುಳ್ಳಿ ಸಗಟು ಮಾರಾಟಗಾರರು/ ಡೀಲರ್‍ಗಳು/ ಕಮಿಷನ್ ಏಜೆಂಟ್‍ಗಳು ಮತ್ತು  ಈರುಳ್ಳಿ ಚಿಲ್ಲರೆ ಮಾರಾಟಗಾರರು ಕರ್ನಾಟಕ ಅಗತ್ಯ ವಸ್ತುಗಳ ಪರವಾನಗಿ ಆದೇಶ 1986 (ತಿದ್ದುಪಡಿ ಆದೇಶ 2019) ರಂತೆ ಜಿಲ್ಲಾಧಿಕಾರಿಗಳ ಕಾರ್ಯಾಲಯ ದಿಂದ ಪರವಾನಗಿ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Translate »