ಸಾಮಾಜಿಕ ಕಾರ್ಯಗಳ ಮೂಲಕ ಮೈಸೂರು ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡರ ಹುಟ್ಟುಹಬ್ಬ ಆಚರಣೆ
ಮೈಸೂರು

ಸಾಮಾಜಿಕ ಕಾರ್ಯಗಳ ಮೂಲಕ ಮೈಸೂರು ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡರ ಹುಟ್ಟುಹಬ್ಬ ಆಚರಣೆ

December 22, 2019

ಮೈಸೂರು,ಡಿ.20- ಮೈಸೂರು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಅವರ 69ನೇ ಹುಟ್ಟು ಹಬ್ಬವನ್ನು ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಶುಕ್ರವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಚಾಮುಂಡಿಬೆಟ್ಟದಲ್ಲಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ಮರೀಗೌಡ ಹಾಗೂ ಜಯಶ್ರೀ ದಂಪತಿ, ಬಳಿಕ ಅಲ್ಲಿನ ಪೌರ ಕಾರ್ಮಿಕ ಮಹಿಳೆಯರು ಹಾಗೂ ಶಕ್ತಿಧಾಮದಲ್ಲಿರುವ ಮಹಿಳೆಯರಿಗೆ ಸೀರೆ ವಿತರಣೆ, ಮಕ್ಕಳಿಗೆ ನೀರಿನ ಬಾಟಲ್ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಿದರು.

ಬಳಿಕ ದೇವಯ್ಯನಹುಂಡಿ ಸರ್ಕಾರಿ ಶಾಲೆಗೆ ತೆರಳಿ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ನೀರಿನ ಬಾಟಲ್ ವಿತರಿಸಿ, ಸಿಹಿ ಹಂಚಿದರು. ರಮಾಬಾಯಿನಗರ ಸರ್ಕಾರಿ ಶಾಲೆ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಅವ ರಿಗೂ ನೋಟ್ ಪುಸ್ತಕ ನೀಡಿದರು.

ನಂತರ ಹೂಟಗಳ್ಳಿ ಹೌಸಿಂಗ್ ಬೋರ್ಡ್ ಗಣ ಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರಲ್ಲದೆ, ಶ್ರೀರಾಂ ಪುರದ ಅಶ್ವಿನಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ 25 ಕೆಜಿ ತೂಕದ ಬೃಹತ್ ಕೇಕ್ ಕತ್ತರಿಸಿದರು. ಸಂಜೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದರು.

ಛಾಯಾದೇವಿ ಅನಾಥಾಶ್ರಮದಲ್ಲಿ ಮಕ್ಕಳಿಗೆ ಹಣ್ಣುಗಳನ್ನು ವಿತರಿಸಲಾಯಿತು. ರಮಾಬಾಯಿ ನಗರದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮ ದಲ್ಲಿ ಮರೀಗೌಡರನ್ನು ಅಭಿನಂದಿಸಲಾಯಿತು. ಕಾಂಗ್ರೆಸ್ ಹಿರಿಯ ಮುಖಂಡ ಕೃಷ್ಣಕುಮಾರ್ ಸಾಗರ್, ಕಾಂಗ್ರೆಸ್ ಸೇವಾದಳದ ಮಾಜಿ ಅಧ್ಯಕ್ಷ ಜಯರಾಮೇಗೌಡ, ಕೂರ್ಗಳ್ಳಿ ಮಹದೇವು, ಪಟೇಲ್ ಜವರೇಗೌಡ, ಜವರಪ್ಪ, ತಾಲೂಕು ಪಂಚಾಯಿತಿ ಸದಸ್ಯ ಮಾರ್ಬಳ್ಳಿ ಕುಮಾರ್, ಸಿ.ಎಂ.ಸಿದ್ದರಾಮೇ ಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಬುಲೆಟ್ ಮಹ ದೇವು, ಜಿ.ಕೆ.ಬಸವಣ್ಣ, ಗುರುಸ್ವಾಮಿ, ಮಹದೇವು, ಹೆಬ್ಬಾಳೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವ ರಾಜು, ಹಂಚ್ಯಾ ಸಣ್ಣಸ್ವಾಮಿ, ಧನಗಳ್ಳಿ ಬಸವ ರಾಜು, ಅಕ್ಕಿ ಶಿವಣ್ಣ, ನಾಗರತ್ನ ಮಹದೇವು, ನಾಡನಹಳ್ಳಿ ರವಿ, ಎಫ್.ಎಂ.ಮಹೇಶ್, ವೆಂಕ ಟಯ್ಯ, ಅಶ್ವಿನಿ ರೇವಣ್ಣ, ದೂರ ನಾಗರಾಜು, ಚಂದ್ರ, ಕೆ.ಪಿ.ಮಹದೇವು, ಕೃಷ್ಣ, ಉಮಾಶಂಕರ್ ಸೇರಿದಂತೆ ಅನೇಕ ಮುಖಂಡರು, ಮರೀಗೌಡರ ಹುಟ್ಟುಹಬ್ಬ ಸಂಭ್ರಮದಲ್ಲಿ ಭಾಗಿಯಾಗಿದ್ದರು.

Translate »