ಮೈಸೂರು

ನೇಣು ಬಿಗಿದುಕೊಂಡು ಸರ್ಕಾರಿ ಆಯುರ್ವೇದ ಕಾಲೇಜು ಸಿಬ್ಬಂದಿ ಆತ್ಮಹತ್ಯೆ
ಮೈಸೂರು

ನೇಣು ಬಿಗಿದುಕೊಂಡು ಸರ್ಕಾರಿ ಆಯುರ್ವೇದ ಕಾಲೇಜು ಸಿಬ್ಬಂದಿ ಆತ್ಮಹತ್ಯೆ

September 19, 2019

ಮೈಸೂರು, ಸೆ. 18(ಆರ್‍ಕೆ)- ನೇಣು ಬಿಗಿದುಕೊಂಡು ಸರ್ಕಾರಿ ಆಯುರ್ವೇದ ಕಾಲೇಜು ಮಹಿಳಾ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ಮೈಸೂರಿನ ಶ್ರೀರಾಂಪುರದಲ್ಲಿ ಸಂಭವಿಸಿದೆ. ಶ್ರೀರಾಂಪುರ ನಿವಾಸಿ ಲೇಟ್ ಮಂಜು ನಾಥ್ ಅವರ ಪತ್ನಿ ಶ್ರೀಮತಿ ಲಕ್ಷ್ಮಿ(28) ನೇಣಿಗೆ ಶರಣಾದವರು. ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ‘ಡಿ’ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿದ್ದ ಪತಿ ಮಂಜುನಾಥ್ ಅವರು ಸಾವನ್ನಪ್ಪಿದ ನಂತರ ಅನುಕಂಪದ ಆಧಾರದಲ್ಲಿ ಪತ್ನಿ ಲಕ್ಷ್ಮಿ ಅವರಿಗೆ ದ್ವಿತೀಯ ದರ್ಜೆ ಗುಮಾಸ್ತೆಯನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಇಂದು ಬೆಳಿಗ್ಗೆ…

ಇಂದು, ನಾಳೆ, ವಿವಿಧೆಡೆ ವಿದ್ಯುತ್ ನಿಲುಗಡೆ
ಮೈಸೂರು

ಇಂದು, ನಾಳೆ, ವಿವಿಧೆಡೆ ವಿದ್ಯುತ್ ನಿಲುಗಡೆ

September 19, 2019

ಮೈಸೂರು, ಸೆ.18- ಎನ್.ಆರ್ ಮೊಹಲ್ಲಾ ವಿಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯ ಮಿತ ವತಿಯಿಂದ ನಿರ್ವಹಣಾ ಕಾಮಗಾರಿಯನ್ನು ಹಮ್ಮಿ ಕೊಳ್ಳಲಾಗಿದೆ. ಸೆ.19ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಜಲಪುರಿ, ಗಾಯತ್ರಿಪುರಂ, ಜ್ಯೋತಿನಗರ, ಉದಯಗಿರಿ, ಕ್ಯಾತಮಾರನಹಳ್ಳಿ, ಶಾಂತಿನಗರ 1 ಮತ್ತು 2ನೇ ಹಂತ, ಗಣೇಶ್ ನಗರ, ಸತ್ಯನಗರ, ಮಹದೇವಪುರ ರಸ್ತೆ, ಜರ್ಮನ್ ಪ್ರೆಸ್, ಉಸ್ಮಾನಿಯಾ ಬ್ಲಾಕ್, ಗೌಸಿಯಾ ನಗರ, ರಾಘವೇಂದ್ರ ನಗರ, ಗಿರಿಯಾಬೋವಿ ಪಾಳ್ಯ, ಯರಗನಹಳ್ಳಿ, ಬನ್ನೂರು ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ….

ವಿ.ಸೋಮಣ್ಣಗೆ ಮೈಸೂರು-ಕೊಡಗು, ಸುರೇಶ್‍ಕುಮಾರ್‍ಗೆ ಚಾ.ನಗರ, ಆರ್.ಅಶೋಕ್‍ಗೆಮಂಡ್ಯ, ಮಾಧುಸ್ವಾಮಿಗೆ ಹಾಸನ ಉಸ್ತುವಾರಿ
ಮೈಸೂರು

ವಿ.ಸೋಮಣ್ಣಗೆ ಮೈಸೂರು-ಕೊಡಗು, ಸುರೇಶ್‍ಕುಮಾರ್‍ಗೆ ಚಾ.ನಗರ, ಆರ್.ಅಶೋಕ್‍ಗೆಮಂಡ್ಯ, ಮಾಧುಸ್ವಾಮಿಗೆ ಹಾಸನ ಉಸ್ತುವಾರಿ

September 17, 2019

ಬೆಂಗಳೂರು,ಸೆ.16- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಳೆದು-ತೂಗಿ ಅಂತೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದಾರೆ. ಅವರು, ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನಿಯೋಜನೆ ಮಾಡುವ ವೇಳೆ ರಾಜಕೀಯ ತಂತ್ರ ಗಾರಿಕೆಯನ್ನು ಅನುಸರಿಸಿದ್ದಾರೆ. ಅನರ್ಹ ಶಾಸಕರು ಪ್ರತಿನಿಧಿಸು ತ್ತಿದ್ದ ಜಿಲ್ಲೆಗಳಿಗೆ ಉಸ್ತುವಾರಿ ನೇಮಕ ಮಾಡುವಲ್ಲಿಯೂ ಎಚ್ಚ ರಿಕೆಯ ಹೆಜ್ಜೆ ಇಟ್ಟಿದ್ದಾರೆ. ಪಕ್ಷದೊಳಗಿನ ಅಸಮಾಧಾನವನ್ನು ಶಮನಗೊಳಿಸುವ ನಿಟ್ಟಿನಲ್ಲೂ ಪ್ರಯತ್ನ ಪಟ್ಟಿದ್ದಾರೆ. ಬೆಂಗಳೂರು ಜಿಲ್ಲೆಯ ಉಸ್ತುವಾರಿ ಗಿಟ್ಟಿಸಿಕೊಳ್ಳಲು ಆರ್. ಅಶೋಕ್ ಮತ್ತು ಅಶ್ವತ್ಥ್‍ನಾರಾಯಣ ಅವರ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ…

ಇಂದಿನಿಂದ 10 ದಿನ ಯುವ ಸಂಭ್ರಮ
ಮೈಸೂರು

ಇಂದಿನಿಂದ 10 ದಿನ ಯುವ ಸಂಭ್ರಮ

September 17, 2019

ಮೈಸೂರು,ಸೆ.16(ಪಿಎಂ)-ಈ ಬಾರಿಯ `ಯುವ ಸಂಭ್ರಮ’ಕ್ಕೆ ನಾಳೆ (ಸೆ.17) ಮಾನಸ ಗಂಗೋತ್ರಿಯ ಬಯಲು ರಂಗಮಂದಿರ ದಲ್ಲಿ ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್ ಚಾಲನೆ ನೀಡಲಿದ್ದಾರೆ. ಕೇವಲ ಹಾಡು-ಕುಣಿತಕ್ಕೆ ಸೀಮಿತಗೊಳ್ಳದೇ ಮೈಮ್, ಸ್ಕಿಟ್ ಹಾಗೂ ಲಘು ನಾಟಕ ಪ್ರದರ್ಶನಕ್ಕೂ ಈ ಬಾರಿ ಯುವ ಸಂಭ್ರ ಮದ ವೇದಿಕೆ ತೆರೆದುಕೊಳ್ಳಲಿದೆ. ದಸರಾ ಮಹೋತ್ಸವದ ಮೊಟ್ಟ ಮೊದಲ ಕಾರ್ಯಕ್ರಮ ಈ ಯುವ ಸಂಭ್ರಮದಲ್ಲಿ ಈವರೆಗೆ ಹಾಡು-ನೃತ್ಯದ ಕಾರಂಜಿ ಮೂಡು ತ್ತಿತ್ತು. ಆದರೆ ಈ ಬಾರಿ ಮೈಮ್ (ಅಣಕು ನಾಟಕ), ಸ್ಕಿಟ್ (ಲಘು…

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲೇ ಕೊಡಗಿನ ಜೆಡಿಎಸ್ ಎರಡು ಬಣದ ನಡುವೆ ವಾಕ್ಸಮರ
ಮೈಸೂರು

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲೇ ಕೊಡಗಿನ ಜೆಡಿಎಸ್ ಎರಡು ಬಣದ ನಡುವೆ ವಾಕ್ಸಮರ

September 17, 2019

ಬೆಂಗಳೂರು,ಸೆ.16-ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಜೆಪಿ ಭವನದಲ್ಲಿ ಇಂದು ಸಂಜೆ ನಡೆದ ಕೊಡಗು ಜಿಲ್ಲೆ ಜೆಡಿಎಸ್ ಮುಖಂಡರ ಸಭೆಯಲ್ಲಿ ತೀವ್ರ ಗದ್ದಲ ಉಂಟಾಗಿ ಸಭೆಯನ್ನು ರದ್ದುಪಡಿಸಿದ ಘಟನೆ ನಡೆದಿದೆ. ಮಾಜಿ ಸಚಿವ ಜೀವಿಜಯ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಗಣೇಶ್ ಗುಂಪುಗಳ ನಡುವೆ ದೇವೇಗೌಡರ ಸಮ್ಮುಖ ದಲ್ಲೇ ಮಾತಿನ ಚಕಮಕಿ ತಾರಕಕ್ಕೇರಿದ್ದು ಸಭೆ ಮುಂದುವರೆಸುವ ಲಕ್ಷಣಗಳೇ ಕಾಣದಿದ್ದಾಗ, ಅನ್ಯಮಾರ್ಗವಿಲ್ಲದೇ ದೇವೇಗೌಡರು ಸಭೆಯನ್ನು ರದ್ದುಪಡಿಸಿದರು. ಸಭೆಯ ಆರಂಭದಲ್ಲೇ ಮಾತಿನ ಚಕಮಕಿ ಶುರುವಾಯಿತು. ವೇದಿಕೆಯಲ್ಲಿದ್ದ ದೇವೇಗೌಡರು ಕೊಡಗು…

ಸಿಎಂ ಬಿಎಸ್‍ವೈ ಭೇಟಿಗೆ ಅವಕಾಶ ನೀಡದ ಅಮಿತ್ ಷಾ
ಮೈಸೂರು

ಸಿಎಂ ಬಿಎಸ್‍ವೈ ಭೇಟಿಗೆ ಅವಕಾಶ ನೀಡದ ಅಮಿತ್ ಷಾ

September 17, 2019

ಬಿಜೆಪಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಬೆಳವಣಿಗೆ ಸಿಎಂ, ಸಚಿವರ ಕುಟುಂಬಗಳ ಹಸ್ತಕ್ಷೇಪದ ಮಾಹಿತಿ ಸಂಗ್ರಹ ಬೆಂಗಳೂರು,ಸೆ. 16(ಕೆಎಂಶಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಮಯಾವಕಾಶ ನೀಡದ ಕೇಂದ್ರ ಗೃಹ ಸಚಿವ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿಯವರನ್ನು ದೆಹಲಿಗೆ ಕರೆಸಿ ಕೊಂಡು, ಸಮಾಲೋಚನೆ ನಡೆಸಿರುವುದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ಶುಕ್ರವಾರ ಮತ್ತು ಶನಿ ವಾರ ನೆರೆ ಪೀಡಿತ ಪ್ರದೇಶಗಳ ಪಕ್ಷದ ಶಾಸಕರ ಸಭೆ ಕರೆದಿದ್ದ ಸಂದರ್ಭದಲ್ಲಿ ಬೆಳಗಾವಿಯನ್ನು…

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸದಿರಲು ಸರ್ಕಾರ ನಿರ್ಧಾರ
ಮೈಸೂರು

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸದಿರಲು ಸರ್ಕಾರ ನಿರ್ಧಾರ

September 17, 2019

ಬೆಂಗಳೂರು, ಸೆ.16(ಕೆಎಂಶಿ)-ಉತ್ತರ ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗಿ ಪ್ರವಾಹ ಉಂಟಾದ ಪರಿಣಾಮ ರಾಜ್ಯ ಸರ್ಕಾರ ಚಳಿಗಾಲದ ಅಧಿವೇಶನ ವನ್ನು ಬೆಂಗಳೂರಿನಲ್ಲಿಯೇ ನಡೆಸಲು ತೀರ್ಮಾನಿಸಿದೆ. ಕಳೆದ 2006ರಿಂದಲೂ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿ ಕಾರಕ್ಕೆ ಬಂದಾಗಿನಿಂದಲೂ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿರುವ ಸುವರ್ಣಸೌಧದಲ್ಲಿ 10 ದಿನಗಳ ಕಾಲ ನಡೆಸಲಾಗುತ್ತಿತ್ತು. ಭೀಕರ ಪ್ರವಾಹ ಉಂಟಾಗಿ ಲಕ್ಷಾಂತರ ಜನರು ಸಂತ್ರಸ್ತರಾಗಿ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ಹೀಗಾಗಿ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಬದಲು ರಾಜಧಾನಿ ಬೆಂಗಳೂರಿನಲ್ಲೇ ನಡೆಸಲು ಸಿಎಂ ಯಡಿಯೂರಪ್ಪ ತೀರ್ಮಾನಿಸಿ ದ್ದಾರೆ. ಸಾಮಾನ್ಯವಾಗಿ…

ಪರಿಶಿಷ್ಟ ಹಾಲು ಉತ್ಪಾದಕರಿಗೆ 1 ರೂ. ಹೆಚ್ಚುವರಿ ಪ್ರೋತ್ಸಾಹ ಧನ
ಮೈಸೂರು

ಪರಿಶಿಷ್ಟ ಹಾಲು ಉತ್ಪಾದಕರಿಗೆ 1 ರೂ. ಹೆಚ್ಚುವರಿ ಪ್ರೋತ್ಸಾಹ ಧನ

September 17, 2019

ಬೆಂಗಳೂರು, ಸೆ.16(ಕೆಎಂಶಿ)- ಪರಿ ಶಿಷ್ಟ ಜಾತಿ ಹಾಗೂ ವರ್ಗದ ಹಾಲು ಉತ್ಪಾದಕರಿಗೆ ಒಂದು ರೂ. ಹೆಚ್ಚುವರಿ ಪ್ರೋತ್ಸಾಹಧನ ನೀಡುವುದಾಗಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಘೋಷಣೆ ಮಾಡಿದ್ದಾರೆ. ಆಧುನಿಕ ಕೃಷಿ ಚಟುವಟಿಕೆಯಲ್ಲಿ ತೊಡ ಗಿಸಿಕೊಂಡರೆ ಶೇ.90ರಷ್ಟು ರಿಯಾಯಿತಿ ದರದಲ್ಲಿ ಪರಿಕರಗಳನ್ನು ನೀಡುವುದಾಗಿ ಎಸ್‍ಸಿ ಮತ್ತು ಎಸ್‍ಟಿ ಸಮಾಜಕ್ಕೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣ ದಲ್ಲಿ ರಾಜ್ಯ ಪರಿಷತ್ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ಬಂಪರ್ ಕೊಡುಗೆ ಯನ್ನು ಘೋಷಣೆ ಮಾಡಿದ ಮುಖ್ಯ ಮಂತ್ರಿಯವರು, ಇದುವರೆಗೂ…

ಡಿಕೆಶಿ ಜಾಮೀನಿಗೆ ಇಡಿ ಆಕ್ಷೇಪಣೆ: ಇಂದು ವಿಚಾರಣೆ
ಮೈಸೂರು

ಡಿಕೆಶಿ ಜಾಮೀನಿಗೆ ಇಡಿ ಆಕ್ಷೇಪಣೆ: ಇಂದು ವಿಚಾರಣೆ

September 17, 2019

ಬೆಂಗಳೂರು, ಸೆ.16- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಜಾರಿ ನಿರ್ದೇಶನಾಲಯ ಆಕ್ಷೇ ಪಣೆಯನ್ನು ಸಲ್ಲಿಸಿದೆ. ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದೆ. ಸೋಮವಾರ ದೆಹಲಿಯಲ್ಲಿರುವ ಇಡಿ ವಿಶೇಷ ನ್ಯಾಯಾ ಲಯಕ್ಕೆ ಜಾರಿ ನಿರ್ದೇಶನಾಲಯ ಆಕ್ಷೇಪಣೆ ಸಲ್ಲಿಸಿದೆ. ಡಿ.ಕೆ.ಶಿವಕುಮಾರ್ ಇಡಿ ಕಸ್ಟಡಿ ಸೆ.17ರ ಮಂಗಳವಾರ ಅಂತ್ಯವಾಗಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗುತ್ತದೆ. ಶುಕ್ರವಾರ ಡಿ.ಕೆ.ಶಿವಕುಮಾರ್ ಪರ ವಕೀಲರು ಜಾಮೀನಿ ಗಾಗಿ ಅರ್ಜಿ ಸಲ್ಲಿಸಿದ್ದರು. ಡಿ.ಕೆ.ಶಿವಕುಮಾರ್ ಕಸ್ಟಡಿಯನ್ನು ನಾಲ್ಕು ದಿನಗಳ ಕಾಲ ವಿಸ್ತರಣೆ ಮಾಡಿದ್ದ…

ಅನರ್ಹ ಶಾಸಕರ ಪ್ರಕರಣ: ಇಂದು ಸುಪ್ರೀಂ ವಿಚಾರಣೆ
ಮೈಸೂರು

ಅನರ್ಹ ಶಾಸಕರ ಪ್ರಕರಣ: ಇಂದು ಸುಪ್ರೀಂ ವಿಚಾರಣೆ

September 17, 2019

ನವದೆಹಲಿ/ಬೆಂಗಳೂರು, ಸೆ.16- ದೋಸ್ತಿ ಪಕ್ಷ ಉರುಳಲು ಕಾರಣರಾಗಿದ್ದ ಅನರ್ಹ ಶಾಸಕರು ಸುಪ್ರೀಂ ಕೋರ್ಟಿ ನಲ್ಲಿ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದ್ದು, ನ್ಯಾಯಾಲಯ ಯಾವ ನಿರ್ಧಾರಕ್ಕೆ ಬರ ಲಿದೆ ಎಂಬ ಕುತೂಹಲ ಮೂಡಿದೆ. ಈಗಾಗಲೇ ಅನರ್ಹ ಶಾಸಕರು ತಮ್ಮ ಅರ್ಜಿಯನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳಲು ಸಲ್ಲಿಕೆ ಮಾಡಿದ್ದ ಅರ್ಜಿ ಯನ್ನು ನ್ಯಾಯಾಲಯ ತಿರಸ್ಕರಿಸಿ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿತ್ತು. ಇದರಂತೆ ನಿಯಮಗಳ ಅನ್ವಯ ಮಂಗಳವಾರ ಅನರ್ಹ ಶಾಸಕರು ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆಗೆ ಬರಲಿದೆ….

1 821 822 823 824 825 1,611
Translate »