ಪರಿಶಿಷ್ಟ ಹಾಲು ಉತ್ಪಾದಕರಿಗೆ 1 ರೂ. ಹೆಚ್ಚುವರಿ ಪ್ರೋತ್ಸಾಹ ಧನ
ಮೈಸೂರು

ಪರಿಶಿಷ್ಟ ಹಾಲು ಉತ್ಪಾದಕರಿಗೆ 1 ರೂ. ಹೆಚ್ಚುವರಿ ಪ್ರೋತ್ಸಾಹ ಧನ

September 17, 2019

ಬೆಂಗಳೂರು, ಸೆ.16(ಕೆಎಂಶಿ)- ಪರಿ ಶಿಷ್ಟ ಜಾತಿ ಹಾಗೂ ವರ್ಗದ ಹಾಲು ಉತ್ಪಾದಕರಿಗೆ ಒಂದು ರೂ. ಹೆಚ್ಚುವರಿ ಪ್ರೋತ್ಸಾಹಧನ ನೀಡುವುದಾಗಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಘೋಷಣೆ ಮಾಡಿದ್ದಾರೆ.

ಆಧುನಿಕ ಕೃಷಿ ಚಟುವಟಿಕೆಯಲ್ಲಿ ತೊಡ ಗಿಸಿಕೊಂಡರೆ ಶೇ.90ರಷ್ಟು ರಿಯಾಯಿತಿ ದರದಲ್ಲಿ ಪರಿಕರಗಳನ್ನು ನೀಡುವುದಾಗಿ ಎಸ್‍ಸಿ ಮತ್ತು ಎಸ್‍ಟಿ ಸಮಾಜಕ್ಕೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣ ದಲ್ಲಿ ರಾಜ್ಯ ಪರಿಷತ್ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ಬಂಪರ್ ಕೊಡುಗೆ ಯನ್ನು ಘೋಷಣೆ ಮಾಡಿದ ಮುಖ್ಯ ಮಂತ್ರಿಯವರು, ಇದುವರೆಗೂ ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹಧನ ವನ್ನು ನೀಡಲಾಗುತ್ತಿತ್ತು. ಎಸ್‍ಸಿ ಮತ್ತು ಎಸ್‍ಟಿ ಸಮುದಾಯ ಹೈನುಗಾರಿಕೆ ಯಲ್ಲಿ ತೊಡಗಿಸಿಕೊಂಡು, ಆ ಕುಟುಂ ಬದ ಹೆಣ್ಣುಮಕ್ಕಳು ಸ್ವಂತ ಕಾಲಿನ ಮೇಲೆ ಬದುಕಬೇಕೆಂಬ ಉದ್ದೇಶದಿಂದ ಪ್ರತಿ ಲೀಟರ್‍ಗೆ 1 ರೂ. ಹೆಚ್ಚಳ ಮಾಡಲಾಗಿದೆ.
ಹಸು ಮತ್ತು ಕುರಿ-ಮೇಕೆ ಖರೀದಿಗೂ ಶೇ.90ರಷ್ಟು ಸಬ್ಸಿಡಿ ಹಣ ಕಲ್ಪಿಸಲು ತೀರ್ಮಾ ನಿಸಿದೆ ಎಂದ ಮುಖ್ಯಮಂತ್ರಿಯವರು, ಕೃಷಿ ಮತ್ತು ತೋಟಗಾರಿಕೆಯಲ್ಲಿ ತೊಡಗಿಸಿ ಕೊಳ್ಳಲು ಯಂತ್ರೋಪಕರಣಗಳ ಖರೀ ದಿಗೆ ಶೇ.90ರಷ್ಟು ಸಬ್ಸಿಡಿ ನೀಡುವುದರ ಜೊತೆಗೆ ಹನಿ ನೀರಾವರಿ ಅಳವಡಿಸಿ ಕೊಳ್ಳಲು ಇದೇ ಪ್ರಮಾಣದ ಸಬ್ಸಿಡಿ ನೀಡ ಲಾಗುವುದು ಎಂದು ಹೇಳಿದರು.

ರೇಷ್ಮೆ ವ್ಯವಸಾಯಕ್ಕೆ ಅನುಕೂಲವಾಗು ವಂತೆ ಮನೆ ಕಟ್ಟಿಕೊಳ್ಳಲು ಮತ್ತು ಪಾಲಿ ಹೌಸ್ ನಿರ್ಮಾಣಕ್ಕೂ ಶೇ.90ರಷ್ಟು ಸಬ್ಸಿಡಿ ಕಲ್ಪಿಸಲಾಗುವುದು. ಬಡವರ ಬಂಧು ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ವರ್ಗದ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಿ ಕೊಳ್ಳಲು 10 ಸಾವಿರ ರೂ. ಬಡ್ಡಿರಹಿತ ಹಣ ನೀಡಲಾಗುವುದು. ಅಲ್ಲದೆ ಇವರ ಸ್ವಸಹಾಯ ಗುಂಪುಗಳಿಗೆ ಹಾಲಿ ಇರುವ 2 ಲಕ್ಷದಿಂದ 5 ಲಕ್ಷ ರೂ. ಗಳಿಗೆ ಹೆಚ್ಚಿಸಲು ಸಭೆ ಸಮ್ಮತಿಸಿದೆ. ಪೌರಕಾರ್ಮಿಕರು ಮನೆ ಕಟ್ಟಿಕೊಳ್ಳಲು 6 ಲಕ್ಷ ರೂ. ಹಣ ನೀಡಲಾಗುವುದು. ನೆರೆ ಪ್ರದೇಶದಲ್ಲಿ ಎಸ್‍ಸಿ/ಎಸ್‍ಟಿ ಕುಟುಂಬ ಗಳು ಸೂರು ಕಳೆದು ಕೊಂಡಿದ್ದರೆ, ಅಂತಹ ವರಿಗೆ ಎಸ್‍ಟಿಪಿ ಹಣದಲ್ಲೇ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ತಿಳಿಸಿದರು.

ಪರಿಶಿಷ್ಟ ಜಾತಿ, ಪಂಗಡ ಮತ್ತು ಸಾಮಾನ್ಯ ಜನರ ನಡುವೆ ಇರುವ ಅಭಿ ವೃದ್ಧಿ ಅಂತರವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ಮಹತ್ವದ ಯೋಜನೆ ಗಳನ್ನು ಕೈಗೊಳ್ಳಲಾಗಿದೆ ಎಂದರು.

ಈ ಹಣದಲ್ಲೇ ಈ ಸಮಾಜ ವಾಸಿ ಸುವ ಕಾಲೋನಿ ಮತ್ತು ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಉತ್ತಮ ರಸ್ತೆ ಸೇರಿದಂತೆ ಮೂಲ ಸೌಕರ್ಯ ಗಳನ್ನು ಕಲ್ಪಿಸಲು ಪ್ರತ್ಯೇಕ ಹಣವನ್ನು ಮೀಸ ಲಿಡಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯಡಿ 30444.68 ಕೋಟಿ ಒದಗಿಸಲಾಗಿದೆ. ಇದುವರೆಗೂ ಶೇ.18ರಷ್ಟು ಮಾತ್ರ ಸಾಧನೆ ಯಾಗಿದ್ದು, ಇಂದಿನ ಸಭೆಯಲ್ಲಿ ಕೈಗೆತ್ತಿ ಕೊಂಡಂತೆ ಹೊಸ ಯೋಜನೆಗಳನ್ನು ಅನು ಷ್ಠಾನಗೊಳಿಸಿ, ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಗೆ ಆದೇಶಿಸಲಾಗಿದೆ ಎಂದರು. ಲೋಕೋಪಯೋಗಿ, ಭಾರೀ ನೀರಾವರಿ, ಗಣಿ ಮತ್ತು ಭೂವಿಜ್ಞಾನ ಸೇರಿದಂತೆ ಎಸ್‍ಸಿಟಿ, ಟಿಪಿಎಸ್ ಯೋಜನೆಯಡಿ 780.28 ಕೋಟಿ ಖರ್ಚಾಗದೆ ಉಳಿದಿರುವ ಹಣವನ್ನು ನೆರೆ ಪೀಡಿತ ಪ್ರದೇಶಗಳಲ್ಲಿ ಎಸ್‍ಸಿ-ಎಸ್‍ಟಿ ಸಮುದಾಯಕ್ಕೆ ಮನೆ ನಿರ್ಮಿಸಿಕೊಡಲು ಸೂಚನೆ ಕೊಡಲಾ ಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಎಸ್‍ಸಿ-ಎಸ್‍ಟಿ ಸಮುದಾಯಕ್ಕೆ ಶೇ.50ರಷ್ಟು ಅನುದಾನವನ್ನು ಮೀಸಲಿಡುವಂತೆ ಸೂಚಿ ಸಿರುವುದಾಗಿ ತಿಳಿಸಿದರು.

Translate »