ಮೈಸೂರು

ರಾಷ್ಟ್ರಮಟ್ಟದಲ್ಲಿ ಮುಕ್ತ ವಿವಿ ಸಂಘ ಅಗತ್ಯ
ಮೈಸೂರು

ರಾಷ್ಟ್ರಮಟ್ಟದಲ್ಲಿ ಮುಕ್ತ ವಿವಿ ಸಂಘ ಅಗತ್ಯ

September 20, 2019

ಮೈಸೂರು,ಸೆ.8(ಎಂಕೆ)- ರಾಷ್ಟ್ರಮಟ್ಟ ದಲ್ಲಿ `ಮುಕ್ತ ವಿಶ್ವವಿದ್ಯಾನಿಲಯಗಳ ಸಂಘ’ ವನ್ನು ಸ್ಥಾಪಿಸುವುದರಿಂದ ಬಹುತೇಕ ಮುಕ್ತ ವಿವಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ ಎಂದು ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‍ಒಯು) ಕುಲಪತಿ ಡಾ.ಎಸ್. ವಿದ್ಯಾಶಂಕರ್ ಸಲಹೆ ನೀಡಿದರು. ಮುಕ್ತ ಗಂಗೋತ್ರಿ ಆವರಣದಲ್ಲಿರುವ ಕಾವೇರಿ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ಮುಕ್ತ ವಿಶ್ವವಿದ್ಯಾಲಯಗಳ ಕುಲಪತಿ ಗಳ ಸಮ್ಮೇಳನದ ಸಮಾರೋಪ ಸಮಾ ರಂಭದಲ್ಲಿ ಮಾತನಾಡಿದ ಅವರು, ಸಮಸ್ಯೆ ಗಳನ್ನು ಬಗೆಹರಿಸಿದರೆ ಮಾತ್ರ ಮುಕ್ತ ವಿವಿ ಗಳ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಹೆಚ್ಚಲಿದೆ…

ಸೆಲ್ಫಿ ವಿತ್ ಹೆರಿಟೇಜ್ ಬಿಲ್ಡಿಂಗ್
ಮೈಸೂರು

ಸೆಲ್ಫಿ ವಿತ್ ಹೆರಿಟೇಜ್ ಬಿಲ್ಡಿಂಗ್

September 20, 2019

ಮೈಸೂರುಸೆ.8-ಮೈಸೂರು ದಸರಾ ಮಹೋತ್ಸವ- 2019ರ ಅಂಗವಾಗಿ ಪುರಾ ತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಜನಸಾಮಾನ್ಯರಿಗೆ ಹಾಗೂ ಪ್ರವಾಸಿಗರಿಗೆ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಡುವ ಸಲುವಾಗಿ ಸೆಲ್ಫಿ ವಿತ್ ಹೆರಿಟೇಜ್ ಬಿಲ್ಡಿಂಗ್ ಎಂಬ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ 3 ಸೆಲ್ಫಿಗಳಿಗೆ ಪ್ರಥಮ ಬಹುಮಾನಕ್ಕೆ ರೂ. 3,000, ದ್ವಿತೀಯ ಬಹುಮಾನಕ್ಕೆ ರೂ. 2,000 ಹಾಗೂ ತೃತೀಯ ಬಹುಮಾನ ರೂ. 1,000 ನಗದನ್ನು ನೀಡಲಾಗುವುದು. ಪಾರಂಪರಿಕ ಕಟ್ಟಡದೊಂದಿಗೆ ಒಬ್ಬರೇ ಸೆಲ್ಫಿ ತೆಗೆದುಕೊಂಡಿರಬೇಕು. ಸೆಲ್ಫಿ ಫೆÇೀಟೋ…

ಜೆಎಸ್‍ಎಸ್ ವಿಶ್ವವಿದ್ಯಾನಿಲಯಕ್ಕೆ ಮೊದಲ ಸ್ಥಾನ
ಮೈಸೂರು

ಜೆಎಸ್‍ಎಸ್ ವಿಶ್ವವಿದ್ಯಾನಿಲಯಕ್ಕೆ ಮೊದಲ ಸ್ಥಾನ

September 19, 2019

ಮೈಸೂರು, ಸೆ. 18- ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್ ವರದಿ ಬಿಡುಗಡೆಯಾಗಿದ್ದು, ಮೈಸೂರಿನ ಜೆಎಸ್‍ಎಸ್ ವಿಶ್ವವಿದ್ಯಾನಿಲಯ ಮತ್ತೊಮ್ಮೆ ಯುವ ವಿಶ್ವವಿದ್ಯಾನಿಲಯಗಳ ವಿಭಾಗ ದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಮಂಗಳವಾರ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾ ಯಣ ಅವರು ಔಪಚಾರಿಕವಾಗಿ ಕರ್ನಾ ಟಕ ರಾಜ್ಯ ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್ ವರದಿ-2019 ಬಿಡುಗಡೆ ಮಾಡಿದರು. ವರದಿಯಲ್ಲಿ ನಾಲ್ಕು ಉನ್ನತ ವಿಭಾಗ ಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಸ್ಥಾನವನ್ನು ಪಟ್ಟಿ ಮಾಡಲಾಗಿದೆ. ಹಿರಿಯ ವಿಶ್ವವಿದ್ಯಾನಿಲಯಗಳು: 10 ವರ್ಷಗಳಿಗೂ…

ಮೌಲ್ಯಯುತ ಶಿಕ್ಷಣ ನೀಡುವ ಭವನ್ಸ್ ಪ್ರಿಯಂವದಾ ಬಿರ್ಲಾ ಸಂಸ್ಥೆ
ಮೈಸೂರು

ಮೌಲ್ಯಯುತ ಶಿಕ್ಷಣ ನೀಡುವ ಭವನ್ಸ್ ಪ್ರಿಯಂವದಾ ಬಿರ್ಲಾ ಸಂಸ್ಥೆ

September 19, 2019

ಮೈಸೂರು, ಸೆ.18(ಆರ್‍ಕೆಬಿ)- ಮೈಸೂ ರಿನ ವಿಜಯನಗರ 1ನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನದ ಭವನ್ಸ್ ಪ್ರಿಯಂವದಾ ಬಿರ್ಲಾ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಎಐಸಿಟಿಇ (ಆಲ್‍ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿ ಕಲ್ ಎಜುಕೇಷನ್‍ನಿಂದ ಅನುಮೋದಿತ ಎರಡು ವರ್ಷಗಳ ಪಿಜಿಡಿಎಂ (ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಮ್ಯಾನೇಜ್‍ಮೆಂಟ್) ಕಾರ್ಯಕ್ರಮದ ಉದ್ಘಾಟನೆ ಬುಧವಾರ ವಿದ್ಯಾಭವನದ ಸಭಾಂಗಣದಲ್ಲಿ ನೆರವೇರಿಸಲಾಯಿತು. ಐಟಿ ಚಾಂಪ್ಸ್ ಸಾಫ್ಟ್‍ವೇರ್ ಕಂಪನಿಯ ವ್ಯವಸ್ಥಾಪಕ ರಾಜೇಶ್ ಕುತ್ನೀಕರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರು. ಮುಖ್ಯ ಅತಿಥಿಯಾಗಿದ್ದ ಐಟಿ ಚಾಂಪ್ಸ್ ಸಾಫ್ಟ್‍ವೇರ್…

ಮಾವುತರ ಮಕ್ಕಳ ನಡುವೆ ಕೇಕ್ ಕತ್ತರಿಸಿ, ಪುಸ್ತಕ ವಿತರಿಸಿ ಸಂಭ್ರಮಿಸಿದ ಅಭಿಮಾನಿಗಳು
ಮೈಸೂರು

ಮಾವುತರ ಮಕ್ಕಳ ನಡುವೆ ಕೇಕ್ ಕತ್ತರಿಸಿ, ಪುಸ್ತಕ ವಿತರಿಸಿ ಸಂಭ್ರಮಿಸಿದ ಅಭಿಮಾನಿಗಳು

September 19, 2019

ಮೈಸೂರು, ಸೆ.18(ಆರ್‍ಕೆಬಿ)- ನಟ ಡಾ.ವಿಷ್ಣುವರ್ಧನ್ ಅವರ 69ನೇ ಜನ್ಮ ದಿನವನ್ನು ಮೈಸೂರಿನಲ್ಲಿ ವಿವಿಧ ಸಂಘಟನೆಗಳು ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ತಮ್ಮ ಅಭಿಮಾನಿ ನಾಯಕ ನಟನನ್ನು ಸ್ಮರಿಸಿಕೊಂಡರು. ಕರುಣಾಮಯಿ ಡಾ.ವಿಷ್ಣುವರ್ಧನ್ ಅಭಿಮಾನಿ ಬಳಗದ ವತಿಯಿಂದ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಮಾವುತರ ಮಕ್ಕಳೊಂದಿಗೆ ವಿಶಿಷ್ಟವಾಗಿ ಆಚರಿಸಿದರು. ಚಿತ್ರನಟಿ ಭಾರತಿ ವಿಷ್ಣುವರ್ಧನ್ ಅವರು ಮಾವುತರ ಮಕ್ಕಳ ನಡುವೆ ಕೇಕ್ ಕತ್ತರಿಸಿ, ಸಿಹಿ ವಿತರಿಸಿದರು. ಅವರಿಗೆ ಪುಸ್ತಕ ಮತ್ತು ಇನ್ನಿತರ ಪರಿಕರಗಳನ್ನು ನೀಡಿದರು. ಬಳಿಕ ಮಾತನಾಡಿದ ಭಾರತಿ ವಿಷ್ಣುವರ್ಧನ್, ಗಿಡ-ಮರ,…

ತಾರಾ ಮೆರಗಿನೊಂದಿಗೆ ಅಂತರ ಕಾಲೇಜು ಸಾಹಿತ್ಯಕ, ಸಾಂಸ್ಕøತಿಕ ಸ್ಪರ್ಧೆಗೆ ಚಾಲನೆ
ಮೈಸೂರು

ತಾರಾ ಮೆರಗಿನೊಂದಿಗೆ ಅಂತರ ಕಾಲೇಜು ಸಾಹಿತ್ಯಕ, ಸಾಂಸ್ಕøತಿಕ ಸ್ಪರ್ಧೆಗೆ ಚಾಲನೆ

September 19, 2019

ಮೈಸೂರು,ಸೆ.18(ಪಿಎಂ)- ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮ ಪಾಲನಾ ನಿರ್ದೇಶನಾಲಯದ ವತಿ ಯಿಂದ ಹಮ್ಮಿಕೊಂಡಿರುವ 2019-20ನೇ ಸಾಲಿನ ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಸಾಹಿತ್ಯಕ ಮತ್ತು ಸಾಂಸ್ಕøತಿಕ ಸ್ಪರ್ಧೆ ಬುಧವಾರ ತಾರಾ ಮೆರಗಿನೊಂ ದಿಗೆ ಚಾಲನೆ ಪಡೆದುಕೊಂಡಿತು. ಮೈಸೂರು ವಿವಿಯ ಮಾನಸ ಗಂಗೋ ತ್ರಿಯ ಸೆನೆಟ್ ಭವನದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಸಭಾಂಗಣದಲ್ಲಿ ಏರ್ಪಡಿ ಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಚಲನಚಿತ್ರ ನಟ ಸೃಜನ್ ಲೋಕೇಶ್ ಹಾಗೂ ಚಲನಚಿತ್ರ ನಟಿ ಸೋನುಗೌಡ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿ ಸಮೂಹಕ್ಕೆ ಪುಳಕ…

ಭೋವಿ ಜನಾಂಗ ನಿಂದನೆ: ಸಚಿವ ಈಶ್ವರಪ್ಪ ಕ್ಷಮೆಯಾಚನೆಗೆ ಆಗ್ರಹ
ಮೈಸೂರು

ಭೋವಿ ಜನಾಂಗ ನಿಂದನೆ: ಸಚಿವ ಈಶ್ವರಪ್ಪ ಕ್ಷಮೆಯಾಚನೆಗೆ ಆಗ್ರಹ

September 19, 2019

ಮೈಸೂರು,ಸೆ.18(ಎಂಟಿವೈ)- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿ ಸುವ ಭರದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಭೋವಿ ಜನಾಂಗ ವನ್ನು ನಿಂದಿಸಿ ಅವಮಾನಿಸಿದ್ದು, ಕೂಡಲೇ ಸಮಾಜದ ಕ್ಷಮೆ ಯಾಚಿಸಬೇಕು. ಅಲ್ಲದೆ ಸಮಾ ಜದ ಸಾಮರಸ್ಯ ಕದಡಲು ಪ್ರಯ ತ್ನಿಸುತ್ತಿರುವ ಈಶ್ವರಪ್ಪರನ್ನು ಸಂಪುಟ ದಿಂದ ಕೈಬಿಡಬೇಕು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಒತ್ತಾಯಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಸ್. ಈಶ್ವರಪ್ಪ ಓರ್ವ ಹಿರಿಯ ರಾಜಕಾರಣಿಯಾಗಿದ್ದು, ಕೆಲವು ಶಬ್ದಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಮಾಜಿ ಸಿಎಂ…

`ಮೈಸೂರು ಪಾಕ್’ ತಮಿಳುನಾಡು ಮೂಲದ್ದು ಎಂಬ ಹೇಳಿಕೆ ಖಂಡಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ
ಮೈಸೂರು

`ಮೈಸೂರು ಪಾಕ್’ ತಮಿಳುನಾಡು ಮೂಲದ್ದು ಎಂಬ ಹೇಳಿಕೆ ಖಂಡಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

September 19, 2019

ಮೈಸೂರು, ಸೆ.18(ಪಿಎಂ)- ನೂರಕ್ಕೆ ನೂರರಷ್ಟು `ಮೈಸೂರು ಪಾಕ್’ ಮೈಸೂರಿ ನದು. ಅದಕ್ಕೆಂದೇ ಈ ಸಿಹಿಗೆ `ಮೈಸೂರು ಪಾಕ್’ ಎಂದು ಹೆಸರಿದೆ. ಕಾವೇರಿ, ಮೇಕೆದಾಟು ವಿಷಯದಲ್ಲಿ ಕ್ಯಾತೆ ತೆಗೆಯುವ ತಮಿಳುನಾಡು, ಇದೀಗ ಮೈಸೂರ್ ಪಾಕ್ ವಿಷಯದಲ್ಲೂ ತಕರಾರು ತೆಗೆದಿದೆ ಎಂದು ಅದರ ವರ್ತನೆ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ರೈಲ್ವೆ ನಿಲ್ದಾಣದ ಎದುರು ಜಮಾಯಿಸಿ ಸಾರ್ವಜನಿಕರಿಗೆ `ಮೈಸೂರ್ ಪಾಕ್’ ವಿತರಿಸುವ ಮೂಲಕ `ಮೈಸೂರ್ ಪಾಕ್’ ಎಂದೆಂದಿಗೂ…

ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಹಾಸ್ಟೆಲ್ ವಿದ್ಯಾರ್ಥಿನಿಯರ ಪ್ರತಿಭಟನೆ
ಮೈಸೂರು

ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಹಾಸ್ಟೆಲ್ ವಿದ್ಯಾರ್ಥಿನಿಯರ ಪ್ರತಿಭಟನೆ

September 19, 2019

ಮೈಸೂರು, ಸೆ.18 (ಎಸ್‍ಪಿಎನ್)-ಸಮಸ್ಯೆಗೆ ಸ್ಪಂದಿಸದ ಹಾಸ್ಟೆಲ್ ವಾರ್ಡನ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಅಮಾನತು ಗೊಳಿಸುವಂತೆ ಒತ್ತಾಯಿಸಿ ವಿದ್ಯಾರ್ಥಿನಿಯರು ಬುಧವಾರ ಆರ್.ಎಸ್. ನಾಯ್ಡುನಗರದ ಹಾಸ್ಟೆಲ್ ಆವರಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಮೈಸೂರು ಆರ್.ಎಸ್.ನಾಯ್ಡುನಗರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ (ಪದವಿ ಮತ್ತು ಪಿಯುಸಿ) ವಿದ್ಯಾರ್ಥಿನಿಯರ ಹಾಸ್ಟೆಲ್ ಹಾಗೂ ಕರ್ತವ್ಯ ನಿರತ ಮಹಿಳಾ ಹಾಸ್ಟೆಲ್‍ನ ಮಹಿಳೆಯರು ಜಿಲ್ಲಾಡಳಿತ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಿನನಿತ್ಯ ಬಳಸುವ ಅಕ್ಕಿ,…

ಗಾಂಜಾ ಮಾರಾಟಗಾರ, ಮನೆಗಳ್ಳನ ಬಂಧನ
ಮೈಸೂರು

ಗಾಂಜಾ ಮಾರಾಟಗಾರ, ಮನೆಗಳ್ಳನ ಬಂಧನ

September 19, 2019

ಮೈಸೂರು,ಸೆ.18(ವೈಡಿಎಸ್)-ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಹಾಗೂ ಮನೆಗಳ್ಳನೋರ್ವನನ್ನು ಮಂಡಿ ಪೊಲೀಸರು ಬಂಧಿಸಿ ದ್ದಾರೆ. ಮೊದಲ ಪ್ರಕರಣದಲ್ಲಿ ನಂಜನಗೂಡು ನಿವಾಸಿ ಆನಂದ (31) ಬಂಧಿತ ಆರೋಪಿ. ಮಂಡಿ ಮೊಹಲ್ಲಾದ ಅಕ್ಬರ್ ರಸ್ತೆಯ ದಿನೇಶ್ ಜ್ಯುವೆಲರ್ಸ್ ಬಳಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾನೆಂಬ ಮಾಹಿತಿ ಮೇರೆಗೆ ಪೊಲೀಸರು ಆನಂದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ 2017ರಲ್ಲಿ ಕೂರ್ಗಳ್ಳಿ ಮತ್ತು ನಾಯ್ಡುನಗರದ ಮನೆಯೊಂದರಲ್ಲಿ ಬೀಗ ಮುರಿದು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತನಿಂದ 4.38 ಲಕ್ಷ…

1 820 821 822 823 824 1,611
Translate »