ತಾರಾ ಮೆರಗಿನೊಂದಿಗೆ ಅಂತರ ಕಾಲೇಜು ಸಾಹಿತ್ಯಕ, ಸಾಂಸ್ಕøತಿಕ ಸ್ಪರ್ಧೆಗೆ ಚಾಲನೆ
ಮೈಸೂರು

ತಾರಾ ಮೆರಗಿನೊಂದಿಗೆ ಅಂತರ ಕಾಲೇಜು ಸಾಹಿತ್ಯಕ, ಸಾಂಸ್ಕøತಿಕ ಸ್ಪರ್ಧೆಗೆ ಚಾಲನೆ

September 19, 2019

ಮೈಸೂರು,ಸೆ.18(ಪಿಎಂ)- ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮ ಪಾಲನಾ ನಿರ್ದೇಶನಾಲಯದ ವತಿ ಯಿಂದ ಹಮ್ಮಿಕೊಂಡಿರುವ 2019-20ನೇ ಸಾಲಿನ ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಸಾಹಿತ್ಯಕ ಮತ್ತು ಸಾಂಸ್ಕøತಿಕ ಸ್ಪರ್ಧೆ ಬುಧವಾರ ತಾರಾ ಮೆರಗಿನೊಂ ದಿಗೆ ಚಾಲನೆ ಪಡೆದುಕೊಂಡಿತು.

ಮೈಸೂರು ವಿವಿಯ ಮಾನಸ ಗಂಗೋ ತ್ರಿಯ ಸೆನೆಟ್ ಭವನದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಸಭಾಂಗಣದಲ್ಲಿ ಏರ್ಪಡಿ ಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಚಲನಚಿತ್ರ ನಟ ಸೃಜನ್ ಲೋಕೇಶ್ ಹಾಗೂ ಚಲನಚಿತ್ರ ನಟಿ ಸೋನುಗೌಡ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿ ಸಮೂಹಕ್ಕೆ ಪುಳಕ ನೀಡಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಸೃಜನ್ ಲೋಕೇಶ್, ಮೈಸೂರು ಸ್ವಚ್ಛ ನಗರ. ಇದಕ್ಕಾಗಿ ದೇಶದಲ್ಲೇ ಮೊದಲ ಸ್ಥಾನ ಪಡೆ ದಿತ್ತು. ಆದರೆ ಈಗ ಆ ಸ್ಥಾನದಿಂದ ವಂಚಿತ ವಾಗಿದ್ದು, ಮತ್ತೆ ಪ್ರಥಮ ಸ್ಥಾನ ಗಳಿಸಲು ವಿದ್ಯಾರ್ಥಿ ಸಮೂಹ ಅಗತ್ಯ ಸಹಕಾರ ನೀಡಬೇಕು. ಪ್ಲಾಸ್ಟಿಕ್ ಬಳಕೆಯಿಂದ ಮುಕ್ತವಾಗಿ ಪರಿಸರ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಂದಾಜು 1 ಕೋಟಿ ಜನಸಂಖ್ಯೆ ಹೊಂದಿ ರುವ ಬೃಹತ್ ಬೆಂಗಳೂರಿನಲ್ಲಿ ಪ್ರತಿನಿತ್ಯ ಶೇ.40ರಷ್ಟು ಆಹಾರ ಪದಾರ್ಥ ಪೋಲು ಮಾಡಲಾಗುತ್ತಿರುವ ಅಂಶ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಎಲ್ಲವೂ ಯಾಂತ್ರೀಕರಣಗೊಂಡಿದ್ದು, ಆಹಾರ ಉತ್ಪಾದನೆಗೂ ಯಂತ್ರಗಳ ಬಳಕೆಯೇ ಹೆಚ್ಚಿದೆ. ಆದರೆ ನಮ್ಮ ದೇಶದ ರೈತರು ಬಹು ತೇಕ ಯಂತ್ರೋಪಕರಣಗಳ ಬಳಕೆ ಮಾಡದೇ ದೇಹ ದಣಿಸಿ ಶ್ರಮದಿಂದ ಬೆಳೆ ಬೆಳೆಯು ತ್ತಾರೆ. ಹೀಗಾಗಿ ನಾವು ಅನ್ನದ ಮಹತ್ವ ಅರಿತು ಆಹಾರ ಪದಾರ್ಥ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಜಾಗತಿಕ ತಾಪಮಾನದ ಪರಿಣಾಮ ಜಗತ್ತಿನ ಅತೀ ಎತ್ತರದ ಮೌಂಟ್ ಎವರೆಸ್ಟ್ ಪರ್ವತ 16 ಇಂಚು ಕಡಿಮೆಯಾಗಿದೆ ಎನ್ನಲಾಗಿದೆ. ಹೀಗಾಗಿ ಪರಿಸರಕ್ಕೆ ಪೂರಕ ವಾಗಿ ನಮ್ಮ ಚಟುವಟಿಕೆಗಳನ್ನು ರೂಢಿಸಿ ಕೊಳ್ಳಬೇಕಿದೆ ಎಂದರಲ್ಲದೆ, ನಾನು ನಾಯಕ ನಟನಾಗಿ ಅಭಿನಯಿರುವ `ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾ ಇದೇ ಅಕ್ಟೋಬರ್‍ನಲ್ಲಿ ಬಿಡು ಗಡೆಯಾಗುತ್ತಿದ್ದು, ಚಿತ್ರ ನೋಡಿ ಪ್ರೋತ್ಸಾ ಹಿಸುವಂತೆ ಮನವಿ ಮಾಡಿದರಲ್ಲದೆ, ನ.20 ರಂದು ಚಿತ್ರದ ಟ್ರೇಲರ್ ಅನ್ನು ನಟ ದರ್ಶನ್ ಬಿಡುಗಡೆಗೊಳಿಸಲಿದ್ದಾರೆ ಎಂದರು.

ಇದಕ್ಕೂ ಮುನ್ನ ಮಾನಸ ಗಂಗೋ ತ್ರಿಯ ದಕ್ಷಿಣ ದ್ವಾರದ ಕುವೆಂಪು ಪ್ರತಿಮೆ ಬಳಿಯಿಂದ ಸೆನೆಟ್ ಭವನದವರೆಗೆ ಸಾಂಸ್ಕøತಿಕ ಜಾಥಾ ನಡೆಸಲಾಯಿತು. ಸೆ.20ರವರೆಗೆ 3 ದಿನಗಳ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳು ನಡೆಯಲಿವೆ. ಸೆ.20ರಂದು ಸಂಜೆ 4ಕ್ಕೆ ಮಾನಸಗಂಗೋತ್ರಿಯ ಮಾನವಿಕ ಸಭಾಂ ಗಣದಲ್ಲಿ ಸಮಾರಂಭ ನಡೆಯಲಿದ್ದು, ಚಲನಚಿತ್ರ ಹಾಗೂ ಕಿರುತೆರೆ ನಟಿ ಅಪರ್ಣ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್, ಆಡ ಳಿತಾಂಗ ಕುಲಸಚಿವ ಪ್ರೊ.ಆರ್.ಶಿವಪ್ಪ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲ ಯದ ನಿದೇಶಕ ಡಾ.ಸಿ.ರಾಮಸ್ವಾಮಿ ಮತ್ತಿತರರು ಹಾಜರಿದ್ದರು.

Translate »