ಭೋವಿ ಜನಾಂಗ ನಿಂದನೆ: ಸಚಿವ ಈಶ್ವರಪ್ಪ ಕ್ಷಮೆಯಾಚನೆಗೆ ಆಗ್ರಹ
ಮೈಸೂರು

ಭೋವಿ ಜನಾಂಗ ನಿಂದನೆ: ಸಚಿವ ಈಶ್ವರಪ್ಪ ಕ್ಷಮೆಯಾಚನೆಗೆ ಆಗ್ರಹ

September 19, 2019

ಮೈಸೂರು,ಸೆ.18(ಎಂಟಿವೈ)- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿ ಸುವ ಭರದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಭೋವಿ ಜನಾಂಗ ವನ್ನು ನಿಂದಿಸಿ ಅವಮಾನಿಸಿದ್ದು, ಕೂಡಲೇ ಸಮಾಜದ ಕ್ಷಮೆ ಯಾಚಿಸಬೇಕು. ಅಲ್ಲದೆ ಸಮಾ ಜದ ಸಾಮರಸ್ಯ ಕದಡಲು ಪ್ರಯ ತ್ನಿಸುತ್ತಿರುವ ಈಶ್ವರಪ್ಪರನ್ನು ಸಂಪುಟ ದಿಂದ ಕೈಬಿಡಬೇಕು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಒತ್ತಾಯಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಸ್. ಈಶ್ವರಪ್ಪ ಓರ್ವ ಹಿರಿಯ ರಾಜಕಾರಣಿಯಾಗಿದ್ದು, ಕೆಲವು ಶಬ್ದಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಮಾಜಿ ಸಿಎಂ ಅವರನ್ನು ಟೀಕಿಸಲು ಒಂದು ಸಮಾಜದ ಹೆಸ ರನ್ನು ಬಳಕೆ ಮಾಡಿದ್ದು ಸರಿಯಲ್ಲ. ಇದು ಎಸ್ಸಿ, ಎಸ್ಟಿ ಕಾಯಿದೆಯಡಿ ಪ್ರಕರಣ ದಾಖಲಿಸಬಹುದಾದ ಅಪರಾಧ ವಾಗಿದೆ. ಈಶ್ವರಪ್ಪ ಬಳಸಿರುವ ಪದವನ್ನು ಕೂಡಲೇ ವಾಪಸ್ಸು ಪಡೆದು, ಬಹಿರಂಗವಾಗಿ ಸಮಾಜದ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ವತಿ ಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕರ್ನಾಟಕದಲ್ಲಿ ಬಸವಣ್ಣ, ಕನಕದಾಸರು ಹುಟ್ಟಿದ್ದಾರೆ. ಇದೊಂದು ಪ್ರಗತಿಪರ ರಾಜ್ಯವಾಗಿದೆ. ಈಶ್ವರಪ್ಪನವರು ಕನಕದಾಸರ ಕೀರ್ತನೆಗಳನ್ನಾದರೂ ನಿತ್ಯ ಮೂರು ಸಾಲು ಓದಲಿ. ಈ ಹಿಂದೆ ಹಲವು ಬಾರಿ ಬಾಲಿಶವಾಗಿ ಮಾತ ನಾಡಿದ್ದಾರೆ. ಈಗ ತಾವೊಬ್ಬರು ಮಂತ್ರಿ ಎಂಬುದನ್ನು ಅರಿತು ಸಾರ್ವಜನಿಕವಾಗಿ ಘನತೆಯಿಂದ ನಡೆದು ಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಘ ಪರಿವಾರ ಮೌನ ಮುರಿಯಲಿ: ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅವರನ್ನು ಪಾವಗಡ ತಾಲೂಕಿನ ಗೊಲ್ಲರಹಟ್ಟಿ ಪ್ರವೇಶಿಸಲು ಬಿಡದೆ ಅಸ್ಪೈಶ್ಯತೆ ಆಚರಿಸಿರುವ ಬಗ್ಗೆ ಹಿಂದೂ ಸಂಘಟನೆಗಳು, ಆರ್‍ಎಸ್‍ಎಸ್, ಭಜರಂಗ ದಳದವರು ಮೌನಕ್ಕೆ ಶರಣಾ ಗಿರುವುದನ್ನು ಗಮನಿಸಿದರೆ, ಅಸ್ಪøಶ್ಯತೆಗೆ ಕುಮ್ಮಕ್ಕು ನೀಡು ತ್ತಿದ್ದಾರೆಂಬ ಅನುಮಾನ ಕಾಡುತ್ತಿದೆ. ಇಂತಹ ಅಸ್ಪೈಶ್ಯತೆ ಆಚರಣೆಗಳಿಂದಲೇ ದಲಿತರು ಹಿಂದೂ ಧರ್ಮ ತ್ಯಜಿಸಿ ಬೇರೆ ಧರ್ಮಕ್ಕೆ ಮತಾಂತರವಾದಾಗ ದಾಳಿ ನಡೆಸುವ ಹಿಂದೂ ಸಂಘಟನೆಗಳು ಈಗೇಕೆ ಸುಮ್ಮನಿವೆ. ಅಂದರೆ ಈ ವ್ಯವಸ್ಥೆ ಹೀಗೆಯೇ ಮುಂದುವರೆಯಬೇಕು ಎಂಬುದು ಅವರ ಉz್ದÉೀಶ? ಪೇಜಾವರ ಶ್ರೀಗಳು ಅಲ್ಲಿ ಹೋಗಿ ಸಮಾಜ ಉದ್ಧಾರ ಮಾಡಬೇಕು. ಸಂಸದ ವಿ.ಶ್ರೀನಿವಾಸ ಪ್ರಸಾದ್ ಕೂಡ ಇದರ ಬಗ್ಗೆ ಮಾತನಾಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಅಸ್ಪೈಶ್ಯತೆ ಆಚರಣೆಯನ್ನು ಎಲ್ಲಾ ಪಕ್ಷಗಳೂ ಖಂಡಿಸಬೇಕಾಗಿದೆ. ಅಸ್ಪೈಶ್ಯತೆ ಆಚರಣೆ ಗಳಿಂದಲೇ ಡಾ.ಬಿ.ಆರ್.ಅಂಬೇಡ್ಕರ್ ಹಿಂದೂ ಧರ್ಮ ಬಿಟ್ಟು ಬೌದ್ಧ ಧರ್ಮ ಸ್ವೀಕರಿಸಿದರು. ಇದು ಹೀಗೆಯೇ ಮುಂದುವರೆದರೆ ದಲಿತರು ನಿರ್ಧಾರ ತೆಗೆದುಕೊಳ್ಳು ತ್ತಾರೆ. ಬಿಜೆಪಿ ಬಂದ ಮೇಲೆ ಅಸ್ಪೈಶ್ಯತೆ ಆಚರಣೆ ಹೆಚ್ಚಾ ಗಿದೆ. ಉತ್ತರ ಪ್ರದೇಶದಲ್ಲಿ ದೌರ್ಜನ್ಯ ಹೆಚ್ಚಾಗಿ ನಡೆ ಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಭೋವಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಜಿ.ವಿ. ಸೀತಾ ರಾಮ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡ ರಾದ ಹೆಚ್.ಎ.ವೆಂಕಟೇಶ್, ಪ್ರಕಾಶ್ ಕುಮಾರ್, ಹೆಡತಲೆ ಮಂಜು, ಶಾಂತಕುಮಾರ್ ಇದ್ದರು.

Translate »