`ಮೈಸೂರು ಪಾಕ್’ ತಮಿಳುನಾಡು ಮೂಲದ್ದು ಎಂಬ ಹೇಳಿಕೆ ಖಂಡಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ
ಮೈಸೂರು

`ಮೈಸೂರು ಪಾಕ್’ ತಮಿಳುನಾಡು ಮೂಲದ್ದು ಎಂಬ ಹೇಳಿಕೆ ಖಂಡಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

September 19, 2019

ಮೈಸೂರು, ಸೆ.18(ಪಿಎಂ)- ನೂರಕ್ಕೆ ನೂರರಷ್ಟು `ಮೈಸೂರು ಪಾಕ್’ ಮೈಸೂರಿ ನದು. ಅದಕ್ಕೆಂದೇ ಈ ಸಿಹಿಗೆ `ಮೈಸೂರು ಪಾಕ್’ ಎಂದು ಹೆಸರಿದೆ. ಕಾವೇರಿ, ಮೇಕೆದಾಟು ವಿಷಯದಲ್ಲಿ ಕ್ಯಾತೆ ತೆಗೆಯುವ ತಮಿಳುನಾಡು, ಇದೀಗ ಮೈಸೂರ್ ಪಾಕ್ ವಿಷಯದಲ್ಲೂ ತಕರಾರು ತೆಗೆದಿದೆ ಎಂದು ಅದರ ವರ್ತನೆ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ರೈಲ್ವೆ ನಿಲ್ದಾಣದ ಎದುರು ಜಮಾಯಿಸಿ ಸಾರ್ವಜನಿಕರಿಗೆ `ಮೈಸೂರ್ ಪಾಕ್’ ವಿತರಿಸುವ ಮೂಲಕ `ಮೈಸೂರ್ ಪಾಕ್’ ಎಂದೆಂದಿಗೂ ರಾಜ್ಯದ ಭೌಗೋಳಿಕ ಹೆಮ್ಮೆ. ಅದು ಎಂದಿಗೂ ನಮ್ಮದೇ ಎಂದು ವಿನೂತನ ರೀತಿ ಪ್ರತಿಭಟನೆ ನಡೆಸಲಾಯಿತು.

ಇದೇ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ರಾಜ್ಯದಲ್ಲಿ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ `ಮೈಸೂರು ಪಾಕ್’ ಖ್ಯಾತಿ ಗಳಿಸಿದೆ. ಅಲ್ಲದೆ ಮೈಸೂರೇ ಇದರ ಮೂಲ ಎಂಬುದು ದಾಖಲೆಗಳಲ್ಲೂ ಇದೆ. ಆದರೆ, ತಮಿಳುನಾಡು ಮೈಸೂರು ಪಾಕ್ ನಮಗೆ ಸೇರಿದ್ದು ಎನ್ನುತ್ತಿದೆ. ಕೆಲ ಕಿಡಿಗೇಡಿಗಳು ಮೈಸೂರ್ ಪಾಕ್ ಜನ್ಮಸ್ಥಳ ತಮಿಳುನಾಡು ಎಂದು ವಾದಿಸುತ್ತಿದ್ದಾರೆ. ಹೆಸರಿನಲ್ಲೇ ಮೈಸೂರು ಇರುವುದರಿಂದ ಎಂದೆಂದಿಗೂ ಮೈಸೂರ್ ಪಾಕ್ ನಮ್ಮದೇ. ಅದು ಎಂದಿಗೂ ತಮಿಳುನಾಡಿನದ್ದಲ್ಲ ಎಂದರು.ಕನ್ನಡಪರ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »