ಗಾಂಜಾ ಮಾರಾಟಗಾರ, ಮನೆಗಳ್ಳನ ಬಂಧನ
ಮೈಸೂರು

ಗಾಂಜಾ ಮಾರಾಟಗಾರ, ಮನೆಗಳ್ಳನ ಬಂಧನ

September 19, 2019

ಮೈಸೂರು,ಸೆ.18(ವೈಡಿಎಸ್)-ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಹಾಗೂ ಮನೆಗಳ್ಳನೋರ್ವನನ್ನು ಮಂಡಿ ಪೊಲೀಸರು ಬಂಧಿಸಿ ದ್ದಾರೆ. ಮೊದಲ ಪ್ರಕರಣದಲ್ಲಿ ನಂಜನಗೂಡು ನಿವಾಸಿ ಆನಂದ (31) ಬಂಧಿತ ಆರೋಪಿ. ಮಂಡಿ ಮೊಹಲ್ಲಾದ ಅಕ್ಬರ್ ರಸ್ತೆಯ ದಿನೇಶ್ ಜ್ಯುವೆಲರ್ಸ್ ಬಳಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾನೆಂಬ ಮಾಹಿತಿ ಮೇರೆಗೆ ಪೊಲೀಸರು ಆನಂದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ 2017ರಲ್ಲಿ ಕೂರ್ಗಳ್ಳಿ ಮತ್ತು ನಾಯ್ಡುನಗರದ ಮನೆಯೊಂದರಲ್ಲಿ ಬೀಗ ಮುರಿದು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತನಿಂದ 4.38 ಲಕ್ಷ ಮೌಲ್ಯದ 130 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಡಿ ಪೆÇಲೀಸರು ಬಂಧಿಸಿ, 157 ಗ್ರಾಂ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ. ಮಂಡಿ ಮೊಹಲ್ಲಾದ ಎಂಕೆಡಿಕೆ ರಸ್ತೆ ನಿವಾಸಿ ಸೈಯದ್ ಸದ್ದಾಂ (21) ಬಂಧಿತ ಆರೋಪಿ. ಸೋಮವಾರ ಸಂಜೆ ತಮ್ಮ ಮನೆಯ ಮುಂದೆ ಕವರ್ ಹಿಡಿದುಕೊಂಡು ಅನುಮಾ ನಾಸ್ಪದವಾಗಿ ಓಡಾಡುತ್ತಿದ್ದನು. ಇದನ್ನು ಕಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ಕವರ್ ಪರಿಶೀಲಿಸಿದಾಗ 157 ಗ್ರಾಂ ಗಾಂಜಾ ಕಂಡು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಂಡಿ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »