ಮೌಲ್ಯಯುತ ಶಿಕ್ಷಣ ನೀಡುವ ಭವನ್ಸ್ ಪ್ರಿಯಂವದಾ ಬಿರ್ಲಾ ಸಂಸ್ಥೆ
ಮೈಸೂರು

ಮೌಲ್ಯಯುತ ಶಿಕ್ಷಣ ನೀಡುವ ಭವನ್ಸ್ ಪ್ರಿಯಂವದಾ ಬಿರ್ಲಾ ಸಂಸ್ಥೆ

September 19, 2019

ಮೈಸೂರು, ಸೆ.18(ಆರ್‍ಕೆಬಿ)- ಮೈಸೂ ರಿನ ವಿಜಯನಗರ 1ನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನದ ಭವನ್ಸ್ ಪ್ರಿಯಂವದಾ ಬಿರ್ಲಾ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಎಐಸಿಟಿಇ (ಆಲ್‍ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿ ಕಲ್ ಎಜುಕೇಷನ್‍ನಿಂದ ಅನುಮೋದಿತ ಎರಡು ವರ್ಷಗಳ ಪಿಜಿಡಿಎಂ (ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಮ್ಯಾನೇಜ್‍ಮೆಂಟ್) ಕಾರ್ಯಕ್ರಮದ ಉದ್ಘಾಟನೆ ಬುಧವಾರ ವಿದ್ಯಾಭವನದ ಸಭಾಂಗಣದಲ್ಲಿ ನೆರವೇರಿಸಲಾಯಿತು.

ಐಟಿ ಚಾಂಪ್ಸ್ ಸಾಫ್ಟ್‍ವೇರ್ ಕಂಪನಿಯ ವ್ಯವಸ್ಥಾಪಕ ರಾಜೇಶ್ ಕುತ್ನೀಕರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರು. ಮುಖ್ಯ ಅತಿಥಿಯಾಗಿದ್ದ ಐಟಿ ಚಾಂಪ್ಸ್ ಸಾಫ್ಟ್‍ವೇರ್ ಕಂಪನಿಯ ಚೀಫ್ ಆಪರೇ ಟಿಂಗ್ ಆಫೀಸರ್ ಸಿಇ ರಘುನಂದನ್ ರಾವ್ ಮಾತನಾಡಿ, ಕೇವಲ ಅಧಿಕಾರ ಶಾಹಿ ಹಾಗೂ ಶ್ರೀಮಂತ ವರ್ಗಗಳ ಹಿಡಿತದಲ್ಲಿ ನಡೆಯುವ ಸಾಕಷ್ಟು ವಿದ್ಯಾಸಂಸ್ಥೆಗಳ ಮಧ್ಯೆ ಭಾರತೀಯ ವಿದ್ಯಾ ಭವನ ವಿಭಿನ್ನ ಶಿಕ್ಷಣ ಸಂಸ್ಥೆಯಾಗಿದೆ. ಬೇರೆ ಸಂಸ್ಥೆಗಳಿಗಿಂತ ವಿಭಿನ್ನ ರೀತಿಯಲ್ಲಿ ಮೌಲ್ಯಯುತ ಶಿಕ್ಷಣ ನೀಡುವ ಈ ಸಂಸ್ಥೆಯನ್ನು ಆಯ್ಕೆ ಮಾಡಿ ಕೊಂಡು ಪಿಜಿಡಿಎಂಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಅವರು ಶುಭ ಕೋರಿದರು.

ಹಿರಿಯ ಅನುಭವಿಗಳಾದ ಎನ್.ರಾಮಾ ನುಜ, ಡಾ.ಎ.ವಿ.ನರಸಿಂಹಮೂರ್ತಿ, ಡಾ. ಎ.ಟಿ.ಭಾಷ್ಯಂ ಅವರಂತವರು ಇರುವ ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ದೊರೆಯುತ್ತಿದೆ. ಇಲ್ಲಿ ತಯಾರಾದ ವಿದ್ಯಾರ್ಥಿಗಳಿಗೆ ಉದ್ಯೊಗ ಖಚಿತವಾಗ ಲಿದೆ ಎಂದರು. ಮೈಸೂರಿನ ಬಿಪಿಬಿಐಎಂ ಹಾಗೂ ಬೆಂಗಳೂರು ಬಿವಿಬಿ ಕೇಂದ್ರದ ಮುಖ್ಯಸ್ಥ ಎನ್.ರಾಮಾನುಜ ಅಧ್ಯಕ್ಷತೆ ವಹಿಸಿ ದ್ದರು. ಡಾ.ಎ.ಟಿ.ಭಾಷ್ಯಂ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಿಪಿಬಿ ಐಎಂ ಬೆಂಗಳೂರು ಪ್ರಾಂಶುಪಾಲ ಡಾ. ಸತ್ಯನಾರಾಯಣ ಉಪಸ್ಥಿತರಿದ್ದರು

Translate »