ಜೆಎಸ್‍ಎಸ್ ವಿಶ್ವವಿದ್ಯಾನಿಲಯಕ್ಕೆ ಮೊದಲ ಸ್ಥಾನ
ಮೈಸೂರು

ಜೆಎಸ್‍ಎಸ್ ವಿಶ್ವವಿದ್ಯಾನಿಲಯಕ್ಕೆ ಮೊದಲ ಸ್ಥಾನ

September 19, 2019

ಮೈಸೂರು, ಸೆ. 18- ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್ ವರದಿ ಬಿಡುಗಡೆಯಾಗಿದ್ದು, ಮೈಸೂರಿನ ಜೆಎಸ್‍ಎಸ್ ವಿಶ್ವವಿದ್ಯಾನಿಲಯ ಮತ್ತೊಮ್ಮೆ ಯುವ ವಿಶ್ವವಿದ್ಯಾನಿಲಯಗಳ ವಿಭಾಗ ದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಮಂಗಳವಾರ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾ ಯಣ ಅವರು ಔಪಚಾರಿಕವಾಗಿ ಕರ್ನಾ ಟಕ ರಾಜ್ಯ ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್ ವರದಿ-2019 ಬಿಡುಗಡೆ ಮಾಡಿದರು.

ವರದಿಯಲ್ಲಿ ನಾಲ್ಕು ಉನ್ನತ ವಿಭಾಗ ಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಸ್ಥಾನವನ್ನು ಪಟ್ಟಿ ಮಾಡಲಾಗಿದೆ.

ಹಿರಿಯ ವಿಶ್ವವಿದ್ಯಾನಿಲಯಗಳು: 10 ವರ್ಷಗಳಿಗೂ ಹಿಂದಿನಿಂದ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳು, ಯಂಗ್ ಯೂನಿವರ್ಸಿಟೀಸ್ : 5ರಿಂದ 10 ವರ್ಷಗಳ ನಡುವಿನ ಅವಧಿಯಲ್ಲಿ ಆರಂಭಗೊಂಡು ಕಾರ್ಯನಿರ್ವಹಿಸು ತ್ತಿರುವ ಶಿಕ್ಷಣ ಸಂಸ್ಥೆಗಳು, ನೂತನ ವಿಶ್ವವಿದ್ಯಾನಿಲಯಗಳು: ಐದು ವರ್ಷ ಗಳಿಂದೀಚೆಗೆ ಕಾರ್ಯಾರಂಭಗೊಂಡ ಶಿಕ್ಷಣ ಸಂಸ್ಥೆಗಳು ಹಾಗೂ ತಜ್ಞ ವಿಶ್ವ ವಿದ್ಯಾನಿಲಯಗಳು : ಶಿಕ್ಷಣ ಸಂಸ್ಥೆಗಳು ಒಂದು ವಿಶೇಷ ವಿಷಯದಲ್ಲಿ ಪರಿಣತಿ ಪಡೆದಿರುವಂತಹವವು ಎಂದು ಪ್ರತ್ಯೇಕಿಸಿ ರ್ಯಾಂಕಿಂಗ್ ನೀಡಲಾಗುತ್ತಿದೆ.

2017ರ ರ್ಯಾಂಕಿಂಗ್ ಪಟ್ಟಿಯಲ್ಲಿಯೂ ಜೆಎಸ್‍ಎಸ್ ವಿಶ್ವವಿದ್ಯಾನಿಲಯ ಪ್ರಥಮ ಸ್ಥಾನ ಗಳಿಸಿತ್ತು. ಜೆಎಸ್‍ಎಸ್ ಮಹಾ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ. ಬೆಟಸೂರ ಮಠ ಅವರು ಬುಧವಾರ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ವಿಶ್ವ ವಿದ್ಯಾನಿಲಯವು ಪ್ರತಿ ಬಾರಿಯೂ ತನ್ನನ್ನು ತಾನು ಉತ್ತಮಗೊಳಿಸಲು ಮತ್ತು ಪ್ರಾರಂ ಭದ ಸ್ಥಿತಿಯನ್ನು ಕಾಪಾಡಿಕೊಳ್ಳಲು ಶ್ರಮಿಸುತ್ತಿತ್ತು ಎಂದು ಹೇಳಿದರು.
ಜೆಎಸ್‍ಎಸ್ ವಿಶ್ವವಿದ್ಯಾನಿಲಯ ಕುಲಾ ಧಿಪತಿ ಪ್ರೊ. ಬಿ.ಸುರೇಶ್ ಮಾತನಾಡಿ, ನಮ್ಮ ವಿಶ್ವವಿದ್ಯಾನಿಲಯ ಮೊದಲನೇ ಸ್ಥಾನ ಪಡೆದುಕೊಂಡಿರುವುದು ಇದು ಎರಡನೇ ಬಾರಿಯಾಗಿದೆ. ಈ ಸ್ಥಾನ ವನ್ನು ಮುಂದೆಯೂ ಉಳಿಸಿಕೊಳ್ಳಲು ಶ್ರಮಿಸುವುದಾಗಿ ಅವರು ಹೇಳಿದರು.

ಯುಎಎಸ್ 882/1000 ಅಂಕ ಗಳಿಸಿ 4.65 ಪಾಯಿಂಟ್ಸ್ ಪಡೆದುಕೊಂಡಿದೆ. ಜೆಎಸ್‍ಎಸ್ ವಿಶ್ವವಿದ್ಯಾನಿಲಯ 847/1000 ಅಂಕ ಪಡೆದು 4.46 ಪಾಯಿಂಟ್ಸ್ ಪಡೆದುಕೊಂಡಿದೆ. ಆದರೆ ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿಯು ಸ್ಥಾಪನೆ ಗೊಂಡ ವಿಶ್ವವಿದ್ಯಾನಿಲಯಗಳ ವಿಭಾಗ ದಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಸಿಜಿಪಿಎ ನಲ್ಲಿ 4.43 ಪಾಯಿಂಟ್ಸ್ ಗಳಿಸಿದೆ.
“ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಯಾವಾಗಲೂ ಗುಣಮಟ್ಟ ಮತ್ತು ಉತ್ಕøಷ್ಟ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಾರೆ. ಈ ಎರಡು ಅಜೆಂಡಾಗಳು ಜೆಎಸ್‍ಎಸ್ ವಿಶ್ವವಿದ್ಯಾ ನಿಲಯ ಒಂದನೇ ಸ್ಥಾನ ಪಡೆದು ಕೊಳ್ಳಲು ಮಾರ್ಗಸೂಚಿಯಾಗಿವೆ’’ ಎಂದು ಪ್ರೊ. ಬಿ.ಸುರೇಶ್ ಹೇಳಿದರು.

ನೂತನ ರ್ಯಾಂಕಿಂಗ್ ಪಟ್ಟಿ ಪ್ರಕಾರ ಹಿರಿಯ ವಿಶ್ವವಿದ್ಯಾನಿಲಯಗಳ ವಿಭಾಗ ದಲ್ಲಿ ಮೈಸೂರು ವಿಶ್ವವಿದ್ಯಾನಿಲಯ 584 ಅಂಕಗಳನ್ನು ಪಡೆದುಕೊಂಡು 9ನೇ ಸ್ಥಾನ ಪಡೆದುಕೊಂಡಿದೆ. ಅಚ್ಚರಿ ಎಂದರೆ, ಕುವೆಂಪು ಮತ್ತು ಕರ್ನಾಟಕ ವಿಶ್ವ ವಿದ್ಯಾನಿಲಯಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ರ್ಯಾಂಕ್ ಪಡೆದು ಕೊಂಡಿವೆ.

“ಎರಡು ಸೂಚಕಗಳಲ್ಲಿ ಸಂಶೋಧನೆ ಮತ್ತು ಮೂಲಸೌಕರ್ಯದಲ್ಲಿ ಕಡಿಮೆ ಅಂಕ ಪಡೆದುಕೊಂಡಿದೆ. ಆದ್ದರಿಂದ 1000ಕ್ಕೆ 484 ಅಂಕ ಪಡೆದಿದ್ದೇವೆ. ಆದರೆ ಮಂಗಳೂರು ವಿವಿ 612 ಅಂಕ ಮತ್ತು ಬೆಂಗಳೂರು 610 ಅಂಕ ಪಡೆದು ಕೊಂಡಿವೆ ಎಂದರು. ಇದಕ್ಕೆ ಮುಖ್ಯ ಕಾರಣ ಏನು ಎಂಬ ಪ್ರಶ್ನೆಗೆ 2017ರಲ್ಲಿ ಯುಒಎಂ ಒದಗಿಸಿದ ಸಂಶೋಧನೆಗೆ ಸಂಬಂಧಿಸಿದ ಮಾಹಿತಿಯು ಸರಿಯಾ ಗಿಲ್ಲ ಎಂದು ಹೇಳಿದರು.

4ರಿಂದ 9ನೇ ಸ್ಥಾನಕ್ಕಿಳಿದ ಮೈಸೂರು ವಿಶ್ವವಿದ್ಯಾನಿಲಯ
ಮೈಸೂರು,ಸೆ.18-ಮೈಸೂರು ವಿಶ್ವವಿದ್ಯಾನಿಲಯವು ದೇಶದ ವಿಶ್ವವಿದ್ಯಾ ನಿಲಯ ಗಳ ರ್ಯಾಂಕಿಂಗ್‍ನಲ್ಲಿ ರಾಜ್ಯದಲ್ಲಿ ಉನ್ನತ ಸ್ಥಾನವನ್ನು ಉಳಿಸಿಕೊಂಡಿದ್ದರೂ, ದುರ ದೃಷ್ಟವಶಾತ್ ಕರ್ನಾಟಕ ರಾಜ್ಯ ವಿಶ್ವ ವಿದ್ಯಾ ನಿಲಯಗಳ ರ್ಯಾಂಕಿಂಗ್ ಪಟ್ಟಿಯಲ್ಲಿ 4ನೇ ಸ್ಥಾನದಿಂದ ಒಂಬತ್ತನೇ ಸ್ಥಾನಕ್ಕೆ ಕುಸಿದಿ ರುವುದು ಬೇಸರದ ಸಂಗತಿ ಎಂದರು. ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಹೇಳಿದರು. `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಮೈಸೂರು ವಿಶ್ವವಿದ್ಯಾನಿಲಯವು ಕಳೆದ ಬಾರಿ 4ನೇ ಸ್ಥಾನದಲ್ಲಿತ್ತು. ಈ ಬಾರಿ 9ನೇ ಸ್ಥಾನಕ್ಕೆ ಕುಸಿದಿರುವುದು ನಿರಾಸೆಯುಂಟು ಮಾಡಿದೆ. ಆದರೆ ಈ ಹಿನ್ನೆಲೆಯಲ್ಲಿ ತಮಗೆ ಇನ್ನೂ ಉತ್ತಮವಾಗಿ ಕೆಲಸ ಮಾಡಲು ಪ್ರೇರೇಪಿಸಿದ್ದು ಮತ್ತು ಮಾರ್ಗದರ್ಶನ ನೀಡಿದಂತಾಗಿದೆ ಎಂದು ಹೇಳಿದರು.

9ರಿಂದ 11ನೇ ಸ್ಥಾನಕ್ಕೆ ಕುಸಿದ ಸಂಗೀತ ವಿವಿ
ವಿಶೇಷ ವಿವಿಗಳ ಪಟ್ಟಿಯಲ್ಲಿ ಈ ಮೊದಲು 9ನೇ ಸ್ಥಾನದಲ್ಲಿದ್ದ ಮೈಸೂರಿನಲ್ಲಿರುವ ‘ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ’ (ಸಂಗೀತ ವಿವಿ) 2019ರ ರ್ಯಾಂಕಿಂಗ್ ಪಟ್ಟಿಯಲ್ಲಿ ವಿಶೇಷ ವಿವಿಗಳ ವಿಭಾಗದಲ್ಲಿ 11ನೇ ಸ್ಥಾನಕ್ಕೆ ಕುಸಿದಿದೆ. 2017ರ ರ್ಯಾಂಕಿಂಗ್ ಪಟ್ಟಿಯಲ್ಲಿ 333/1000 ಅಂಕ ಪಡೆದಿದ್ದರೂ 9ನೇ ಸ್ಥಾನದಲ್ಲಿದ್ದ ಸಂಗೀತ ವಿವಿ ಈ ಬಾರಿ 541/1000 ಅಂಕಗಳನ್ನು ಗಳಿಸಿಯೂ 11ನೇ ರ್ಯಾಂಕ್‍ಗೆ ಇಳಿಕೆಯಾಗಿದೆ. ವಾಸ್ತವವಾಗಿ ಸಂಗೀತ ವಿವಿ 2 ಸ್ಟಾರ್‍ಗಳ ಮಟ್ಟದಿಂದ 3 ಸ್ಥಾರ್‍ಗಳ ಮಟ್ಟಕ್ಕೇರಿದೆ. ಈ ಬಾರಿ ಅಂಕ ಗಳಿಕೆಯ ಲ್ಲಿಯೂ ಗಣನೀಯ ಸುಧಾರಣೆ ಆಗಿದೆ. ಆದರೆ, ‘ವಿಶೇಷ ವಿವಿಗಳ’ ವಿಭಾಗದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿವಿಗಳೂ ಸೇರ್ಪಡೆಯಾಗಿದ್ದರಿಂದ ನಮ್ಮ ಸಂಗೀತ ವಿವಿಯು ರ್ಯಾಂಕಿಂಗ್ ಪಟ್ಟಿಯಲ್ಲಿ ಕೆಳಕ್ಕಿಳಿಯುವಂತೆ ಆಗಿದೆ ಎಂದು ಸಂಗೀತ ವಿವಿ ಕುಲಪತಿ ನಾಗೇಶ್ ವಿ.ಬೆಟ್ಟಕೋಟೆ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »