ರಾಷ್ಟ್ರಮಟ್ಟದಲ್ಲಿ ಮುಕ್ತ ವಿವಿ ಸಂಘ ಅಗತ್ಯ
ಮೈಸೂರು

ರಾಷ್ಟ್ರಮಟ್ಟದಲ್ಲಿ ಮುಕ್ತ ವಿವಿ ಸಂಘ ಅಗತ್ಯ

September 20, 2019

ಮೈಸೂರು,ಸೆ.8(ಎಂಕೆ)- ರಾಷ್ಟ್ರಮಟ್ಟ ದಲ್ಲಿ `ಮುಕ್ತ ವಿಶ್ವವಿದ್ಯಾನಿಲಯಗಳ ಸಂಘ’ ವನ್ನು ಸ್ಥಾಪಿಸುವುದರಿಂದ ಬಹುತೇಕ ಮುಕ್ತ ವಿವಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ ಎಂದು ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‍ಒಯು) ಕುಲಪತಿ ಡಾ.ಎಸ್. ವಿದ್ಯಾಶಂಕರ್ ಸಲಹೆ ನೀಡಿದರು.

ಮುಕ್ತ ಗಂಗೋತ್ರಿ ಆವರಣದಲ್ಲಿರುವ ಕಾವೇರಿ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ಮುಕ್ತ ವಿಶ್ವವಿದ್ಯಾಲಯಗಳ ಕುಲಪತಿ ಗಳ ಸಮ್ಮೇಳನದ ಸಮಾರೋಪ ಸಮಾ ರಂಭದಲ್ಲಿ ಮಾತನಾಡಿದ ಅವರು, ಸಮಸ್ಯೆ ಗಳನ್ನು ಬಗೆಹರಿಸಿದರೆ ಮಾತ್ರ ಮುಕ್ತ ವಿವಿ ಗಳ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಹೆಚ್ಚಲಿದೆ ಎಂದು ಹೇಳಿದರು.

ಕೆಲವು ವಿವಿಗಳು ಆನ್‍ಲೈನ್ ಕೋರ್ಸ್ ಗಳನ್ನು ಆರಂಭಿಸಿವೆ. ಕೆಎಸ್‍ಒಯು ಕೂಡಾ ಆನ್‍ಲೈನ್ ಕೋರ್ಸ್‍ಗಳನ್ನು ಆರಂಭಿ ಸಲು ಚಿಂತನೆ ನಡೆಸಿದೆ. ವಿವಿಗಳ ನಡುವೆ ಕೊಡು-ಕೊಳ್ಳುವಿಕೆ ಹೆಚ್ಚಬೇಕು. ಇತರ ವಿವಿಗಳಲ್ಲಿ ಕಾಣಸಿಗುವ ಹೊಸ ವಿಚಾರ ಗಳಲ್ಲಿ ಅಳವಡಿಸಿಕೊಂಡರೆ ಕೆಎಸ್‍ಒಯು ದೇಶದ ಅಗ್ರಮಾನ್ಯ ಮುಕ್ತ ವಿವಿಯಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಎರಡು ದಿನಗಳ ಈ ಸಮ್ಮೇಳನದಲ್ಲಿ ಪ್ರಾಧ್ಯಾಪಕರಿಗೆ ಹಲವು ವಿಚಾರಗಳನ್ನು ತಿಳಿಯಲು ಸಾಧ್ಯವಾಯಿತು. ಹೊಸ ಕೋರ್ಸ್‍ಗಳ ಬಗ್ಗೆ ಅರಿಯುವ ಅವಕಾಶ ವನ್ನು ಕಲ್ಪಿಸಿಕೊಟ್ಟಿತು. ಇಲ್ಲಿ ಚರ್ಚಿಸಿದ ವಿಷಯಗಳನ್ನು ದೇಶದ ಎಲ್ಲ ಮುಕ್ತ ವಿವಿ ಗಳ ಜತೆ ಹಂಚಿಕೊಳ್ಳಲಾಗುವುದು ಎಂದರು.

ಭೋಪಾಲ್‍ನ ಮಧ್ಯಪ್ರದೇಶ ಮುಕ್ತ ವಿವಿ ಕುಲಪತಿ ಪೆÇ್ರ.ಜಯಂತ್ ಸೊನ್ವಾಲ್ಕರ್ ಮಾತನಾಡಿ, ದೂರ ಶಿಕ್ಷಣಕ್ಕೆ ಹಿಂದೆಂದಿ ಗಿಂತಲೂ ಹೆಚ್ಚಿನ ಮಹತ್ವವಿದೆ. ದೂರ ಶಿಕ್ಷಣ ಕೋರ್ಸ್‍ಗಳನ್ನು ನೀಡುವ ಜರ್ಮನಿ ಮತ್ತು ಇಂಗ್ಲೆಂಡ್‍ನ ಹಲವು ವಿವಿಗಳು ಭಾರತದ ವಿದ್ಯಾರ್ಥಿಗಳನ್ನೇ ನೆಚ್ಚಿಕೊಂ ಡಿವೆ. ನಮ್ಮಲ್ಲಿರುವ ವಿವಿಗಳಲ್ಲಿ ಗುಣ ಮಟ್ಟದ ಶಿಕ್ಷಣ ಸಿಗುವುದಾದರೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ತಾನಾ ಗಿಯೇ ಹೆಚ್ಚಲಿದೆ ಎಂದು ಹೇಳಿದರು.

ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲದ ವಿಚಾರದಲ್ಲಿ ಕೆಎಸ್ ಒಯು ಇತರ ಯಾವುದೇ ವಿವಿಗಳಿಗೂ ಕಡಿಮೆಯಿಲ್ಲ. ಇಲ್ಲಿನ ಬೋಧಕ ವೃಂದ ಮತ್ತು ಸಿಬ್ಬಂದಿ ಹಿಂದೆ ಆಗಿರುವ ಲೋಪ ಗಳನ್ನು ಮರೆತು ಹೊಸ ಗುರಿ ಇಟ್ಟು ಕೊಂಡು ಕೆಲಸ ಮಾಡಬೇಕು. ಹಾಗಾ ದಲ್ಲಿ ಇನ್ನೆರಡು ವರ್ಷಗಳಲ್ಲಿ ದೇಶದ ಮುಂಚೂಣಿಯ ವಿವಿಗಳಲ್ಲಿ ಒಂದೆನಿಸ ಲಿದೆ ಎಂದರು. ವೇದಿಕೆಯಲ್ಲಿ ತಮಿಳು ನಾಡು ಮುಕ್ತ ವಿವಿ ಕುಲಪತಿ ಪೆÇ್ರ.ಕೆ. ಪಾರ್ಥಸಾರಥಿ, ಕೆಎಸ್‍ಒಯು ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

Translate »