ಇಂದು, ನಾಳೆ, ವಿವಿಧೆಡೆ ವಿದ್ಯುತ್ ನಿಲುಗಡೆ
ಮೈಸೂರು

ಇಂದು, ನಾಳೆ, ವಿವಿಧೆಡೆ ವಿದ್ಯುತ್ ನಿಲುಗಡೆ

September 19, 2019

ಮೈಸೂರು, ಸೆ.18- ಎನ್.ಆರ್ ಮೊಹಲ್ಲಾ ವಿಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯ ಮಿತ ವತಿಯಿಂದ ನಿರ್ವಹಣಾ ಕಾಮಗಾರಿಯನ್ನು ಹಮ್ಮಿ ಕೊಳ್ಳಲಾಗಿದೆ. ಸೆ.19ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಜಲಪುರಿ, ಗಾಯತ್ರಿಪುರಂ, ಜ್ಯೋತಿನಗರ, ಉದಯಗಿರಿ, ಕ್ಯಾತಮಾರನಹಳ್ಳಿ, ಶಾಂತಿನಗರ 1 ಮತ್ತು 2ನೇ ಹಂತ, ಗಣೇಶ್ ನಗರ, ಸತ್ಯನಗರ, ಮಹದೇವಪುರ ರಸ್ತೆ, ಜರ್ಮನ್ ಪ್ರೆಸ್, ಉಸ್ಮಾನಿಯಾ ಬ್ಲಾಕ್, ಗೌಸಿಯಾ ನಗರ, ರಾಘವೇಂದ್ರ ನಗರ, ಗಿರಿಯಾಬೋವಿ ಪಾಳ್ಯ, ಯರಗನಹಳ್ಳಿ, ಬನ್ನೂರು ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸೆ.19ರಂದು ಬೆಳಿಗ್ಗೆ 9.30ರಿಂದ ಸಂಜೆ 3 ಗಂಟೆಯವರೆಗೆ ಐ & ಖಿ, ರಾಣಿ ಮದ್ರಾಸ್ ಸುತ್ತಮುತ್ತ, ಶುಭಾ ಪ್ಯಾಕೇಜಿಂಗ್, ನೇಸರ ಟೆಕ್ ಮಾರ್ಕ್, ಸ್ಪೈ, ವಿ-2ಸಾಪ್ಟ್, ವರ್ಷ ಕೇಬಲ್, ರೆಕೆಟ್ ಬೆನ್‍ಸರ್, ತಿಯೋರೆಮ್ಸ್, ಲೂನಾರ್ಸ್ ಎಕ್ಸ್ ಪೋರ್ಟ್ ಹಾಗೂ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.

ಸೆ.20ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಚಾಮರಾಜಪುರಂ, ರಾಮಸ್ವಾಮಿ ವೃತ್ತ, ಬಲ್ಲಾಳ್ ವೃತ್ತ, ಗೀತಾ ರಸ್ತೆ, ಜೈನ್ ಭವನ್, ದೇವಪಾರ್ಥೀವ ರಸ್ತೆ, ಡಿ.ಸುಬ್ಬಯ್ಯ ರಸ್ತೆ, ಕಾಕರವಾಡಿ, ಬೆಸ್ತರಗೇರಿ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸೆಪ್ಟೆಂಬರ್ 20ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ತಾಯೂರು (Lift Irrigation), ಈಶ್ವರಗೌಡನಹಳ್ಳಿ, ವಡ್ಡರ ಹುಂಡಿ, ಬೀರಿಹುಂಡಿ, ಕೊಟ್ಟರಾಯನಹುಂಡಿ, ಗೆಜ್ಜಗನ ಹಳ್ಳಿ, ಕಾಹಳ್ಳಿ ಮತ್ತು ಕಲ್ಕುಂದ ವ್ಯಾಪ್ತಿಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Translate »