ಬೆಂಗಳೂರು, ಆ.9- ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್, ಶೃತಿ ಹರಿ ಹರನ್ ಅಭಿನಯದ ನಾತಿಚರಾಮಿ ಚಿತ್ರ ಗಳು ಸೇರಿದಂತೆ ಕನ್ನಡಕ್ಕೆ ಒಟ್ಟು 11 ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದು, ಕನ್ನಡ ಚಿತ್ರರಂಗದ ಇತಿ ಹಾಸದಲ್ಲೇ ಒಂದೇ ವರ್ಷದಲ್ಲಿ ಇಷ್ಟು ಪ್ರಶಸ್ತಿ ಗಳು ಬಂದಿರುವುದು ಇದೇ ಮೊದಲು. ಪ್ರತಿಷ್ಠಿತ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ನವದೆಹಲಿಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ ಡೇಕರ್ ಪ್ರಕಟಿಸಿದರು. ಪ್ರಶಸ್ತಿ ಪಟ್ಟಿ: ಅತ್ಯುತ್ತಮ ಪ್ರಾದೇಶಿಕ ಚಿತ್ರ- ನಾತಿಚರಾಮಿ,…
ಆಯುಷ್ಮಾನ್ ಖುರಾನಾ, ವಿಕ್ಕಿ ಕೌಶಲ್ ಅತ್ಯುತ್ತಮ ನಟ, ಕೀರ್ತಿ ಸುರೇಶ್ ಅತ್ಯುತ್ತಮ ನಟಿ
August 10, 2019ಬೆಂಗಳೂರು:”ಬಧಾಯಿ ಹೋ” ಚಿತ್ರದ ಅಭಿನಯಕ್ಕಾಗಿ ಆಯುಷ್ಮಾನ್ ಖುರಾನಾ ಹಾಗೂ “ಉರಿ: ದಿ ಸರ್ಜಿಕಲ್ ಸ್ಟ್ರೈಕ್’” ನಟ ವಿಕ್ಕಿ ಕೌಶಲ್ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ನಟಿ ಕೀರ್ತಿ ಸುರೇಶ್ “ಮಹಾನಟಿ” ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. “ಮಹಾನಟಿ” ಅತ್ಯುತ್ತಮ ತೆಲುಗು ಚಿತ್ರ ಪ್ರಶಸ್ತಿ ಬಾಚಿಕೊಂಡಿದ್ದರೆ ‘ಅಂಧಾ ಧುನ್’ ಚಿತ್ರಕ್ಕೆ ಅತ್ಯುತ್ತಮ ಹಿಂದಿ ಭಾಷಾ ಚಿತ್ರ ಪ್ರಶಸ್ತಿ ಲಭಿಸಿದೆ. ಚೊಚ್ಚಲ “ಉರಿ: ದಿ ಸರ್ಜಿಕಲ್ ಸ್ಟ್ರೈಕ್”ಗಾಗಿ ಆದಿತ್ಯ ಧಾರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದರೆ, “ಅಂಧಾಧುನ್”…
ಮೈಸೂರು ಜಿಲ್ಲೆಯಲ್ಲಿ ಮುಂದುವರೆದ ಪ್ರವಾಹ ಹಾವಳಿ
August 10, 2019ಮೈಸೂರು,ಆ.9(ಆರ್‍ಕೆ)-ಕೊಡಗು ಹಾಗೂ ವೈನಾಡಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದ ರಿಂದ ಮೈಸೂರು ಜಿಲ್ಲೆಯಾದ್ಯಂತ ಪ್ರವಾಹ ಮುಂದುವರೆದಿದೆ. ಕಬಿನಿ, ಹಾರಂಗಿ ಹಾಗೂ ತಾರಕ ಜಲಾಶಯ ಗಳಿಂದ ಭಾರೀ ಪ್ರಮಾಣದ ನೀರನ್ನು ನದಿಗಳಿಗೆ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಭಾರೀ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಯನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಈ ಮಾರ್ಗ ವಾಹನ ಸಂಚಾರ ಸ್ಥಗಿತಗೊಂಡಿದೆ. ಹಾಗಾಗಿ ಮೈಸೂರಿನಿಂದ ಹೊರಡುವ ಬಸ್ಸು ಹಾಗೂ ಇತರ ವಾಹನಗಳು, ತಿ.ನರಸೀಪುರ ರಸ್ತೆ ಯಲ್ಲಿ ಸಾಗಿ ವರುಣ, ಕುಪ್ಪೆಗಾಲ,…
ಜಮ್ಮು ಮತ್ತು ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ಅ.31ಕ್ಕೆ ಅಸ್ತಿತ್ವಕ್ಕೆ
August 10, 2019ನವದೆಹಲಿ: 370ನೇ ವಿಧಿ ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾ ಡಳಿತ ಪ್ರದೇಗಳನ್ನಾಗಿ ವಿಭಜನೆ ಮಾಡುವ ಉದ್ದೇಶವನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ಕಾಯಿದೆ 2019ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಇಂದು ಒಪ್ಪಿಗೆ ಸೂಚಿಸಿದ್ದಾರೆ. ಈ ಪ್ರಕಾರ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ಅಕ್ಟೋಬರ್ 31ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ.
ಪ್ರವಾಹ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲು ಮೈಸೂರು ನಾಗರಿಕರಿಗೆ ಮನವಿ
August 10, 2019ಮೈಸೂರು, ಆ.9(ಎಂಟಿವೈ)-ಪ್ರವಾಹ ಸಂತ್ರಸ್ತರ ನೆರವಿಗಾಗಿ ತಮ್ಮ ವೇತನದಿಂದ 5 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿರುವ ಶಾಸಕ ಎಸ್.ಎ.ರಾಮ ದಾಸ್, ಸಂತ್ರಸ್ತರಿಗೆ ನೆರವಾಗಲು ಮುಂದಾ ಗಿರುವ ಸಂಘ-ಸಂಸ್ಥೆಗಳ ಮೂಲಕ ದಾನಿಗಳು ಜೀವನಾವಶ್ಯಕ ವಸ್ತುಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿ ಯಿಂದಾಗಿ ಸಾಕಷ್ಟು ತೊಂದರೆಯಾಗಿದೆ. ಉತ್ತರ ಕರ್ನಾಟಕದ ಹಲವು ನಗರಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಈ…
ಧಾರಾಕಾರ ಮಳೆ: ಮೈಸೂರಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತ
August 10, 2019ಮೈಸೂರು,ಆ.9(ಆರ್‍ಕೆ)-ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮೈಸೂರಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಬಿನಿ, ಹಾರಂಗಿ, ತಾರಕ ಹಾಗೂ ನುಗು ಜಲಾಶಯಗಳು ಭರ್ತಿಯಾಗಿ ಹೆಚ್ಚುವರಿ ನೀರನ್ನು ಹೊರಗಡೆ ಬಿಡುತ್ತಿ ರುವುದರಿಂದ ಪ್ರವಾಹ ಉಂಟಾಗಿದ್ದು, ಸಂಚಾರ ಮಾರ್ಗ ಕೆಲವೆಡೆ ಬಂದ್ ಆಗಿರುವು ದರಿಂದ ಮೈಸೂರು ನಗರದಲ್ಲಿ ಜನ ಸಂದಣಿ ವಿರಳವಾಗಿರುವುದು ಇಂದು ಕಂಡುಬಂದಿತು. ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ, ಬಹುತೇಕ ಜನರು ಮನೆಯಿಂದ ಹೊರಬರಲಾಗುತ್ತಿಲ್ಲ. ಪರಿಣಾಮ ಅಂಗಡಿ-ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಕಡಿಮೆಯಾಗಿದೆಯಲ್ಲದೆ, ಸದಾ…
ಮೈಸೂರು ಜಿಲ್ಲಾ ಕಂಟ್ರೋಲ್ ರೂಂಗೆ ಅಧಿಕಾರಿಗಳ ನಿಯೋಜನೆ
August 10, 2019ಮೈಸೂರು,ಆ.9(ಆರ್‍ಕೆ)-ಮೈಸೂರು ಜಿಲ್ಲೆಯಲ್ಲಿ ಅಧಿಕ ಮಳೆಯಾಗಿ ಜಲಾಶಯ ಗಳಿಂದ ಅಧಿಕ ನೀರನ್ನು ಹೊರ ಬಿಡುತ್ತಿರುವುದರಿಂದ ಜಿಲ್ಲಾ ಕಂಟ್ರೋಲ್ ರೂಂಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು 24 ಗಂಟೆಯೂ ಕಾರ್ಯ ನಿರ್ವಹಿಸಲು 3 ಪಾಳಿಗೆ ನಿಯೋಜಿಸಲಾಗಿದೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮುಡಾ ತಹಶೀಲ್ದಾರ್ ನಿಶ್ಚಯ್ (9738866111) ಡಿಸಿ ಕಚೇರಿ ಅಸಿಸ್ಟೆಂಟ್ ಡೈರೆಕ್ಟರ್ ಸುಮಿತ್ರ(9986 388969), ಮಧ್ಯಾಹ್ನ 2 ರಿಂದ ರಾತ್ರಿ 10 ಗಂಟೆವರೆಗೆ ಮುಡಾ ತಹಶೀಲ್ದಾರ್ ಶಿವಶಂಕರಪ್ಪ(9448868443), ಜಿಲ್ಲಾ ನಗರಾಭಿವೃದ್ಧಿ ಕೋಶದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರಶೇಖರ್(9916129654),…
ಕೋರಂ ಕೊರತೆ ಹಿನ್ನಲೆಮೈಸೂರು ಡೈರಿ ಅಧ್ಯಕ್ಷರ ಚುನಾವಣೆ ಆ.14ಕ್ಕೆ ಮುಂದೂಡಿಕೆ
August 10, 2019ಮೈಸೂರು, ಆ.9(ಎಸ್‍ಬಿಡಿ)- ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಮೈಮುಲ್) ಅಧ್ಯಕ್ಷ ಚುನಾವಣೆ ಕೋರಂ ಕೊರತೆ ಯಿಂದಾಗಿ ಮುಂದೂಡಲ್ಪಟ್ಟಿದ್ದು, ಇದರ ಹಿಂದೆ ರಾಜಕೀಯ ಷಡ್ಯಂತ್ರ ವಿದೆ ಎಂಬ ಆರೋಪ ಕೇಳಿ ಬಂದಿದೆ. ಮೈಸೂರಿನ ಸಿದ್ದಾರ್ಥನಗರದಲ್ಲಿ ರುವ ಮೈಮುಲ್ ಕಚೇರಿಯಲ್ಲಿ ಶುಕ್ರ ವಾರ ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಿಗದಿಯಾಗಿತ್ತು. ಮಾವಿನಹಳ್ಳಿ ಸಿದ್ದೇಗೌಡ ಹಾಗೂ ಕೆಲ ದಿನಗಳ ಹಿಂದೆ ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ನಿರ್ದೇಶಕ, ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಬಂಧಿ ಎಸ್.ಸಿ.ಅಶೋಕ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರ ಸಲ್ಲಿಸಿದ್ದ…
ಬಾಗಲಕೋಟೆ ಪ್ರವಾಹದಲ್ಲಿ ಸಿಲುಕಿದ್ದ ಹಿಮಾಚಲಪ್ರದೇಶ ಸಿಎಂ ಪುತ್ರಿ ರಕ್ಷಣೆ
August 10, 2019ಮಣಿಪಾಲ ಇಂಜಿನಿಯರಿಂಗ್ ಕಾಲೇಜಿನ 42 ವಿದ್ಯಾರ್ಥಿ ಗಳು ಪ್ರವಾಸಕ್ಕೆಂದು ಬಂದು ಬಾಗಲಕೋಟೆಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದರು. ಈ ತಂಡದಲ್ಲಿ ಹಿಮಾಚಲ ಪ್ರದೇಶದ ಮುಖ್ಯ ಮಂತ್ರಿ ಪುತ್ರಿ, 2ನೇ ವರ್ಷದ ಇಂಜಿನಿಯರಿಂಗ್(ಆರ್ಕಿಟೆಕ್ಟ್) ಓದುತ್ತಿರುವ ಅವಂತಿಕಾ ಸಹ ಇದ್ದರು. ಬಸ್ ಶುಕ್ರವಾರ ನಸುಕಿನ 3.30ರ ವೇಳೆ ಬಾದಾಮಿ ಸಮೀಪದ ಹೊಸೂರಿನಲ್ಲಿ ಪ್ರವಾಹ ದಲ್ಲಿ ಸಿಲುಕಿತು. ವಿದ್ಯಾರ್ಥಿಗಳು ಬಸ್‍ನಿಂದಿಳಿದು 2 ಕಿಮೀ ನಡೆದು ಬಂದಿದ್ದರು. ಬಳಿಕ ಪೆÇಲೀಸರು ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳನ್ನು ರಕ್ಷಿಸಿದ್ದರು. ಹೊಸೂರ ಗ್ರಾಮದ ಜನರು ವಿದ್ಯಾರ್ಥಿಗಳಿಗೆ ಸಮುದಾಯ ಭವನದಲ್ಲಿ ಸ್ಥಳಾವಕಾಶ…
ಮೈಸೂರು ಜಿಲ್ಲೆಯಲ್ಲೂ ಪ್ರವಾಹ
August 9, 2019ಮೈಸೂರು, ಆ.8- ಕೊಡಗು ಹಾಗೂ ಕೇರಳದ ವೈನಾಡಿನಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿರುವ ಪರಿಣಾಮ ಕಬಿನಿ, ತಾರಕ ಹಾಗೂ ಕೊಡಗಿನ ಹಾರಂಗಿ ಜಲಾ ಶಯಗಳು ಭರ್ತಿಯಾಗಿದ್ದು, ಈ ಮೂರೂ ಜಲಾಶಯಗಳಿಂದ ಒಟ್ಟು 1.32 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿ ರುವ ಪರಿಣಾಮ ಮೈಸೂರು ಜಿಲ್ಲೆಯಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಕಬಿನಿಯಿಂದ 90 ಸಾವಿರ ಕ್ಯೂಸೆಕ್ ಹಾಗೂ ತಾರಕ ಜಲಾಶಯ ದಿಂದ 12 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವ ಪರಿ ಣಾಮ ಹೆಚ್.ಡಿ. ಕೋಟೆ ಮತ್ತು ನಂಜನ…










