ಬಾಗಲಕೋಟೆ ಪ್ರವಾಹದಲ್ಲಿ ಸಿಲುಕಿದ್ದ ಹಿಮಾಚಲಪ್ರದೇಶ ಸಿಎಂ ಪುತ್ರಿ ರಕ್ಷಣೆ
ಮೈಸೂರು

ಬಾಗಲಕೋಟೆ ಪ್ರವಾಹದಲ್ಲಿ ಸಿಲುಕಿದ್ದ ಹಿಮಾಚಲಪ್ರದೇಶ ಸಿಎಂ ಪುತ್ರಿ ರಕ್ಷಣೆ

August 10, 2019

ಮಣಿಪಾಲ ಇಂಜಿನಿಯರಿಂಗ್ ಕಾಲೇಜಿನ  42 ವಿದ್ಯಾರ್ಥಿ ಗಳು ಪ್ರವಾಸಕ್ಕೆಂದು ಬಂದು ಬಾಗಲಕೋಟೆಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದರು. ಈ ತಂಡದಲ್ಲಿ ಹಿಮಾಚಲ ಪ್ರದೇಶದ ಮುಖ್ಯ ಮಂತ್ರಿ ಪುತ್ರಿ, 2ನೇ ವರ್ಷದ ಇಂಜಿನಿಯರಿಂಗ್(ಆರ್ಕಿಟೆಕ್ಟ್) ಓದುತ್ತಿರುವ ಅವಂತಿಕಾ ಸಹ ಇದ್ದರು. ಬಸ್ ಶುಕ್ರವಾರ ನಸುಕಿನ 3.30ರ ವೇಳೆ ಬಾದಾಮಿ ಸಮೀಪದ ಹೊಸೂರಿನಲ್ಲಿ ಪ್ರವಾಹ ದಲ್ಲಿ ಸಿಲುಕಿತು. ವಿದ್ಯಾರ್ಥಿಗಳು ಬಸ್‍ನಿಂದಿಳಿದು 2 ಕಿಮೀ ನಡೆದು ಬಂದಿದ್ದರು. ಬಳಿಕ ಪೆÇಲೀಸರು ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳನ್ನು ರಕ್ಷಿಸಿದ್ದರು. ಹೊಸೂರ ಗ್ರಾಮದ ಜನರು ವಿದ್ಯಾರ್ಥಿಗಳಿಗೆ ಸಮುದಾಯ ಭವನದಲ್ಲಿ ಸ್ಥಳಾವಕಾಶ ನೀಡಿ ಮುಂಜಾನೆ ಉಪಹಾರವನ್ನೂ ನೀಡಿದರು.

Translate »