ಮೈಸೂರು ಜಿಲ್ಲಾ ಕಂಟ್ರೋಲ್ ರೂಂಗೆ ಅಧಿಕಾರಿಗಳ ನಿಯೋಜನೆ
ಮೈಸೂರು

ಮೈಸೂರು ಜಿಲ್ಲಾ ಕಂಟ್ರೋಲ್ ರೂಂಗೆ ಅಧಿಕಾರಿಗಳ ನಿಯೋಜನೆ

August 10, 2019

ಮೈಸೂರು,ಆ.9(ಆರ್‍ಕೆ)-ಮೈಸೂರು ಜಿಲ್ಲೆಯಲ್ಲಿ ಅಧಿಕ ಮಳೆಯಾಗಿ ಜಲಾಶಯ ಗಳಿಂದ ಅಧಿಕ ನೀರನ್ನು ಹೊರ ಬಿಡುತ್ತಿರುವುದರಿಂದ ಜಿಲ್ಲಾ ಕಂಟ್ರೋಲ್ ರೂಂಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು 24 ಗಂಟೆಯೂ ಕಾರ್ಯ ನಿರ್ವಹಿಸಲು 3 ಪಾಳಿಗೆ ನಿಯೋಜಿಸಲಾಗಿದೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮುಡಾ ತಹಶೀಲ್ದಾರ್ ನಿಶ್ಚಯ್ (9738866111) ಡಿಸಿ ಕಚೇರಿ ಅಸಿಸ್ಟೆಂಟ್ ಡೈರೆಕ್ಟರ್ ಸುಮಿತ್ರ(9986 388969), ಮಧ್ಯಾಹ್ನ 2 ರಿಂದ ರಾತ್ರಿ 10 ಗಂಟೆವರೆಗೆ ಮುಡಾ ತಹಶೀಲ್ದಾರ್ ಶಿವಶಂಕರಪ್ಪ(9448868443), ಜಿಲ್ಲಾ ನಗರಾಭಿವೃದ್ಧಿ ಕೋಶದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರಶೇಖರ್(9916129654), ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆವರೆಗೆ ಮುಡಾ ತಹಸೀಲ್ದಾರ್ ಪ್ರಕಾಶ್ (9449009782) ಹಾಗೂ ಡಿಡಿಎಲ್‍ಆರ್ ಕಚೇರಿ ಸ್ವ ಸಹಾಯಕ ಶಿವಕುಮಾರ್ ಅವರನ್ನು ನೇಮಿಸಲಾಗಿದೆ.

ಪಾಲಿಕೆ ಕಂಟ್ರೋಲ್ ರೂಂ: ಮಳೆಯಿಂದ ಉಂಟಾಗುವ ಸಮಸ್ಯೆಗಳಿಗೆ ಸ್ಪಂದಿಸಲು ಮೈಸೂರು ಮಹಾನಗರ ಪಾಲಿಕೆ ಕಂಟ್ರೋಲ್ ರೂಂಗೆ ದಿನದ 24 ಗಂಟೆ ಕಾರ್ಯ ನಿರ್ವಹಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ.

ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಪಾಲಿಕೆ ಹೆಚ್ಚುವರಿ ಆಯುಕ್ತ ಎನ್.ಎಂ.ಶಿವಕುಮಾರ್(9449276306), ಕೆ.ಆರ್.ಕ್ಷೇತ್ರಕ್ಕೆ ಉಪ ಆಯುಕ್ತ (ಆಡಳಿತ) ಬಿ.ಸಿ.ಶಿವಾನಂದಮೂರ್ತಿ(9980557442), ಎನ್.ಆರ್.ಕ್ಷೇತ್ರಕ್ಕೆ ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿ(9886012607) ಚಾಮುಂಡೇಶ್ವರಿ ಕ್ಷೇತ್ರಕ್ಕೆ ಉಪ ಆಯುಕ್ತ (ಕಂದಾಯ) ಕುಮಾರ ನಾಯಕ್ (9902638586) ಅವರನ್ನು ನಿಯೋಜಿಸಲಾಗಿದೆ.

ಉಳಿದಂತೆ ಒಳಚರಂಡಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮಹೇಶ್ (9449581212), ನೀರು ಸರಬರಾಜಿಗೆ ನಾಗರಾಜಮೂರ್ತಿ (9448122042), ಬೀದಿ ದೀಪಕ್ಕೆ ಎಂ.ಜಿ.ನಾಗೇಶ(9448523317), ಮರ ಬಿದ್ದಲ್ಲಿ ಸದಾಶಿವ ಚಣ್ಕೆ(9141282677), ಸ್ವಚ್ಛತೆಗೆ ಡಾ.ಎಸ್.ಎಸ್.ಜಯಂತ್(9448325885), ಡಾ.ಡಿ.ಜಿ.ನಾಗರಾಜು (9481820856), ಡಾ.ಜಹನಾರೆ ತಬಸುಮ್ (9901067854) ಅವರನ್ನು ಸಂಪರ್ಕಿಸ ಬಹುದಾಗಿದೆ. ದಿನದ 24 ಗಂಟೆಯೂ ಪಾಲಿಕೆ ಕಂಟ್ರೋಲ್ ರೂಂ ಕಾರ್ಯನಿರ್ವ ಹಿಸಲಿದ್ದು, ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಸಾರ್ವಜನಿಕರು ದೂರು ದಾಖಲಿಸಬಹುದಾಗಿದೆ. ಕಂಟ್ರೋಲ್ ರೂಂ ನಂಬರ್‍ಗಳು: 0821-2418800, 2418816, 2440890, 2431112, ಮೊಬೈಲ್ ನಂ.9449841195, 9449841196

Translate »