ಪ್ರವಾಹ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲು ಮೈಸೂರು ನಾಗರಿಕರಿಗೆ ಮನವಿ
ಮೈಸೂರು

ಪ್ರವಾಹ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲು ಮೈಸೂರು ನಾಗರಿಕರಿಗೆ ಮನವಿ

August 10, 2019

ಮೈಸೂರು, ಆ.9(ಎಂಟಿವೈ)-ಪ್ರವಾಹ ಸಂತ್ರಸ್ತರ ನೆರವಿಗಾಗಿ ತಮ್ಮ ವೇತನದಿಂದ 5 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿರುವ ಶಾಸಕ ಎಸ್.ಎ.ರಾಮ ದಾಸ್, ಸಂತ್ರಸ್ತರಿಗೆ ನೆರವಾಗಲು ಮುಂದಾ ಗಿರುವ ಸಂಘ-ಸಂಸ್ಥೆಗಳ ಮೂಲಕ ದಾನಿಗಳು ಜೀವನಾವಶ್ಯಕ ವಸ್ತುಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿ ಯಿಂದಾಗಿ ಸಾಕಷ್ಟು ತೊಂದರೆಯಾಗಿದೆ. ಉತ್ತರ ಕರ್ನಾಟಕದ ಹಲವು ನಗರಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ವೇತನದ ಹಣ ದಲ್ಲಿ ಐದು ಲಕ್ಷ ರೂ.ಗಳನ್ನು ನೀಡುತ್ತಿ ದ್ದೇನೆ. ಈ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬದಲಾಗಿ ಸಂತ್ರಸ್ತರಿ ಗಾಗಿ ಕೆಲಸ ಮಾಡುವ ಸಂಸ್ಥೆಗೆ ಚೆಕ್ ಮೂಲಕ ನೀಡಲಿದ್ದೇನೆ. ಇದರಿಂದ ತುರ್ತು ಅಗತ್ಯ ವಸ್ತುಗಳನ್ನು ಖರೀದಿಸಲು ಸಹಾಯವಾಗಲಿದೆ ಎಂದರು.

ಮೈಸೂರಿನ ಜಿಎಸ್‍ಎಸ್ ಫೌಂಡೇ ಷನ್, ಲೆಟ್ಸ್ ಡೂ ಇಟ್, ಹಿರಿಯ ನಾಗರಿಕರ ವೇದಿಕೆ ಮತ್ತಿತರ ಸಂಘಟನೆ ಗಳು ಸಾರ್ವಜನಿಕರಿಂದ ದೇಣಿಗೆ, ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಮುಂದಾಗಿವೆ. ಎಲ್ಲರೂ ಸಹಾಯ ಹಸ್ತ ಚಾಚಬೇಕು. ಬೇಗ ಹಾಳಾಗುವ ವಸ್ತುಗಳನ್ನು ಹೊರತುಪಡಿಸಿ ನಿತ್ಯ ಬಳಕೆ ವಸ್ತುಗಳನ್ನು ಸಂಗ್ರಹಿಸಿ ರವಾನಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 160 ಮನೆ ಹಾನಿಗೀ ಡಾಗಿವೆ. ಜಿಲ್ಲಾಧಿಕಾರಿ ನಿಧಿಯಲ್ಲಿ 12 ಕೋಟಿ ರೂ. ಇರುವುದರಿಂದ ಪರಿಹಾರ ಕ್ರಮಕ್ಕೆ ಹಣದ ಕೊರತೆ ಇಲ್ಲ. ನಗರದಲ್ಲಿ ಮಳೆ ಅನಾಹುತದತ್ತ ನಿಗಾ ಇಡಲು ಪ್ರತಿ ಕ್ಷೇತ್ರಕ್ಕೆ ಒಬ್ಬ ನೋಡಲ್ ಅಧಿಕಾರಿ ನಿಯೋಜಿಸಲಾಗಿದೆ. ಪಾಲಿಕೆಗೆ ಅನು ದಾನ ಕೊಡಲು ಸರ್ಕಾರ ಒಪ್ಪಿದೆ. ಅಧಿಕಾರಿ ಗಳ ತಂಡ ಅದಕ್ಕೆ ತಕ್ಕಂತೆ ಕೆಲಸ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಮೈಸೂರು ನಾಗರಿಕರ ವೇದಿಕೆ ಸದಸ್ಯ ಆರ್.ವಾಸುದೇವ ಭಟ್ ಮಾತನಾಡಿ, ಮೈಸೂರು ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪ ಪರಿಹಾರಕ್ಕೆ ಮುಂದಾ ಗಿದ್ದೇವೆ. ಬಹಳ ತೊಂದರೆ ಆಗಿರುವ ಜಿಲ್ಲೆಯಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಗಂಜಿ ಕೇಂದ್ರದಲ್ಲಿ ಊಟ-ತಿಂಡಿ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ತಲುಪಿ ಅಗತ್ಯ ವಸ್ತು ಪೂರೈಸಲು ಸಮಸ್ಯೆಯಾಗಿದೆ ಎಂದು ವಿವರಿಸಿದರು.

ಜಿಎಸ್‍ಎಸ್ ಫೌಂಡೇಷನ್ ಮುಖ್ಯಸ್ಥ ಶ್ರೀಹರಿ ಮಾತನಾಡಿ, ಸಾರ್ವಜನಿಕರಿಂದ ಅಗತ್ಯ ವಸ್ತು ಸಂಗ್ರಹಿಸಲು ಕೇಂದ್ರ ತೆರೆಯ ಲಾಗಿದೆ. ಸಾರ್ವಜನಿಕರು ಹೊಸಬಟ್ಟೆ, ಅಕ್ಕಿ, ದಿನಸಿ ಇನ್ನಿತರೆ ಅಗತ್ಯ ವಸ್ತುಗಳ ನೀಡಬೇಕು ಎಂದು ಮನವಿ ಮಾಡಿದರು.

ನಗರದ ಯೋಗ ಸಂಸ್ಥೆಗಳಿಂದ 200 ಜನರ ತಂಡ ಇಲ್ಲಿ ಸಂಗ್ರಹಿಸಿದ ವಸ್ತುಗಳನ್ನು ಮಳೆ ನಿಂತ ತಕ್ಷಣವೇ ಸಂತ್ರಸ್ತರಿಗೆ ತಲುಪಿ ಸಲಿದೆ ಎಂದರು. ಈಗಾಗಲೇ ಟ್ರಾನ್ಸ್ ಫೋರ್ಟ್, ರೈಲ್ವೆ ಅಧಿಕಾರಿಗಳೊಂದಿಗೂ ಚರ್ಚಿಸಲಾಗಿದೆ. ಅಗತ್ಯ ನೆರವು ಒದಗಿ ಸಲು ಸಾಕಷ್ಟು ಸಂಘ ಸಂಸ್ಥೆಗಳು ಮುಂದೆ ಬಂದಿವೆ ಎಂದು ಹೇಳಿದರು.

Translate »