ಆಯುಷ್ಮಾನ್ ಖುರಾನಾ, ವಿಕ್ಕಿ ಕೌಶಲ್ ಅತ್ಯುತ್ತಮ ನಟ, ಕೀರ್ತಿ ಸುರೇಶ್ ಅತ್ಯುತ್ತಮ ನಟಿ
ಮೈಸೂರು

ಆಯುಷ್ಮಾನ್ ಖುರಾನಾ, ವಿಕ್ಕಿ ಕೌಶಲ್ ಅತ್ಯುತ್ತಮ ನಟ, ಕೀರ್ತಿ ಸುರೇಶ್ ಅತ್ಯುತ್ತಮ ನಟಿ

August 10, 2019

ಬೆಂಗಳೂರು:”ಬಧಾಯಿ ಹೋ” ಚಿತ್ರದ ಅಭಿನಯಕ್ಕಾಗಿ ಆಯುಷ್ಮಾನ್ ಖುರಾನಾ ಹಾಗೂ “ಉರಿ: ದಿ ಸರ್ಜಿಕಲ್ ಸ್ಟ್ರೈಕ್'” ನಟ ವಿಕ್ಕಿ ಕೌಶಲ್ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ನಟಿ ಕೀರ್ತಿ ಸುರೇಶ್ “ಮಹಾನಟಿ” ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. “ಮಹಾನಟಿ” ಅತ್ಯುತ್ತಮ ತೆಲುಗು ಚಿತ್ರ ಪ್ರಶಸ್ತಿ ಬಾಚಿಕೊಂಡಿದ್ದರೆ ‘ಅಂಧಾ ಧುನ್’ ಚಿತ್ರಕ್ಕೆ ಅತ್ಯುತ್ತಮ ಹಿಂದಿ ಭಾಷಾ ಚಿತ್ರ ಪ್ರಶಸ್ತಿ ಲಭಿಸಿದೆ. ಚೊಚ್ಚಲ “ಉರಿ: ದಿ ಸರ್ಜಿಕಲ್ ಸ್ಟ್ರೈಕ್”ಗಾಗಿ ಆದಿತ್ಯ ಧಾರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದರೆ, “ಅಂಧಾಧುನ್” ಅತ್ಯುತ್ತಮ ಹಿಂದಿ ಚಲನಚಿತ್ರ ಮತ್ತು ಅತ್ಯುತ್ತಮ ಚಿತ್ರಕಥೆಗಾಗಿ ಪ್ರಶಸ್ತಿಗಳನ್ನು ಗೆದ್ದಿದೆ. “ಬಧಾಯಿ ಹೋ” ಅತ್ಯುತ್ತಮ ಜನಪ್ರಿಯ ಚಿತ್ರವೆಂದು ಪ್ರಶಸ್ತಿ ಗಳಿಸಿ ದರೆ ಹಿರಿಯ ನಟ ಸುರೇಖಾ ಸಿಕ್ರಿ ಅತ್ಯುತ್ತಮ ಪೆÇೀಷಕ ನಟಿ ಪ್ರಶಸ್ತಿ ಗಿಟ್ಟಿಸಿದ್ದಾರೆ. ಇನ್ನು ಅಕ್ಷಯ್ ಕುಮಾರ್ ಅವರ “ಪ್ಯಾಡ್ ಮ್ಯಾನ್” ಸಾಮಾಜಿಕ ವಿಷಯಗಳಲ್ಲಿ ಅತ್ಯುತ್ತಮ ಚಿತ್ರವೆಂದು ಪರಿಗಣಿಸಲ್ಪಟ್ಟಿದೆ. ಬಿಡುಗಡೆ ವೇಳೆ ಸಾಕಷ್ಟು ವಿವಾದ ಕ್ಕೀಡಾಗಿದ್ದ ಸಂಜಯ್ ಲೀಲಾ ಭನ್ಸಾಲಿ ಅವರ “ಪದ್ಮಾವತ್”, ಚಿತ್ರದ “ಘೂಮರ್” ಹಾಡಿನ ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಹಾಗೂ ಅತ್ಯುತ್ತಮ ಸಂಗೀತ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಅರಿಜಿತ್ ಸಿಂಗ್ ಅತ್ಯುತ್ತಮ ಮೇಲ್ ಪ್ಲೇ ಬ್ಯಾಕ್ ಸಿಂಗರ್ ( ಹಿನ್ನೆಲೆ ಗಾಯಕ )ಪ್ರಶಸ್ತಿ ಗಳಿಸಿದ್ದಾರೆ.

Translate »