ಮೈಸೂರು

ಬಾಡಿಗೆಗೆ ಪಡೆದ ಕಾರನ್ನೇ ಎಗರಿಸಿದ ಖದೀಮ
ಮೈಸೂರು

ಬಾಡಿಗೆಗೆ ಪಡೆದ ಕಾರನ್ನೇ ಎಗರಿಸಿದ ಖದೀಮ

August 6, 2019

ಮೈಸೂರು,ಆ.5(ಎಸ್‍ಬಿಡಿ)- ಖಾಸಗಿ ಕ್ಯಾಬ್ ಸರ್ವೀಸ್ ಮೂಲಕ ಬಾಡಿಗೆ ಪಡೆದ ಕಾರನ್ನೇ ಕಳ್ಳತನ ಮಾಡಿರುವ ಮತ್ತೊಂದು ಪ್ರಕರಣ ಮೈಸೂರಿನಲ್ಲಿ ನಡೆದಿದೆ. ಇಮ್ಯಾನುವೆಲ್ ಸಚ್ಚಿನ್ ಎಂಬುವರು ಕಾರು ಕಳೆದು ಕೊಂಡಿದ್ದಾರೆ. ಆ.3ರಂದು ರಾತ್ರಿ 7.30ರಲ್ಲಿ ಅರ್ಜುನ್ ಹೆಸರಿನಲ್ಲಿ ಕಾರು ಬಾಡಿಗೆ ಪಡೆದಿದ್ದ ಖದೀಮ, ಹರ್ಷ ರಸ್ತೆಯಲ್ಲಿರುವ ಪ್ಯಾಲೇಸ್ ಪ್ಲಾಜಾ ಹೊಟೇಲ್ ಬಳಿ ಕಾರನ್ನೇರಿ ಶ್ರೀರಂಗಪಟ್ಟಣ ಸಮೀಪ ದರಸನಗುಪ್ಪೆ ಗ್ರಾಮಕ್ಕೆ ಹೋಗುವಂತೆ ತಿಳಿಸಿದ್ದಾನೆ. ಅಲ್ಲಿ ಮುಖ್ಯರಸ್ತೆ ಯಲ್ಲಿ ಮಾತ್ರ ಸರ್ವೀಸ್ ಇರುವುದಾಗಿ ಗ್ರಾಮದೊಳಗೆ ಕಾರು ಚಾಲಿಸಲು ನಿರಾಕರಿಸಿದಾಗ ವಾಪಸ್ಸು ಮೈಸೂರಿನ ಪ್ರೇಮ್…

ಕಾಂಗ್ರೆಸ್-ಜೆಡಿಎಸ್ ಮುಖಂಡರ ವರ್ತನೆಯಿಂದಲೇ ಸರ್ಕಾರ ಪತನ
ಮೈಸೂರು

ಕಾಂಗ್ರೆಸ್-ಜೆಡಿಎಸ್ ಮುಖಂಡರ ವರ್ತನೆಯಿಂದಲೇ ಸರ್ಕಾರ ಪತನ

August 5, 2019

ಮೈಸೂರು,ಆ.4(ಎಂಟಿವೈ)-ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ 20 ಶಾಸಕರಾಗಲೀ ಅಥವಾ ಬಿಜೆಪಿಯಾಗಲಿ ಕಾರಣ ವಲ್ಲ. ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳ ಮಾಲೀಕರು ಹಾಗೂ ಮುಖಂಡರ ವರ್ತನೆಯಿಂದಲೇ ಸರ್ಕಾರ ಪತನವಾಗಿದೆ ಎಂದು ಅನರ್ಹಗೊಂಡ ಶಾಸಕ ಅಡಗೂರು ಹೆಚ್.ವಿಶ್ವನಾಥ್ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ರಾಜಕೀಯದಲ್ಲಿ ಹೊಸಶಕೆ ಆರಂಭವಾಗಿದೆ. ಕಳೆದ 14 ತಿಂಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಲು ನಾವು 17 ಮಂದಿ ಕಾರಣರಲ್ಲ. ಎಲ್ಲೆಡೆ ಶಾಸಕ…

ಚುನಾವಣಾ ರಾಜಕಾರಣದಿಂದ ಜಿಟಿಡಿ ನಿವೃತ್ತಿ
ಮೈಸೂರು

ಚುನಾವಣಾ ರಾಜಕಾರಣದಿಂದ ಜಿಟಿಡಿ ನಿವೃತ್ತಿ

August 5, 2019

ಮೈಸೂರು, ಆ.4(ಎಸ್‍ಬಿಡಿ)- ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಚುನಾವಣಾ ರಾಜ ಕಾರಣದಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ ಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದರ ಬೆನ್ನಲ್ಲೇ ಭಾನುವಾರ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇ ಗೌಡರು, 50 ವರ್ಷದಿಂದ ಹಿರಿಯ ಮುತ್ಸದ್ಧಿ ಗಳೊಂದಿಗೆ ರಾಜಕಾರಣ ಮಾಡಿದ್ದೇನೆ. ಈಗಿನ ಪರಿಸ್ಥಿತಿಯಲ್ಲಿ ರಾಜಕಾರಣ ಸಾಕು ಎನಿಸಿದೆ. ಬಹಳಷ್ಟು ನೊಂದಿದ್ದೇನೆ. ಹಾಗಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದು ಕ್ಷೇತ್ರದ ಜನರ ಸೇವೆ ಮಾಡಬೇ ಕೆಂದು ನಿರ್ಧರಿಸಿದ್ದೇನೆ…

ಕೊಡಗಲ್ಲಿ `ಮುಂಗಾರು’ ಬಿರುಸು
ಮೈಸೂರು

ಕೊಡಗಲ್ಲಿ `ಮುಂಗಾರು’ ಬಿರುಸು

August 5, 2019

ಮಡಿಕೇರಿ,ಆ.4- ಕೊಡಗು ಜಿಲ್ಲೆಯಲ್ಲಿ ಮತ್ತೆ ಮುಂಗಾರು ಮಳೆ ಬಿರುಸು ಪಡೆ ದಿದ್ದು, ಆ.9ರವರೆಗೆ ಮಳೆ ಮುಂದುವರಿ ಯಲಿದೆ ಎಂದು ಭಾರತೀಯ ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಸ್ತುತ ಜಿಲ್ಲೆಯಲ್ಲಿ ಆಶ್ಲೇಷ ಮಳೆ ಸುರಿ ಯುತ್ತಿದ್ದು, ಕೆಲವೆಡೆ ಗಾಳಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ನಾಪೋಕ್ಲು-ಭಾಗಮಂಡಲ ರಸ್ತೆಯ ನೆಲಜಿ ಜಂಕ್ಷನ್ ಬಳಿ ರಸ್ತೆಗೆ ಅಡ್ಡಲಾಗಿ ಮರ ಉರುಳಿ ಬಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತವಾ ಗಿತ್ತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸಾರ್ವಜನಿಕರು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ…

ಕೆಆರ್‍ಎಸ್ ಡಿಸ್ನಿಲ್ಯಾಂಡ್ ಯೋಜನೆ ರದ್ದು?
ಮೈಸೂರು

ಕೆಆರ್‍ಎಸ್ ಡಿಸ್ನಿಲ್ಯಾಂಡ್ ಯೋಜನೆ ರದ್ದು?

August 5, 2019

ಮಂಡ್ಯ,ಆ.4(ನಾಗಯ್ಯ)- ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ಮಹತ್ವದ ಯೋಜನೆ, ಅದ ರಲ್ಲೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರ ಕನಸಿನ ಕೆಆರ್‍ಎಸ್‍ನ ಡಿಸ್ನಿಲ್ಯಾಂಡ್ ಯೋಜನೆ ರದ್ದಾಗುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ. ಹಿಂದಿನ ಸಮ್ಮಿಶ್ರ ಸರ್ಕಾರವು ಪ್ರಾರಂಭಿಸಲು ನಿರ್ಧರಿಸಿದ್ದ ವಿವಾದಾತ್ಮಕ ಡಿಸ್ನಿಲ್ಯಾಂಡ್ ಯೋಜನೆ ಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಕೈಬಿಡುವ ಸಾಧ್ಯತೆ ಯಿದೆ. ಈಗಾಗಲೇ ಟಿಪ್ಪು ಜಯಂತಿಯನ್ನು ರದ್ದು ಪಡಿಸಿರುವಂತೆಯೇ ಡಿಸ್ನಿಲ್ಯಾಂಡ್ ಯೋಜನೆಗೂ ಸಹ ಎಳ್ಳು ನೀರು ಬಿಡುವ ಸಾಧ್ಯತೆ ಇದೆ. ಈ ಯೋಜನೆಯ ಭವಿಷ್ಯವನ್ನು ನಿರ್ಧರಿಸಲು…

ಆ.9ಕ್ಕೆ ಯಡಿಯೂರಪ್ಪ ನೇತೃತ್ವದಲ್ಲಿ ದಸರಾ ಹೈಪವರ್ ಕಮಿಟಿ ಸಭೆ
ಮೈಸೂರು

ಆ.9ಕ್ಕೆ ಯಡಿಯೂರಪ್ಪ ನೇತೃತ್ವದಲ್ಲಿ ದಸರಾ ಹೈಪವರ್ ಕಮಿಟಿ ಸಭೆ

August 5, 2019

ಮೈಸೂರು,ಆ.4(ಎಂಟಿವೈ)- ರಾಜಕೀಯ ಅನಿಶ್ಚಿತತೆಯಿಂದಾಗಿ ಕಡೆ ಗಣಿಸಲ್ಪಟ್ಟಿದ್ದ ದಸರಾ ಮಹೋತ್ಸವ ಉನ್ನತ ಮಟ್ಟದ ಸಭೆ ಕೊನೆಗೂ ನಿಗದಿಯಾಗಿದ್ದು, ಆ.9 ರಂದು ಮದ್ಯಾಹ್ನ 12ಕ್ಕೆ ವಿಧಾನ ಸೌಧ 3ನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ದಸರಾ ಹೈಪವರ್ ಕಮಿಟಿ ಸಭೆಗೆ ಸರ್ಕಾರ ಮುಹೂರ್ತ ಫಿಕ್ಸ್ ಮಾಡಿದೆ. ಪ್ರಸಕ್ತ ಸಾಲಿನ ದಸರಾ ಮಹೋ ತ್ಸವ ಆರಂಭಕ್ಕೆ ಕೇವಲ 56 ದಿನಗಳಷ್ಟೇ ಬಾಕಿಯಿದ್ದು, ಇನ್ನು ಸಿದ್ಧತಾ ಕಾರ್ಯ ಆರಂಭಿಸಲು ಸಾಧ್ಯವಾಗಿಲ್ಲ. ಸಂಪ್ರ ದಾಯದಂತೆ ಜುಲೈ ತಿಂಗಳಲ್ಲಿಯೇ ಉನ್ನತಮಟ್ಟದ ಸಭೆ ನಡೆಯಬೇಕಾ ಗಿತ್ತು. ಆದರೆ ರಾಜ್ಯದ…

ಪ್ರಾಮಾಣಿಕತೆ ಮೆರೆದ ಅಪ್ಪ-ಮಗರಸ್ತೆಯಲ್ಲಿ ಸಿಕ್ಕಿದ 60 ಸಾವಿರ ರೂ. ಪೊಲೀಸರಿಗೊಪ್ಪಿಸಿದರು!
ಮೈಸೂರು

ಪ್ರಾಮಾಣಿಕತೆ ಮೆರೆದ ಅಪ್ಪ-ಮಗರಸ್ತೆಯಲ್ಲಿ ಸಿಕ್ಕಿದ 60 ಸಾವಿರ ರೂ. ಪೊಲೀಸರಿಗೊಪ್ಪಿಸಿದರು!

August 5, 2019

ಮೈಸೂರು,ಆ.4(ಆರ್‍ಕೆಬಿ)-ಹಣಕ್ಕಾಗಿ ಪ್ರಾಣ ತೆಗೆಯಲು ಹಿಂಜರಿಯದ ಇಂತಹ ಕಾಲದಲ್ಲಿಯೂ ಪ್ರಾಮಾಣಿ ಕರು ಇದ್ದಾರೆ ಎಂಬುದಕ್ಕೆ ಭಾನುವಾರ ಮೈಸೂರಿನಲ್ಲಿ ನಡೆದ ನೈಜ ಘಟನೆ ಇದು. ಇವರು ಎಷ್ಟು ಪ್ರಾಮಾಣಿ ಕರು ಎಂದರೆ ದಾರಿಯಲ್ಲಿ ಹೋಗುತ್ತಿದ್ದಾಗ ಸಿಕ್ಕಿದ ರಾಶಿ ಹಣವನ್ನು ಅತ್ತಿತ್ತ ನೋಡಿ ಜೇಬಿಗಿಳಿಸಲಿಲ್ಲ ಅಥವಾ ಯಾರಿಗೂ ಗೊತ್ತಾಗದಂತೆ ಹಣವನ್ನು ಎಸ್ಕೇಪ್ ಮಾಡಲಿಲ್ಲ. ಬದಲಿಗೆ ಆ ಹಣದ ಮೊತ್ತವನ್ನು ಪ್ರಾಮಾಣಿಕವಾಗಿ ಹತ್ತಿರದ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿ ಕತೆ ಮೆರೆದಿದ್ದಾರೆ. ಇವರ ಪ್ರಾಮಾಣಿಕತೆಯನ್ನು ಪೊಲೀಸರು, ಸಾರ್ವಜನಿಕರು ಪ್ರಶಂಸಿಸಿದ್ದಾರೆ. ಏನಿದು ಘಟನೆ?: ಭಾನವಾರ…

ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಆರೋಗ್ಯ, ನೈರ್ಮಲ್ಯ ಕುರಿತ ವಸ್ತು ಪ್ರದರ್ಶನಕ್ಕೆ ಚಾಲನೆ
ಮೈಸೂರು

ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಆರೋಗ್ಯ, ನೈರ್ಮಲ್ಯ ಕುರಿತ ವಸ್ತು ಪ್ರದರ್ಶನಕ್ಕೆ ಚಾಲನೆ

August 5, 2019

ಮೈಸೂರು, ಆ.4(ಆರ್‍ಕೆಬಿ)- ಮೈಸೂ ರಿನ ಕೆಎಸ್‍ಅರ್‍ಟಿಸಿ ಬಸ್ ನಿಲ್ದಾಣದಲ್ಲಿ ಜನಸಾಮಾನ್ಯರಿಗೆ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಅರಿವು ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಾಹಿತಿ ನೀಡುವ ಫಲಕಗಳ 2 ದಿನಗಳ ವಸ್ತು ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಲಾಯಿತು. ವಾರ್ತಾ ಇಲಾಖೆಯೊಂದಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್‍ರಾಜ್ ಇಲಾಖೆ, ಆರೋಗ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ಮಹಿಳೆಯರು, ಮಕ್ಕಳ ಆರೋಗ್ಯ ಫಲಕಗಳು ಮಾಹಿತಿ…

ಗಾಣಿಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಮೈಸೂರು

ಗಾಣಿಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

August 5, 2019

ಮೈಸೂರು, ಆ.4(ಪಿಎಂ)- ಯಾವುದೇ ಸಮುದಾಯ ಮುಖ್ಯವಾಹಿನಿಗೆ ಬರಲು ಸಂಘಟಿತರಾಗುವುದು ಅಗತ್ಯವಾಗಿದ್ದು, ಗಾಣಿಗ ಸಮುದಾಯ ಸಂಘಟಿತವಾಗಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಪ್ರಗತಿ ಕಾಣಬೇಕು ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‍ಗೌಡ ತಿಳಿಸಿದರು. ಮೈಸೂರಿನ ಪುರಭವನದಲ್ಲಿ ಮೈಸೂರು ಜಿಲ್ಲಾ ಗಾಣಿಗರ ಸಂಘದ ವತಿಯಿಂದ ಹಮ್ಮಿ ಕೊಂಡಿದ್ದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸ್ಥಳೀಯ ಸಂಸ್ಥೆ ಗಳ ಜನಪ್ರತಿನಿಧಿಗಳಿಗೆ ಸನ್ಮಾನ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಮುದಾಯದ ಪ್ರತಿಭಾವಂತ…

ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹುಟ್ಟುಹಬ್ಬ: ನಾಳೆ `ನಮ್ಮ ನಡಿಗೆ ಸಮಾನತೆಯ ಕಡೆಗೆ’ ಸಂವಾದ
ಮೈಸೂರು

ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹುಟ್ಟುಹಬ್ಬ: ನಾಳೆ `ನಮ್ಮ ನಡಿಗೆ ಸಮಾನತೆಯ ಕಡೆಗೆ’ ಸಂವಾದ

August 5, 2019

ಮೈಸೂರು,ಆ.4(ಎಂಟಿವೈ)- ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ 72ನೇ ಹುಟ್ಟುಹಬ್ಬದ ಹಿನ್ನೆಲೆ ಯಲ್ಲಿ ಆ.6ರಂದು ಬೆಳಿಗ್ಗೆ 11ಕ್ಕೆ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ `ನಮ್ಮ ನಡಿಗೆ ಸಮಾ ನತೆಯ ಕಡೆಗೆ’ ಮುಕ್ತ ಸಂವಾದ ಕಾರ್ಯಕ್ರಮ ಆಯೋ ಜಿಸಲಾಗಿದೆ ಎಂದು ವಿ.ಶ್ರೀನಿವಾಸ್ ಅಭಿಮಾನಿ ಬಳಗದ ಅಧ್ಯಕ್ಷ ಡಾ.ಸಿ.ಬಸವರಾಜು ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಜ್ಜನ ರಾಜಕಾರಣಿ ಯಾಗಿರುವ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಮೌಲ್ಯಾ ಧಾರಿತ…

1 867 868 869 870 871 1,611
Translate »