ಆ.9ಕ್ಕೆ ಯಡಿಯೂರಪ್ಪ ನೇತೃತ್ವದಲ್ಲಿ ದಸರಾ ಹೈಪವರ್ ಕಮಿಟಿ ಸಭೆ
ಮೈಸೂರು

ಆ.9ಕ್ಕೆ ಯಡಿಯೂರಪ್ಪ ನೇತೃತ್ವದಲ್ಲಿ ದಸರಾ ಹೈಪವರ್ ಕಮಿಟಿ ಸಭೆ

August 5, 2019

ಮೈಸೂರು,ಆ.4(ಎಂಟಿವೈ)- ರಾಜಕೀಯ ಅನಿಶ್ಚಿತತೆಯಿಂದಾಗಿ ಕಡೆ ಗಣಿಸಲ್ಪಟ್ಟಿದ್ದ ದಸರಾ ಮಹೋತ್ಸವ ಉನ್ನತ ಮಟ್ಟದ ಸಭೆ ಕೊನೆಗೂ ನಿಗದಿಯಾಗಿದ್ದು, ಆ.9 ರಂದು ಮದ್ಯಾಹ್ನ 12ಕ್ಕೆ ವಿಧಾನ ಸೌಧ 3ನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ದಸರಾ ಹೈಪವರ್ ಕಮಿಟಿ ಸಭೆಗೆ ಸರ್ಕಾರ ಮುಹೂರ್ತ ಫಿಕ್ಸ್ ಮಾಡಿದೆ.

ಪ್ರಸಕ್ತ ಸಾಲಿನ ದಸರಾ ಮಹೋ ತ್ಸವ ಆರಂಭಕ್ಕೆ ಕೇವಲ 56 ದಿನಗಳಷ್ಟೇ ಬಾಕಿಯಿದ್ದು, ಇನ್ನು ಸಿದ್ಧತಾ ಕಾರ್ಯ ಆರಂಭಿಸಲು ಸಾಧ್ಯವಾಗಿಲ್ಲ. ಸಂಪ್ರ ದಾಯದಂತೆ ಜುಲೈ ತಿಂಗಳಲ್ಲಿಯೇ ಉನ್ನತಮಟ್ಟದ ಸಭೆ ನಡೆಯಬೇಕಾ ಗಿತ್ತು. ಆದರೆ ರಾಜ್ಯದ ರಾಜಕೀಯ ದಲ್ಲಿ ಉಂಟಾದ ಬದಲಾವಣೆಯಿಂ ದಾಗಿ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಇದರಿಂದ ಸರ್ಕಾರ ಹಾಗೂ ಅಧಿಕಾರಿ ಗಳು ನಾಡಹಬ್ಬವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯ ದಿಂದ ಕೇಳಿ ಬಂದಿತ್ತು. ಈ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಕೊನೆಗೂ ದಸರಾ ಮಹೋ ತ್ಸವದ ಉನ್ನತ ಮಟ್ಟದ ಸಭೆ ನಡೆ ಸಲು ಮುಂದಾಗಿದ್ದಾರೆ.

ಆ.9ರಂದು ಉನ್ನತ ಮಟ್ಟದ ಸಭೆ ಕರೆದಿರುವುದಾಗಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಬಿ.ಪಿ.ಚನ್ನ ಬಸವೇಶ ಸುತ್ತೋಲೆ ಹೊರಡಿಸಿದ್ದಾರೆ. ಈ ಸಭೆಯಲ್ಲಿ ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್, ಮೇಯರ್ ಪುಷ್ಪ ಲತಾ ಜಗನ್ನಾಥ್, ಜಿ.ಪಂ ಸಿಇಓ ಕೆ. ಜ್ಯೋತಿ, ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಪಾಲಿಕೆ, ಮುಡಾ ಆಯುಕ್ತ ಕಾಂತರಾಜು, ಅರಣ್ಯ ಇಲಾಖೆ ವತಿ ಯಿಂದ ಸಿಸಿಎಫ್ ಟಿ.ಹೀರಾಲಾಲ್, ಡಿಸಿಎಫ್ ಅಲೆಕ್ಸಾಂಡರ್, ಪ್ರವಾಸೋ ದ್ಯಮ ಇಲಾಖೆ

ಉಪನಿರ್ದೇಶಕ ಹೆಚ್.ಪಿ.ಜನಾರ್ಧನ್, ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ತೋಟಗಾರಿಕಾ ನಿರ್ದೇಶಕರು ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಉನ್ನತ ಮಟ್ಟದ ಸಭೆಯಲ್ಲಿ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಬೇಕೋ, ಸರಳವಾಗಿ ಆಚರಿಸಬೇಕೋ ಅಥವಾ ಸಾಂಪ್ರದಾಯಿಕ ದಸರಾ ನಡೆಸಬೇಕೋ ಎನ್ನುವುದನ್ನು ಚರ್ಚಿಸಲಾಗಿತ್ತದೆ. ಅಲ್ಲದೆ ಗಜಪಡೆ ದಿನಾಂಕವನ್ನು ಇದೇ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ರಸ್ತೆ ದುರಸ್ಥಿ, ದೀಪಾಲಂಕಾರ, ಫಲಪುಷ್ಪ ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮಗಳ ರೂಪುರೇಷೆ ಸೇರಿದಂತೆ ಇನ್ನಿತರ ವಿಷಯಗಳು ಚರ್ಚೆಗೆ ಬರಲಿವೆ.

Translate »