ಗಾಣಿಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಮೈಸೂರು

ಗಾಣಿಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

August 5, 2019

ಮೈಸೂರು, ಆ.4(ಪಿಎಂ)- ಯಾವುದೇ ಸಮುದಾಯ ಮುಖ್ಯವಾಹಿನಿಗೆ ಬರಲು ಸಂಘಟಿತರಾಗುವುದು ಅಗತ್ಯವಾಗಿದ್ದು, ಗಾಣಿಗ ಸಮುದಾಯ ಸಂಘಟಿತವಾಗಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಪ್ರಗತಿ ಕಾಣಬೇಕು ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‍ಗೌಡ ತಿಳಿಸಿದರು.

ಮೈಸೂರಿನ ಪುರಭವನದಲ್ಲಿ ಮೈಸೂರು ಜಿಲ್ಲಾ ಗಾಣಿಗರ ಸಂಘದ ವತಿಯಿಂದ ಹಮ್ಮಿ ಕೊಂಡಿದ್ದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸ್ಥಳೀಯ ಸಂಸ್ಥೆ ಗಳ ಜನಪ್ರತಿನಿಧಿಗಳಿಗೆ ಸನ್ಮಾನ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿ ಗಳು ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಗುರುತಿಸಿ ಗೌರವಿಸುತ್ತಿರುವುದು ಸಂಘ ಟನೆಗೆ ಪೂರಕವಾಗಿದೆ. ಸಮುದಾಯದ ಪ್ರತಿಯೊಬ್ಬರೂ ಸಂಘಟಿತರಾಗಲು ಒತ್ತು ನೀಡಬೇಕು. ಆಗ ಮಾತ್ರವೇ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಸಮುದಾಯದಲ್ಲಿರುವ ಸುಮಾರು 50 ಲಕ್ಷ ಜನರು ಒಗ್ಗಟ್ಟಾದರೆ ರಾಜಕಾರಣಿ ಗಳು ನಿಮ್ಮನ್ನು ಹುಡುಕಿಕೊಂಡು ಬರು ತ್ತಾರೆ. ಸಮುದಾಯದಿಂದ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಸಾಧನೆಗೈಯುವ ಮೂಲಕ ಸಮುದಾಯ ಮತ್ತು ಸಮಾಜಕ್ಕೆ ಒಳಿತು ಮಾಡಬೇಕು ಎಂದರು.

ಇದೇ ವೇಳೆ ವಿವಿಧ ಸ್ಥಳೀಯ ಸಂಸ್ಥೆ ಗಳಿಗೆ ಆಯ್ಕೆಯಾದ ಸಮುದಾಯದ ಜನ ಪ್ರತಿನಿಧಿಗಳಾದ ಕೆಆರ್ ನಗರ ಪುರಸಭಾ ಸದಸ್ಯರಾದ ಉಮೇಶ್, ಶಾರದಾ ನಾಗೇಶ್, ನಂಜನಗೂಡು ನಗರಸಭಾ ಸದಸ್ಯೆ ನಂದಿನಿ ವೆಂಕಟೇಶ್, ನಾಗಮಂಗಲ ಪುರಸಭಾ ಸದಸ್ಯ ರಮೇಶ್, ಮಳವಳ್ಳಿ ಪುರಸಭಾ ಸದಸ್ಯ ರವಿ, ಪಾಂಡವಪುರ ಪುರಸಭಾ ಸದಸ್ಯ ಅಶೋಕ್, ಕನಕಪುರ ನಗರಸಭಾ ಸದಸ್ಯ ಗಂಗಾಧರ್ ಅವರನ್ನು ಸನ್ಮಾನಿಸ ಲಾಯಿತು. ಅಲ್ಲದೆ, ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉನ್ನತ ದರ್ಜೆ ಯಲ್ಲಿ ತೇರ್ಗಡೆ ಹೊಂದಿದ್ದ ಜಿಲ್ಲೆಯ 100ಕ್ಕೂ ಹೆಚ್ಚು ಸಮುದಾಯದ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮೈಸೂರು ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಎನ್.ಸಿ.ಉಮೇಶ್, ಉಪಾಧ್ಯಕ್ಷ ಕೃಷ್ಣ ಶೆಟ್ಟಿ, ಗಾಣಿಗ ಸಮುದಾಯದ ಮುಖಂಡ ರಾದ ಹಂಪಾಪುರದ ಮಂಜು, ಸತೀಶ್, ಮಹೇಶ್, ಕೃಷ್ಣಪ್ಪ, ಚಲುವರಾಜ್, ಸುರೇಶ್ ಮತ್ತಿತರರು ಹಾಜರಿದ್ದರು.

Translate »