ಮೈಸೂರು,ಆ.7-ಕೊಡಗಿನ ಮಾಜಿ ಸೈನಿಕರ ಕ್ಷೇಮಾಭ್ಯುದಯ (ಮೈಸೂರು ಪೂರ್ವ) ಸಂಘದ ವಾರ್ಷಿಕ ಸಭೆ ಇತ್ತೀ ಚೆಗೆ ಬನ್ನೂರು ರಸ್ತೆಯ ಚಾಮುಂಡೇಶ್ವರಿ ಕನ್ವೆನ್ಷನ್ ಹಾಲ್‍ನಲ್ಲಿ ನಡೆಯಿತು. ಚಾಮರಾಜನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಹಾಗೂ ಸಮಾಜ ಸೇವಕರಾದ ಸಿಂಗ್ರಿಗೌಡ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಕಂಜಿತಂಡ ಅಯ್ಯಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ನಾಗರಿಕ ಸೌಕರ್ಯ (ಸಿಎ) ನಿವೇಶನ ವನ್ನು ಪಡೆದು ವಿವಿಧೋದ್ದೇಶ ಸಮು ದಾಯ ಭವನವನ್ನು ನಿರ್ಮಿಸಲು ಪ್ರಯತ್ನ ಗಳು ನಡೆಯುತ್ತಿವೆ ಎಂದು…
ಮೈಸೂರಲ್ಲಿ ಬಿಜೆಪಿ ವತಿಯಿಂದ ಸುಷ್ಮಾ ಸ್ವರಾಜ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ
August 8, 2019ಮೈಸೂರು, ಆ.7(ಪಿಎಂ)- ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ರಾಷ್ಟ್ರ ನಾಯಕಿ ಸುಷ್ಮಾಸ್ವರಾಜ್ ಅವರ ನಿಧನದ ಹಿನ್ನೆಲೆಯಲ್ಲಿ ಮೈಸೂರಿನ ಬಿಜೆಪಿ ಕಚೇರಿ ಸಚಿನ್ ರಾಜೇಂದ್ರ ಭವನದಲ್ಲಿ ಬುಧ ವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಿಜೆಪಿ ಮುಖಂಡರು, ಪಾಲಿಕೆ ಸದ ಸ್ಯರು ಹಾಗೂ ಕಾರ್ಯಕರ್ತರು ಶ್ರದ್ಧಾಂ ಜಲಿ ಸಭೆಯಲ್ಲಿ ಪಾಲ್ಗೊಂಡು ಅಗಲಿದ ನಾಯಕಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಸುಷ್ಮಾ ಸ್ವರಾಜ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಿಮಿಷಗಳ ಕಾಲ ಮೌನಾಚರಣೆ ಮಾಡಿ, ಬಳಿಕ ನುಡಿ ನಮನ ಸಲ್ಲಿಸಿದರು. ಇದೇ ವೇಳೆ ಬಿಜೆಪಿ…
ನಿರಾಶ್ರಿತರ ತಾಣವಾಗಿರುವ ಬಸ್ ತಂಗುದಾಣಗಳು
August 8, 2019ಮೈಸೂರು,ಆ.7(ಆರ್‍ಕೆ)-ಬಸ್ಸಿಗಾಗಿ ಕಾಯುವ ಪ್ರಯಾ ಣಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಬಸ್ ತಂಗು ದಾಣಗಳೀಗ ನಿರಾಶ್ರಿತರ ತಾಣವಾಗಿ ಪರಿವರ್ತನೆಯಾಗು ತ್ತಿವೆ. ಬಸ್ಸುಗಳಿಗೆ ಕಾಯುವ ಪ್ರಯಾಣಿಕರು ಮಳೆ, ಗಾಳಿ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಾಗೂ ತಮ್ಮ ಲಗ್ಗೇಜುಗಳ ನ್ನಿಟ್ಟುಕೊಂಡು ಕುಳಿತುಕೊಳ್ಳಲೆಂದು ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ತಂಗುದಾಣಗಳನ್ನು ನಿರ್ಮಿಸಲಾ ಗಿದೆ. ಆದರೆ, ಅಲ್ಲಿ ಆಸ್ಪತ್ರೆಗೆ ಬರುವ ನಿತ್ರಾಣ ರೋಗಿಗಳು, ವೃದ್ಧರು, ಅಪರಿಚಿತರು, ಕೂಲಿ ಕಾರ್ಮಿಕರು ಕುಳಿತು ಕಾಲ ಕಳೆಯುತ್ತಿದ್ದಾರಲ್ಲದೆ, ನಿರಾಶ್ರಿತರು ಮಲಗಿ ನಿದ್ರಿಸಲು ಆಶ್ರಯ ತಾಣವಾಗಿಸಿಕೊಂಡಿದ್ದಾರೆ. ಅವರು ಆವರಿಸಿಕೊಂಡಿರು ವುದರಿಂದ ಪ್ರಯಾಣಿಕರು ತಂಗುದಾಣದ…
ಜಮ್ಮು-ಕಾಶ್ಮೀರ ಪುನಾರಚನಾ ಮಸೂದೆಗೆ ಲೋಕಸಭೆ ಅಂಗೀಕಾರ
August 7, 2019ನವದೆಹಲಿ, ಆ. 6- ಜಮ್ಮು-ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳಿಗೆ ಕೇಂದ್ರಾ ಡಳಿತ ಸ್ಥಾನಮಾನ ನೀಡುವ ಜಮ್ಮು-ಕಾಶ್ಮೀರ ಪುನಾರಚನಾ ಮಸೂದೆ ಲೋಕ ಸಭೆಯಲ್ಲಿ ಅಂಗೀಕಾರವಾಗಿದೆ. ಇದ ರೊಂದಿಗೆ ಕಾನೂನಾಗಿ ಜಾರಿಗೊಂಡಿದೆ. ಇಂದು ಲೋಕಸಭೆಯಲ್ಲಿ ಮಸೂದೆ ಮಂಡಿಸಿದ ನಂತರ ಗೃಹ ಸಚಿವ ಅಮಿತ್ ಷಾ ಮಸೂದೆ ಮೇಲಿನ ಚರ್ಚೆಯ ವೇಳೆ ವಿಪಕ್ಷ ನಾಯಕರ ಆಕ್ಷೇಪಗಳಿಗೆ ಸಮರ್ಥ ಉತ್ತರ ನೀಡಿದರು. ಈ ಮಧ್ಯೆ ಸರ್ಕಾರದ ನಡೆಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ನಾಯಕ ಅಧಿ ರಂಜನ್ ಚೌಧರಿ ವಿವಾ ದಕ್ಕೆ ಗುರಿಯಾದರು. ಅಂತೂ…
ನಾವು ಹಿಂದುಳಿಯಲು ಕಾಂಗ್ರೆಸ್ ಕಾರಣ
August 7, 2019ನವದೆಹಲಿ, ಆ.6- ನಮ್ಮ ಪ್ರದೇಶ ಹಿಂದುಳಿಯಲು ಕಾಂಗ್ರೆಸ್ ಮತ್ತು ಸಂವಿಧಾನದ 370ನೇ ವಿಧಿ ಕಾರಣ ಎಂದು ಲಡಾಖ್ ಬಿಜೆಪಿ ಸಂಸದ ತ್ಸೆರಿಂಗ್ ನಮ್‍ಗ್ಯಾಲ್ ಅಭಿಪ್ರಾಯಪಟ್ಟಿದ್ದಾರೆ. 370ನೇ ವಿಧಿಯ ರದ್ದು ಚರ್ಚೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಹಿಂದಿನ ರಾಜ್ಯ ಸರ್ಕಾರಗಳು ಸರ್ಕಾರಿ ಕೆಲಸಗಳನ್ನು ನೀಡುವ ವಿಚಾರದಲ್ಲಿಯೂ ಸಹ ಲಡಾಖ್ ಜನರಿಗೆ ತಾರತಮ್ಯ ಮಾಡಿವೆ. ಇಷ್ಟು ವರ್ಷ ಕಳೆದರೂ ಲಡಾಖ್‍ನಲ್ಲಿ ಯಾವುದೊಂದೂ ಉನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿ ಸಲಿಲ್ಲ. ಇದು ಸಮಾನತೆಯೇ ಎಂದು ಪ್ರಶ್ನಿಸಿದ ಅವರು ಇತ್ತೀಚೆಗೆ ಪ್ರಧಾನಿ…
ಆ.9ಕ್ಕೆ ಸಚಿವ ಸಂಪುಟ ವಿಸ್ತರಣೆ
August 7, 2019ಬೆಂಗಳೂರು, ಆ.6(ಕೆಎಂಶಿ)-ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಮಂತ್ರಿಮಂಡಲವನ್ನು ಆಗಸ್ಟ್ 9ರ ಶುಕ್ರವಾರದಂದು ವಿಸ್ತರಣೆ ಮಾಡಲಿದ್ದಾರೆ. ಮೊದಲ ಹಂತದಲ್ಲಿ 15 ಮಂದಿಯನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದು, ಈ ಬಾರಿ ಉಪಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿ ಮತ್ತು ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವವರು ಯಡಿಯೂರಪ್ಪನವರ ಮಂತ್ರಿಮಂಡಲದಲ್ಲಿ ಸಚಿವ ರಾಗಿ ಕಾರ್ಯನಿರ್ವಹಿಸಬೇಕಾಗಿದೆ. ದೆಹಲಿಯಲ್ಲಿ ವರಿಷ್ಠರು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದ್ದಂತೆ ರಾಜ್ಯದ ಮೇಲಿನ ಹಿಡಿತವನ್ನು ಪೂರ್ಣವಾಗಿ ತೆಗೆದುಕೊಂಡಿ ದ್ದಾರೆ. ಹೀಗಾಗಿ ಅಲ್ಲಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ದಕ್ಷಿಣ ಭಾರತದಲ್ಲಿ ಬಿಜೆಪಿ…
ಸುಷ್ಮಾ ಸ್ವರಾಜ್ ಇನ್ನಿಲ್ಲ
August 7, 2019ನವದೆಹಲಿ, ಆ.6- ಬಿಜೆಪಿ ಪಾಲಿನ ಫೈರ್ ಬ್ರಾಂಡ್ ನಾಯಕಿ ಎಂದೇ ಗುರುತಿಸಿಕೊಂಡಿದ್ದ ಭಾರತದ ವಿದೇಶಾಂಗ ಸಚಿವೆಯಾಗಿ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯರಾಗಿದ್ದ ಸುಷ್ಮಾ ಸ್ವರಾಜ್ (67) ಹೃದಯಾ ಘಾತದಿಂದಾಗಿ ಮಂಗಳವಾರ ರಾತ್ರಿ 11.20ರ ವೇಳೆಗೆ ನಿಧನರಾದರು. ಸದಾ ನಗುಮೊಗದ, ಅತ್ಯಂತ ಸ್ನೇಹಶೀಲ ಸ್ವಭಾವದ, ಅತ್ಯುತ್ತಮ ವಾಗ್ಮಿ, ಉತ್ತಮ ಸಂಸದೀಯ ಪಟು, ಅತ್ಯಂತ ಚಟುವಟಿಕೆಯ ವ್ಯಕ್ತಿ ಎನಿಸಿಕೊಂಡಿದ್ದ, ತಮ್ಮ ವಿಶೇಷ ಸ್ನೇಹತ್ವದಿಂದ ವಿರೋಧ ಪಕ್ಷಗಳ ನಾಯಕರ ಮೆಚ್ಚುಗೆಯನ್ನೂ ಗಳಿಸಿದ್ದ ಸುಷ್ಮಾ ಅವರ ನಿರ್ಗಮನ ಬಿಜೆಪಿ ಪಾಲಿಗಷ್ಟೇ ಅಲ್ಲ, ದೇಶದ…
ಕೊಡಗಲ್ಲಿ ‘ಮಳೆರಾಯ’ನ ಅಬ್ಬರ
August 7, 2019ಮಡಿಕೇರಿ, ಆ.6- ಕೊಡಗು ಜಿಲ್ಲೆಯಾದ್ಯಂತ ಮಂಗಳವಾರ ಭಾರೀ ಗಾಳಿ, ಗುಡುಗು ಸಹಿತ ಮಳೆ ಅಬ್ಬರಿಸಿದ್ದು, ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲಾದ್ಯಂತ ಆ.7ರವರೆಗೆ ‘ಆರೆಂಜ್ ಅಲರ್ಟ್’ ಹಾಗೂ ಬುಧವಾರದಿಂದ ಆ.9ರವರೆಗೆ ‘ರೆಡ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಈ ಸಮಯದಲ್ಲಿ 204.4ಮಿ.ಮೀ.ಗೂ ಅಧಿಕ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಶ್ಲೇಷ ಮಳೆಯ ಆರ್ಭಟ ನೋಡಿದರೆ ಮತ್ತೆ ಪ್ರಾಕೃತಿಕ ವಿಕೋಪಗಳು ಘಟಿ ಸಲಿದೆಯೇ ಎಂಬ ಆತಂಕ ಕಾವೇರಿ ತವರಿನ ಜನರನ್ನು ಕಾಡುತ್ತಿದೆ. ಮಳೆಯ ಹಿನ್ನೆಲೆಯಲ್ಲಿ ಮಂಗಳವಾರ…
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದು
August 6, 2019ಪ್ರಧಾನಿ ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರ ನವದೆಹಲಿ, ಆ.5-ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ಮತ್ತು 35ಎ ವಿಧಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿ ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಮಾತು ಉಳಿಸಿಕೊಂಡಿದ್ದಾರೆ. ಪ್ರತಿಪಕ್ಷಗಳ ಭಾರೀ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಕೈಗೊಂಡ ಈ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯು ತ್ತಿವೆ. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ…
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದತಿ ಹಿನ್ನೆಲೆ: ಈ ವಿಧಿಗಳಲ್ಲಿ ಏನಿದೆ
August 6, 2019ಸಂವಿಧಾನದ ವಿಧಿ 370 ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದ್ದ ವಿಚಾರ ಹಾಗೂ ಕಲಂ 370ರ ಹುಟ್ಟಿನ ಹಿಂದೆ ದೊಡ್ಡ ಇತಿಹಾಸವಿದೆ. 1947ರಲ್ಲಿ ಭಾರತ ಮತ್ತು ಪಾಕ್ ಸ್ವತಂತ್ರ ರಾಷ್ಟ್ರಗಳಾಗಿ ಅಸ್ತಿತ್ವಕ್ಕೆ ಬಂದರೂ ಕಾಶ್ಮೀರದ ರಾಜ ಹರಿಸಿಂಗ್ ಮಾತ್ರ ಯಾವ ರಾಷ್ಟ್ರದ ಜೊತೆಗೆ ಒಂದಾಗದೆ ಸ್ವತಂತ್ರವಾಗಿ ಉಳಿಯುವ ಬಯಕೆಯನ್ನು ಹೊಂದಿದ್ದರು. ಆದರೆ, ಕಣಿವೆ ರಾಜ್ಯದ ಮೇಲೆ 1947ರಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದ ಸಂದರ್ಭದಲ್ಲಿ ರಾಜ ಹರಿಸಿಂಗ್ ಭಾರತದ ಸಹಕಾರ ಕೋರುತ್ತಾರೆ. ಅಲ್ಲದೆ ಭಾರತದ ಜೊತೆ…










