ಮೈಸೂರಲ್ಲಿ ಬಿಜೆಪಿ ವತಿಯಿಂದ ಸುಷ್ಮಾ ಸ್ವರಾಜ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ
ಮೈಸೂರು

ಮೈಸೂರಲ್ಲಿ ಬಿಜೆಪಿ ವತಿಯಿಂದ ಸುಷ್ಮಾ ಸ್ವರಾಜ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ

August 8, 2019

ಮೈಸೂರು, ಆ.7(ಪಿಎಂ)- ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ರಾಷ್ಟ್ರ ನಾಯಕಿ ಸುಷ್ಮಾಸ್ವರಾಜ್ ಅವರ ನಿಧನದ ಹಿನ್ನೆಲೆಯಲ್ಲಿ ಮೈಸೂರಿನ ಬಿಜೆಪಿ ಕಚೇರಿ ಸಚಿನ್ ರಾಜೇಂದ್ರ ಭವನದಲ್ಲಿ ಬುಧ ವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಿಜೆಪಿ ಮುಖಂಡರು, ಪಾಲಿಕೆ ಸದ ಸ್ಯರು ಹಾಗೂ ಕಾರ್ಯಕರ್ತರು ಶ್ರದ್ಧಾಂ ಜಲಿ ಸಭೆಯಲ್ಲಿ ಪಾಲ್ಗೊಂಡು ಅಗಲಿದ ನಾಯಕಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಸುಷ್ಮಾ ಸ್ವರಾಜ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಿಮಿಷಗಳ ಕಾಲ ಮೌನಾಚರಣೆ ಮಾಡಿ, ಬಳಿಕ ನುಡಿ ನಮನ ಸಲ್ಲಿಸಿದರು.

ಇದೇ ವೇಳೆ ಬಿಜೆಪಿ ಹಿರಿಯ ಮುಖಂ ಡರೂ ಆದ ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಮಾತನಾಡಿ, ಸುಷ್ಮಾ ಸ್ವರಾಜ್ ಚಿಕ್ಕವಯಸ್ಸಿನಲ್ಲೇ ಶಾಸಕರಾಗಿ, ಸಂಸದರಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿ ದರು. ದೆಹಲಿ ಮುಖ್ಯಮಂತ್ರಿಯಾಗಿಯೂ ಯಶಸ್ವಿಯಾಗಿ ಆಡಳಿತ ನಡೆಸಿದರು. ಜೊತೆಗೆ ವಿದೇಶಾಂಗ ಸಚಿವರಾಗಿಯೂ ಅನೇಕ ಕೊಡುಗೆ ನೀಡಿದರು ಎಂದು ಸ್ಮರಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ಸ್ಪರ್ಧೆ ಮಾಡುವುದಿಲ್ಲ ಎಂಬ ನಿಲುವು ತಾಳಿ ದರು. ಇದು ಅವರು ನಮಗೆ ನೀಡಿದ ಆದರ್ಶ. ಕೆಲವರು ವಯೋಸಹಜ ಅನಾ ರೋಗ್ಯವಿದ್ದರೂ ಅಧಿಕಾರಕ್ಕೆ ಆಸೆಪಡು ತ್ತಾರೆ. ಆದರೆ ಇವರು ಅದರಿಂದ ಹೊರ ತಾದವರು. ದೇಶ ಹಾಗೂ ಪಕ್ಷದ ಸಿದ್ಧಾಂತ ಮುಖ್ಯ ಎಂದು ಬದುಕಿದವರು. ಇವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕು ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ. ರಾಜೇಂದ್ರ, ವಿಭಾಗ ಸಂಘಟನಾ ಕಾರ್ಯ ದರ್ಶಿ ಸುರೇಶ್ ಬಾಬು, ವಿಭಾಗ ಸಂಘ ಟನಾ ಸಹ ಪ್ರಮುಖ್ ಪಣೀಶ್, ಮಾಧ್ಯಮ ಪ್ರಮುಖ್ ಪ್ರಭಾಕರ್ ಸಿಂಧ್ಯಾ, ಮಹಿಳಾ ಮೋರ್ಚಾ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್, ಪ್ರಧಾನ ಕಾರ್ಯದರ್ಶಿ ಹೇಮಾ ನಂದೀಶ್, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮುಖಂಡರಾದ ಮುರಳಿ, ಅನಿಲ್ ಥಾಮಸ್, ತಮ್ಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.

Translate »