ಕೊಡಗಲ್ಲಿ `ಮುಂಗಾರು’ ಬಿರುಸು
ಮೈಸೂರು

ಕೊಡಗಲ್ಲಿ `ಮುಂಗಾರು’ ಬಿರುಸು

August 5, 2019

ಮಡಿಕೇರಿ,ಆ.4- ಕೊಡಗು ಜಿಲ್ಲೆಯಲ್ಲಿ ಮತ್ತೆ ಮುಂಗಾರು ಮಳೆ ಬಿರುಸು ಪಡೆ ದಿದ್ದು, ಆ.9ರವರೆಗೆ ಮಳೆ ಮುಂದುವರಿ ಯಲಿದೆ ಎಂದು ಭಾರತೀಯ ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಆಶ್ಲೇಷ ಮಳೆ ಸುರಿ ಯುತ್ತಿದ್ದು, ಕೆಲವೆಡೆ ಗಾಳಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ನಾಪೋಕ್ಲು-ಭಾಗಮಂಡಲ ರಸ್ತೆಯ ನೆಲಜಿ ಜಂಕ್ಷನ್ ಬಳಿ ರಸ್ತೆಗೆ ಅಡ್ಡಲಾಗಿ ಮರ ಉರುಳಿ ಬಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತವಾ ಗಿತ್ತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸಾರ್ವಜನಿಕರು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಭಾಗ ಮಂಡಲದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನೆÀ್ನಲೆಯಲ್ಲಿ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ಜನವರಿಯಿಂದ ಇಲ್ಲಿವರೆಗೆ ಭಾಗಮಂಡಲದಲ್ಲಿ 105 ಮೀ.ಮೀ ಮಳೆಯಾಗಿದ್ದು, ಭತ್ತದ ಕೃಷಿ ಕಾರ್ಯ ದಲ್ಲಿ ಪ್ರಗತಿ ಕಂಡು ಬಂದಿದೆ. ಆದರೆ ಈ ವರ್ಷದ ಮುಂಗಾರು ಮಳೆಯಲ್ಲಿ ಕುಸಿತ ಕಂಡು ಬಂದಿದೆ. ವಿರಾಜಪೇಟೆ ತಾಲೂಕಿ ನಲ್ಲೂ ಭಾರೀ ಮಳೆಯಾಗಿದ್ದು, ನಾಂಗಾಲ ಗ್ರಾಮದಲ್ಲಿ ಭೂಮಿ ಕುಸಿದು ಮನೆ ಬಿದ್ದ ಪರಿಣಾಮ ಅಲ್ಪ ಪ್ರಮಾಣದ ಹಾನಿಯಾ ಗಿದೆ. ಸ್ಥಳಕ್ಕೆ ವಿರಾಜಪೇಟೆ ತಹಸೀಲ್ದಾರ್ ಪುರಂದರ ಮತ್ತು ಗ್ರಾಪಂ ಅಧಿಕಾರಿ ಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಗೋಣಿಕೊಪ್ಪದ ವೆಂಕಟಪ್ಪ ಬಡಾವಣೆ ಪಕ್ಕದಲ್ಲಿ ಹರಿಯುತ್ತಿರುವ ಕೀರೆ ಹೊಳೆ ಉಕ್ಕಿ ಹರಿದು ಬಡಾವಣೆಯಲ್ಲಿರುವ 12ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೊಳಚೆ ನೀರಿನಿಂದ ಮನೆಯೊಳಗಿದ್ದ ವಸ್ತುಗಳಿಗೂ ಅಪಾರ ಹಾನಿಯಾಗಿದೆ. ಕೀರೆ ಹೊಳೆಯ ಹೂಳು ತೆಗೆಯದಿದ್ದ ರಿಂದ ಈ ಘಟನೆ ಸಂಭವಿಸಿದೆ ಎನ್ನ ಲಾಗುತ್ತಿದೆ. ಭಾನುವಾರ ಬೆಳಗಿನಿಂದಲೇ ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ನದಿ ತೊರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ದಕ್ಷಿಣ ಕೊಡಗಿನ ಪೊನ್ನಂಪೇಟೆ ವ್ಯಾಪ್ತಿಯಲ್ಲಿಯೂ ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರಿ ಮಳೆಯಾಗಿದ್ದು, 5 ಇಂಚು ಮಳೆ ಸುರಿದಿದೆ ಎಂದು ಅಂದಾ ಜಿಸಲಾಗಿದೆ. ಮಳೆಯಿಂದಾಗಿ ಲಕ್ಷ್ಮಣ ತೀರ್ಥ ನದಿಯಲ್ಲಿ ಏಕಾಏಕಿ ನೀರಿನ ಪ್ರಮಾಣ ಏರಿಕೆಯಾಗಿ ನದಿ ಪಾತ್ರದ ಭತ್ತದ ಗದ್ದೆಗಳು ನೀರಿನ ಪ್ರವಾಹಕ್ಕೆ ಸಿಲುಕಿವೆ. ಇದರಿಂದ ಭತ್ತದ ನಾಟಿಗೂ ಹಾನಿಯಾದ ಬಗ್ಗೆಯೂ ವರದಿಯಾಗಿದೆ. ಶ್ರೀಮಂಗಲ, ಹುದಿಕೇರಿ, ಪರಕಟಗೇರಿ ಸೇರಿದಂತೆ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿಯೂ 2 ದಿನಗಳಿಂದ ಭಾರೀ ಮಳೆಯಾಗುತ್ತಿದೆ.

ಇಲ್ಲಿನ ನಾಪೋಕ್ಲು ಹಾಗೂ ಕಕ್ಕಬ್ಬೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಭಾರೀ ಮಳೆಯಾಗಿದೆ. ಇದರಿಂದ ನಾಪೋಕ್ಲು-ನೆಲಜಿ ಸಂಪರ್ಕಿಸುವ ಸಂಪರ್ಕ ಸೇತುವೆ ಮುಳುಗಡೆಯಾಗಿ ರಸ್ತೆ ಸಂಚಾರ ನಿಲುಗಡೆ(ಬ್ಲಾಕ್)ಯಾಗಿದೆ. ಭಾರೀ ಮಳೆಯಿಂದ ಸೇತುವೆ ಮೇಲೆ ಸುಮಾರು 2 ಅಡಿಯಷ್ಟು ನೀರು ಹರಿಯುತ್ತಿದ್ದು, ಇನ್ನೂ 2 ದಿನಗಳ ಕಾಲ ಸೇತುವೆ ಮೇಲೆ ಇದೇ ರೀತಿ ನೀರು ಹರಿಯಲಿದೆ ಎಂದು ಸುತ್ತಮುತ್ತಲ ಗ್ರಾಮಸ್ಥರು ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ 39.53 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 59.4 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 50.2 ಮಿ.ಮೀ ಹಾಗೂ ಸೋಮವಾರ ಪೇಟೆ ತಾಲೂಕಿನಲ್ಲಿ 9 ಮಿ.ಮೀ. ಮಳೆಯಾಗಿದೆ. ಮಡಿಕೇರಿ ಕಸಬಾ 34, ನಾಪೋಕ್ಲು 31.2, ಸಂಪಾಜೆ 22, ಭಾಗಮಂಡಲ 150.4, ವಿರಾಜಪೇಟೆ ಕಸಬಾ 68.8, ಹುದಿಕೇರಿ 48.6, ಶ್ರೀಮಂಗಲ 28.2, ಪೊನ್ನಂಪೇಟೆ 109.6, ಅಮ್ಮತ್ತಿ 22, ಬಾಳೆಲೆ 24.1, ಸೋಮವಾರಪೇಟೆ ಕಸಬಾ 6.2, ಶನಿವಾರಸಂತೆ 8.2, ಶಾಂತಳ್ಳಿ 12.2, ಕೊಡ್ಲಿಪೇಟೆ 11.4, ಕುಶಾಲನಗರ 4.2, ಸುಂಟಿಕೊಪ್ಪ 12.2 ಮಿ.ಮೀ. ಮಳೆಯಾಗಿದೆ.

Translate »