ಮೈಸೂರು

ಅತಿ ದೊಡ್ಡ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ
ಮೈಸೂರು

ಅತಿ ದೊಡ್ಡ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ

May 18, 2019

ನವದೆಹಲಿ: ಅತಿ ದೊಡ್ಡ ಬಹುಮತದೊಂದಿಗೆ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ನಮ್ಮ ಸರ್ಕಾರದ ಐದು ವರ್ಷಗಳ ಸಾಧನೆಗಳ ಬಗ್ಗೆ ತೃಪ್ತಿಯಿದೆ ಎಂದು ಹೇಳಿದ್ದಾರೆ. ಏಳನೇ ಹಾಗೂ ಕೊನೆಯ ಹಂತದ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಬಿಜೆಪಿ ಕಚೇರಿ ಯಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು….

ಶೂಟೌಟ್ ಪ್ರಕರಣ: ಸಿಐಡಿ ತನಿಖೆ
ಮೈಸೂರು

ಶೂಟೌಟ್ ಪ್ರಕರಣ: ಸಿಐಡಿ ತನಿಖೆ

May 18, 2019

ಮೈಸೂರು: ಗುರುವಾರ ಮೈಸೂರಿನಲ್ಲಿ ನಡೆದ ಶೂಟೌಟ್‍ನಲ್ಲಿ ಓರ್ವ ಬಲಿಯಾದ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. ಇಂದು ಬೆಳಿಗ್ಗೆಯೇ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದ ಸಿಐಡಿ ತಂಡದ ಅಧಿಕಾರಿಗಳು ಮೈಸೂರಿಗೆ ಆಗಮಿಸಿದ್ದು, ಪ್ರಕರಣ ದಾಖಲಾಗಿರುವ ವಿಜಯನಗರ ಠಾಣೆಯಲ್ಲಿ ಸಂಬಂಧಿಸಿದ ದಾಖಲೆಗಳನ್ನು ಪಡೆದಿರುವ ಅವರು, ಠಾಣಾಧಿಕಾರಿಗಳಿಂದ ಘಟನೆ ಕುರಿತಂತೆ ಮಾಹಿತಿ ಸಂಗ್ರಹಿಸಿದರು. ಪ್ರಕರಣದ ಸಂಬಂಧ ದೂರು ನೀಡಿರುವ ವಿಜಯನಗರ ಠಾಣೆ ಇನ್‍ಸ್ಪೆಕ್ಟರ್ ಬಿ.ಜಿ.ಕುಮಾರ್, ಬಾತ್ಮೀದಾರನೆನ್ನಲಾದ ವಿಜಯಕುಮಾರ್, ಘಟನೆ ನಡೆದಾಗ ಜೊತೆಯಲ್ಲಿದ್ದ ಎಎಸ್‍ಐ, ಇನ್ನಿತರೆ ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿ, ಪ್ರಾಥಮಿಕ ಹಂತದ ಮಾಹಿತಿಯನ್ನು ಕಲೆ…

ಸುಕ್ವಿಂದರ್ ಮೃತದೇಹವಿರುವ ಶವಾಗಾರಕ್ಕೆ ಭಾರೀ ಭದ್ರತೆ
ಮೈಸೂರು

ಸುಕ್ವಿಂದರ್ ಮೃತದೇಹವಿರುವ ಶವಾಗಾರಕ್ಕೆ ಭಾರೀ ಭದ್ರತೆ

May 18, 2019

ಮೈಸೂರು: ಪೊಲೀಸರ ಶೂಟೌಟ್‍ಗೆ ಬಲಿಯಾಗಿರುವ ಪಂಜಾಬ್ ಮೂಲದವನೆನ್ನಲಾದ ಸುಕ್ವಿಂ ದರ್ ದೇಹವಿರಿಸಿರುವ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಮಧ್ಯಾಹ್ನ 2.30 ಗಂಟೆ ವೇಳೆಗೆ ಕೆ.ಆರ್. ಆಸ್ಪತ್ರೆ ಅಪಘಾತ ತುರ್ತು ಚಿಕಿತ್ಸಾ ವಿಭಾಗ ದಿಂದ ಸುಕ್ವಿಂದರ್ ದೇಹವನ್ನು ಪೊಲೀಸ್ ಸರ್ಪಗಾವಲಿನಲ್ಲಿ ಆಂಬುಲೆನ್ಸ್ ಮೂಲಕ ಶವಾಗಾರಕ್ಕೆ ಸ್ಥಳಾಂತರ ಮಾಡಿ, ಮಂಡಿ ಠಾಣೆ ಇನ್ಸ್‍ಪೆಕ್ಟರ್ ಬಸವರಾಜು ನೇತೃತ್ವದಲ್ಲಿ ದಿನದ 24 ಗಂಟೆಯೂ ಬಂದೋಬಸ್ತ್ ವ್ಯವಸ್ಥೆಗಾಗಿ 3 ಪಾಳಿಯಲ್ಲಿ ಸಿಬ್ಬಂದಿಯನ್ನು ಸ್ಥಳದಲ್ಲಿ…

ಮಳೆನೀರು ಕೊಯ್ಲು ಅಳವಡಿಸಿಕೊಳ್ಳದ ಕಟ್ಟಡಗಳಿಗೆ ಹೆಚ್ಚುವರಿ ನೀರಿನ ಶುಲ್ಕ
ಮೈಸೂರು

ಮಳೆನೀರು ಕೊಯ್ಲು ಅಳವಡಿಸಿಕೊಳ್ಳದ ಕಟ್ಟಡಗಳಿಗೆ ಹೆಚ್ಚುವರಿ ನೀರಿನ ಶುಲ್ಕ

May 18, 2019

ಮೈಸೂರು: ಮೈಸೂರು ನಗರ ಹಾಗೂ ಹೊರ ವಲಯಗಳಲ್ಲಿ ಮಳೆ ನೀರು ಕೊಯ್ಲು ಅಳ ವಡಿಸಿಕೊಳ್ಳದೇ 50*80 ಹಾಗೂ ಅದಕ್ಕೂ ಮೇಲ್ಪಟ್ಟ ಅಳತೆಯಲ್ಲಿ ನಿರ್ಮಿ ಸಿರುವ ಕಟ್ಟಡಗಳಿಗೆ ಹೆಚ್ಚುವರಿ ನೀರಿನ ಶುಲ್ಕ ವಿಧಿಸಲು ಮೈಸೂರು ಮಹಾನಗರಪಾಲಿಕೆ ಆಯುಕ್ತ ರಾದ ಶಿಲ್ಪಾನಾಗ್ ಆದೇಶಿಸಿದ್ದಾರೆ. ಈ ಅಳತೆಯ ಅಪಾರ್ಟ್‍ಮೆಂಟ್‍ಗಳು, ವಾಣಿಜ್ಯ ಕಟ್ಟಡಗಳು, ಹೋಟೆಲ್‍ಗಳು, ಸರ್ಕಾರಿ ಕಚೇರಿಗಳು, ನಗರಪಾಲಿಕೆ ಉದ್ಯಾ ನವನಗಳು ಹಾಗೂ ಮನೆಗಳಿಗೆ ಈ ಆದೇಶ ಅನ್ವಯವಾಗಲಿದ್ದು, ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದೇ ಇರುವ ಕಟ್ಟಡಗಳಿಗೆ ಈ ತಿಂಗಳಿನಿಂದ 5 ತಿಂಗಳ…

ಮೇ 21ರಂದು ಜೆಡಿಎಸ್ ಶಾಸಕಾಂಗ ಪಕ್ಷ ಸಭೆ
ಮೈಸೂರು

ಮೇ 21ರಂದು ಜೆಡಿಎಸ್ ಶಾಸಕಾಂಗ ಪಕ್ಷ ಸಭೆ

May 18, 2019

ಬೆಂಗಳೂರು: ಲೋಕ ಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲೂ ಮಹತ್ತರ ತಿರುವು ಗಳು ಪಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ, ಶಾಸಕರು ಮತ್ತು ಸಂಸದರ ಅಭಿಪ್ರಾಯ ಕೇಳಲು ಮುಂದಾಗಿದ್ದಾರೆ. ಫಲಿತಾಂಶ ಪ್ರಕಟಗೊಳ್ಳುವ 2 ದಿನ ಮುನ್ನವೇ ಅಂದರೆ ಮೇ 21ರಂದು ತಮ್ಮ ಪಕ್ಷದ ಶಾಸಕಾಂಗ ಪಕ್ಷದ ಸಭೆ ಕರೆದಿ ದ್ದಾರೆ. ಅಂದು ನಡೆಯಲಿರುವ ಪಕ್ಷದ ಶಾಸಕಾಂಗ ಸಭೆಗೆ ತಪ್ಪದೆ ಹಾಜರಾಗು ವಂತೆ ಜೆಡಿಎಸ್‍ನ ಎಲ್ಲ ವಿಧಾನಸಭಾ ಸದಸ್ಯರು,…

ಬೀಚನಹಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಒಂಟಿ ಸಲಗ ದಾಂಧಲೆ
ಮೈಸೂರು

ಬೀಚನಹಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಒಂಟಿ ಸಲಗ ದಾಂಧಲೆ

May 18, 2019

ಹೆಚ್.ಡಿ.ಕೋಟೆ: ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ ಇಂದು ಮುಂಜಾ ನೆಯೇ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ಗ್ರಾಮದ ಬೀದಿ ಬೀದಿಗಳಲ್ಲಿ ರಂಪಾಟ ಮಾಡಿತು. ಎಂದಿನಂತೆ ಜನರು ಮನೆಯಿಂದ ಹೊರಬರುತ್ತಿದ್ದಂತೆ ಒಂಟಿ ಸಲಗ ಪ್ರತ್ಯಕ್ಷವಾಯಿತು. ಗ್ರಾಮಸ್ಥರು ತಲ್ಲಣಗೊಂಡರು. ಗ್ರಾಮದ ನಿವಾಸಿ ಲಕ್ಷ್ಮಮ್ಮ ಎಂಬುವರು ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ ಸಂದರ್ಭ ಈ ಸಲಗವನ್ನು ನೋಡಿ ಗಾಬರಿ ಗೊಂಡು ಓಡುವಾಗ ಕೆಳಗೆ ಬಿದ್ದಿದ್ದಾರೆ. ತಲೆಗೆ ಪೆಟ್ಟಾದ ಕಾರಣ ಲಕ್ಷ್ಮಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀಚನಹಳ್ಳಿ ಗ್ರಾಮಸ್ಥರೆಲ್ಲ ಸೇರಿ ಒಂಟಿ ಸಲಗವನ್ನು ಓಡಿ ಸಲು ಪ್ರಯತ್ನಿಸುವ…

ಆನೆ ದಾಳಿ: ಮಾನಸಿಕ ಅಸ್ವಸ್ಥ ಸಾವು
ಮೈಸೂರು

ಆನೆ ದಾಳಿ: ಮಾನಸಿಕ ಅಸ್ವಸ್ಥ ಸಾವು

May 18, 2019

ಪಿರಿಯಾಪಟ್ಟಣ: ಆನೆ ದಾಳಿಯಿಂದ ಅಪರಿಚಿತ ಮಾನಸಿಕ ಅಸ್ವಸ್ಥನೋರ್ವ ಮೃತಪಟ್ಟಿರುವ ಘಟನೆ ಗುರು ವಾರ ರಾತ್ರಿ ಜರುಗಿದೆ. ತಾಲೂಕಿನ ಅಳ್ಳೂರು ಗೇಟ್‍ನ ಹುಣಸೂರು ಮತ್ತು ಗೋಣಿಕೊಪ್ಪ ರಸ್ತೆಯ ಪಕ್ಕದ ಅರಣ್ಯದ ಪೊದೆಯಲ್ಲಿ ಮೃತ ದೇಹ ದೊರೆತಿದೆ. ಬೆಳಗಿನ ಜಾವ ದಾರಿಹೋಕರು ಈ ಮೃತದೇಹವನ್ನು ಕಂಡು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಲಾಗಿ, ಸ್ಥಳಕ್ಕೆ ಪಿರಿಯಾ ಪಟ್ಟಣ ವಲಯ ಅರಣ್ಯಾಧಿಕಾರಿ ರತನ್ ಕಮಾರ್ ಭೇಟಿ ನೀಡಿ, ಪರಿಶೀಲಿಸಿದರು. ಕಳೆದ ಐದಾರು ದಿನಗಳಿಂದ ಮಾನಸಿಕ ಅಸ್ವಸ್ಥ ಗೇಟ್ ಬಳಿ ಓಡಾಡುತ್ತಿದ್ದು, ಆತನೇ ಆನೆ…

ನೀರಿನ ಕೊರತೆ: ಧರ್ಮಸ್ಥಳ ಯಾತ್ರೆ ಮುಂದೂಡಲು ಡಾ.ವೀರೇಂದ್ರ ಹೆಗ್ಗಡೆ ಮನವಿ
ಮೈಸೂರು

ನೀರಿನ ಕೊರತೆ: ಧರ್ಮಸ್ಥಳ ಯಾತ್ರೆ ಮುಂದೂಡಲು ಡಾ.ವೀರೇಂದ್ರ ಹೆಗ್ಗಡೆ ಮನವಿ

May 18, 2019

ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲೆಡೆ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, ನೀರಿನ ಅಭಾವ ಜಿಲ್ಲೆಯ ಧಾರ್ಮಿಕ ಕ್ಷೇತ್ರ ಗಳಿಗೂ ಬಿಸಿ ಮುಟ್ಟಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿ ಗಳು ಕೆಲವು ದಿನಗಳ ಮಟ್ಟಿಗೆ ತಮ್ಮ ಯಾತ್ರೆಯನ್ನು ಮುಂದೂಡುವಂತೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಮನವಿ ಮಾಡಿದ್ದಾರೆ. ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಭಕ್ತರಿಗೆ ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಸ್ನಾನ ಮಾಡಲು ನೀರಿನ ಅಭಾವ ಉಂಟಾಗಿದೆ, ಇನ್ನೂ ದೇವ…

ವಿಜಯಪುರ ಕಾಂಗ್ರೆಸ್ ನಾಯಕಿ ನಿಗೂಢ ಸಾವು
ಮೈಸೂರು

ವಿಜಯಪುರ ಕಾಂಗ್ರೆಸ್ ನಾಯಕಿ ನಿಗೂಢ ಸಾವು

May 18, 2019

ವಿಜಯಪುರ: ವಿಜಯಪುರದ ಕಾಂಗ್ರೆಸ್ ನಾಯಕಿ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷೆ ರೇಷ್ಮಾ ಪಡೇಕನೂರ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕೊಲ್ಹಾರದ ಕೃಷ್ಣಾ ನದಿ ಸೇತುವೆಯ ಕೆಳಗೆ ಶುಕ್ರವಾರ ಬೆಳಿಗ್ಗೆ ಅವರ ಶವ ಪತ್ತೆಯಾಗಿದೆ. ಗುರುವಾರ ರಾತ್ರಿ ರೇಷ್ಮಾ ಅವರನ್ನು ಹತ್ಯೆ ಗೈದು ದುಷ್ಕರ್ಮಿಗಳು ಶವವನ್ನು ಸೇತುವೆಯ ಕೆಳಗೆ ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ರೇಷ್ಮಾ ಗುರು ವಾರ ರಾತ್ರಿ ಮಹಾರಾಷ್ಟ್ರದ ಕೊಲ್ಹಾಪುರ ಎಂಐಎಂ ಮುಖಂಡರೊಬ್ಬರೊಂದಿಗೆ ಕಾರಿನಲ್ಲಿ ತೆರಳಿದ್ದರೆನ್ನಲಾಗಿದೆ. ಈಕೆ ಎಂಐಎಂ ಮುಖಂಡರೊಡನೆ ಒಡನಾಟ ಹೊಂದಿದ್ದು, ಈ ಮುಖಂಡನ ಪತ್ನಿ ರೇಷ್ಮಾ ಮನೆ…

ಕಮಲ್‍ಹಾಸನ್ ಮೇಲೆ ಮೊಟ್ಟೆ, ಕಲ್ಲು ಎಸೆತ!
ದೇಶ-ವಿದೇಶ, ಮೈಸೂರು

ಕಮಲ್‍ಹಾಸನ್ ಮೇಲೆ ಮೊಟ್ಟೆ, ಕಲ್ಲು ಎಸೆತ!

May 18, 2019

ಕೊಯಮತ್ತೂರು: ಗೋಡ್ಸೆ ಮೊದಲ ಹಿಂದೂ ಉಗ್ರ ಎಂದು ಹೇಳಿ ಸುದ್ದಿಗೆ ಗ್ರಾಸ ವಾಗಿದ್ದ ನಟ ಹಾಗೂ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾ ಪಕ ಕಮಲ್‍ಹಾಸನ್ ಮೇಲೆ ನಿನ್ನೆ ಚಪ್ಪಲಿ ತೂರಿದ ಘಟನೆ ಹಸಿರಾಗಿರು ವಂತೆಯೇ ಇಂದು ಮೊಟ್ಟೆ ತೂರಲಾಗಿದೆ. ಸೂಳೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಿಮಿತ್ತ ಅರವ ಕುರಿಚ್ಚಿಯಲ್ಲಿ ನಡೆದ ಪ್ರಚಾರ ಕಾರ್ಯ ಕ್ರಮದಲ್ಲಿ ಕಮಲ್ ಹಾಸನ್ ಪಾಲ್ಗೊಂಡಿ ದ್ದರು. ಈ ವೇಳೆ ಕಿಡಿಗೇಡಿಗಳು ಅವರ ಮೇಲೆ ಮೊಟ್ಟೆ ಎಸೆದಿದ್ದಾರೆ. ಅಲ್ಲದೆ ಕಮಲ್‍ಹಾಸನ್ ಕುಳಿತಿದ್ದ…

1 987 988 989 990 991 1,611
Translate »