ಮೈಸೂರು

ಮೇ 27ರವರೆಗೆ ವಿದ್ಯುತ್ ವ್ಯತ್ಯಯ
ಮೈಸೂರು

ಮೇ 27ರವರೆಗೆ ವಿದ್ಯುತ್ ವ್ಯತ್ಯಯ

May 17, 2019

ಮೈಸೂರು: ಎನ್.ಆರ್ ಮೊಹಲ್ಲಾ ವಿಭಾಗದ ವತಿಯಿಂದ ಮೇ 27 ರವರೆಗೆ 220/66/11 ಕೆವಿ ವಾಜಮಂಗಲ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 100 ಒಗಿಂ ಶಕ್ತಿ ಪರಿವರ್ತಕದ ನಿರ್ವಹಣಾ ಕಾಮಗಾರಿಯನ್ನು ಕ.ವಿ.ಪ್ರ.ನಿ.ನಿ. ವತಿಯಿಂದ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ 66/11 ಕೆವಿ ಮೇಗಳಾಪುರ, ವಾಜಮಂಗಲ ಮತ್ತು ಕಡಕೊಳ ವಿದ್ಯುತ್ ವಿತರಣಾ ಕೇಂದ್ರ ಗಳಿಂದ ಸರಬರಾಜಾಗುವ ಪ್ರದೇಶಗಳಲ್ಲಿ ಅನಿಯಮಿತವಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಗಲಿದ್ದು, ಸಾಧ್ಯವಾದಷ್ಟು ಮಟ್ಟಿಗೆ ನೀರಾವರಿ ಪಂಪ್‍ಸೆಟ್ ಫೀಡರ್‍ಗಳಿಗೆ ರಾತ್ರಿಯ ಪಾಳಿಯಲ್ಲಿ ಮೂರು ಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ…

ಗಿಡ ನೆಡುವ, ಪೋಷಿಸುವ ಕಾರ್ಯಕ್ರಮ
ಮೈಸೂರು

ಗಿಡ ನೆಡುವ, ಪೋಷಿಸುವ ಕಾರ್ಯಕ್ರಮ

May 17, 2019

ಮೈಸೂರು: ಮೈಸೂರಿನ ಇಂಡಸ್ಟ್ರಿಯಲ್ ಸಬರ್ಬ್ 3ನೇ ಹಂತದಲ್ಲಿ ಶ್ರೀ ವಾಸವಿ ಟ್ರಸ್ಟ್ ಮೈಸೂರು ಸೌತ್ ವತಿಯಿಂದ ವಾಸವಿ ಜಯಂತಿ ಅಂಗವಾಗಿ ‘ಗಿಡ ನೆಡುವ ಮತ್ತು ಪೋಷಿಸುವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗಿಡಕ್ಕೆ ನೀರೆರೆಯುವ ಮೂಲಕ ಶಾಸಕ ಎಸ್.ಎ.ರಾಮದಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಶ್ರೀ ವಾಸವಿ ಟ್ರಸ್ಟ್ ಗಿಡಗಳನ್ನು ನೆಟ್ಟು ಬೆಳೆಸುವ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದ್ದು, ಇತರೆ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ಕೆ ಕೈ ಜೋಡಿಸಬೇಕು. ಮುಂದಿನ ದಿನಗಳಲ್ಲಿ ಒಂದು ಲಕ್ಷಗಿಡಗಳನ್ನು ನೆಟ್ಟು,…

ಮಿಲಿಟರಿ ಬಾಲಕರ ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮೈಸೂರು

ಮಿಲಿಟರಿ ಬಾಲಕರ ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

May 17, 2019

ಮೈಸೂರು: ಮೈಸೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಅಧೀನದಲ್ಲಿರುವ ಮಿಲಿಟರಿ ಬಾಲಕರ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಅರ್ಜಿ ಆಹ್ವಾ ನಿಸಿದೆ. 2019-20ನೇ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ 5ನೇ ತರಗತಿಯಿಂದ 12ನೇ ತರಗತಿಯವರೆಗೆ ಓದುತ್ತಿರುವ ಕರ್ನಾಟಕ ರಾಜ್ಯದ ಮಾಜಿ ಸೈನಿಕರ ಮತ್ತು ಅವರ ಅವ ಲಂಬಿತರ ಗಂಡು ಮಕ್ಕಳಿಗೆ ಆದ್ಯತೆ ಹಾಗೂ ಅರ್ಹತೆ ಮೇರೆಗೆ ಉಚಿತ ಪ್ರವೇಶ ನೀಡಲಾಗುವುದು. ಮೈಸೂರು ನಗರದಲ್ಲಿರುವ ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ನಂತರವೇ ನಿಲಯದಲ್ಲಿ ಪ್ರವೇಶ ನೀಡಲಾಗುವುದು. ಅರ್ಜಿ ನಮೂನೆಯನ್ನು ಉಪ ನಿರ್ದೇಶಕರು,…

ಪರೀಕ್ಷೆ ಮುಂದೂಡಿಕೆ
ಮೈಸೂರು

ಪರೀಕ್ಷೆ ಮುಂದೂಡಿಕೆ

May 17, 2019

ಮೈಸೂರು: ಕಾರಾಗೃಹ ಇಲಾಖೆಯಲ್ಲಿನ ಜೈಲರ್ ಮತ್ತು ವಾರ್ಡರ್ ಹುದ್ದೆಗಳ ನೇಮಕಾತಿ ಪಕ್ರಿಯೆಗೆ ರಾಜ್ಯದ ವಿವಿಧ ನಗರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮೇ 19ರಂದು ಲಿಖಿತ ಪರೀಕ್ಷೆ ನಡೆಸಲು ತೀರ್ಮಾನಿಸ ಲಾಗಿತ್ತು. ಕಾರಣಾಂತರಗಳಿಂದ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಮುಂದಿನ ಲಿಖಿತ ಪರೀಕ್ಷಾ ದಿನಾಂಕ ವನ್ನು ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಶಾಸಕ ರಾಮದಾಸ್ ನೇತೃತ್ವದಲ್ಲಿ ಭಾರೀ ಪ್ರತಿಭಟನೆ
ಮೈಸೂರು

ಶಾಸಕ ರಾಮದಾಸ್ ನೇತೃತ್ವದಲ್ಲಿ ಭಾರೀ ಪ್ರತಿಭಟನೆ

May 16, 2019

ಮೈಸೂರು: ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರವೂ ಒಳಗೊಂಡಂತೆ ಮೈಸೂರು ನಗರ ಪಾಲಿಕೆ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ಪರಿಹರಿಸುವ ಸಂಬಂಧ ಪಾಲಿಕೆ ಆಡಳಿತ ವರ್ಗ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಪಾಲಿಕೆ ಬಿಜೆಪಿ ಸದಸ್ಯರು ಹಾಗೂ ವಿವಿಧ ಸಂಘ-ಸಂಸ್ಥೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಮಹಾ ನಗರ ಪಾಲಿಕೆ ಮುಖ್ಯ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, `ಖಾತೆ ಬದಲಾ ವಣೆ, ಹೊಸ ಖಾತೆ, ನಕ್ಷೆ ಅನುಮೋದನೆ ಹಾಗೂ…

`ಆಧಾರ್’ ಮಾನದಂಡದಡಿ ಆರ್‍ಟಿಇ ಮಕ್ಕಳ ಆಯ್ಕೆಯಿಂದ ಅರ್ಹರಿಗೆ ಅನ್ಯಾಯ: ಪೋಷಕರ ಆಕ್ಷೇಪ
ಮೈಸೂರು

`ಆಧಾರ್’ ಮಾನದಂಡದಡಿ ಆರ್‍ಟಿಇ ಮಕ್ಕಳ ಆಯ್ಕೆಯಿಂದ ಅರ್ಹರಿಗೆ ಅನ್ಯಾಯ: ಪೋಷಕರ ಆಕ್ಷೇಪ

May 16, 2019

ಮೈಸೂರು: ಖಾಸಗಿ ಶಾಲೆ ಗಳಿಗೆ ಆರ್‍ಟಿಇ ಕಾಯ್ದೆಯಡಿ ಮಕ್ಕಳನ್ನು ಆಯ್ಕೆ ಮಾಡುವಾಗ ಆಧಾರ್ ಕಾರ್ಡನ್ನು ಮಾತ್ರವೇ ಪರಿಗಣಿಸಬೇಕೆಂದು ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಆರ್‍ಟಿಇ ವ್ಯಾಪ್ತಿಗೆ ಬರುವ ಶಾಲೆ ಗಳಲ್ಲಿ ಮಕ್ಕಳನ್ನು ಆಯ್ಕೆ ಮಾಡಲು ನಗರ ಪ್ರದೇಶಗಳಲ್ಲಿ ವಾರ್ಡ್‍ಗಳ ವ್ಯಾಪ್ತಿಯನ್ನು ಗುರುತಿಸಲಾಗಿದೆ. ಈ ವಾರ್ಡ್ ವ್ಯಾಪ್ತಿ ಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಇಲ್ಲದಿರುವ ಕಡೆ ಮಾತ್ರ ಅನುದಾನ ರಹಿತ ಶಾಲೆಗಳನ್ನು ಗುರುತಿಸಿ ಶೇ.25ರಷ್ಟು ಮಕ್ಕಳನ್ನು ಆರ್‍ಟಿಇ ಕಾಯ್ದೆಯಡಿ ದಾಖಲು…

ಸರಿಯಾದ ಸಾಕ್ಷಿ-ಪುರಾವೆ ಮಂಡಿಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಿ
ಮೈಸೂರು

ಸರಿಯಾದ ಸಾಕ್ಷಿ-ಪುರಾವೆ ಮಂಡಿಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಿ

May 16, 2019

ಮೈಸೂರು: ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಸರಿಯಾದ ಸಾಕ್ಷಿ-ಪುರಾವೆ ಒದಗಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಿ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಅಪರಾಧ) ಡಾ.ಎಂ.ಎ.ಸಲೀಂ, ಪೊಲೀಸ್ ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ. ಮೈಸೂರಿನ ನಜರ್‍ಬಾದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರಿನಲ್ಲಿರುವ ಡಿಜಿಪಿ ಸೂಟ್ ಸಭಾಂಗಣದಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ದಕ್ಷಿಣ ವಲಯ ಐಜಿಪಿ ಉಮೇಶ್ ಕುಮಾರ್, ಮೈಸೂರು, ಮಂಡ್ಯ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಎಸ್ಪಿಗ ಳೊಂದಿಗೆ ಅಪರಾಧ ಪ್ರಕರಣಗಳ ಕುರಿತು ಡಾ.ಸಲೀಂ ಅವರು ಪ್ರಗತಿ ಪರಿಶೀಲನಾ…

ಆರೋಗ್ಯದ ಮೊದಲ ಹಂತ ಕೈ ನೈರ್ಮಲ್ಯ ಕಾಯ್ದಿರಿಸಿಕೊಳ್ಳುವುದು
ಮೈಸೂರು

ಆರೋಗ್ಯದ ಮೊದಲ ಹಂತ ಕೈ ನೈರ್ಮಲ್ಯ ಕಾಯ್ದಿರಿಸಿಕೊಳ್ಳುವುದು

May 16, 2019

ಮೈಸೂರು: ಅಂಗೈ ಯಲ್ಲೇ ಆರೋಗ್ಯ! ಹೌದು, ಕೈ ಶುದ್ಧವಾಗಿ ದ್ದರೆ, ಅನಾರೋಗ್ಯ ಹರಡುವ ಸೋಂಕು ಗಳಿಂದ ಮುಕ್ತವಾಗಿ ಆರೋಗ್ಯವಂತರಾಗ ಬಹುದು. ಹೀಗಾಗಿಯೇ ಕೈಗಳ ಶುಚಿತ್ವದ ಬಗ್ಗೆ ಇದೀಗ ಹೆಚ್ಚಿನ ಜಾಗೃತಿ ಮೂಡುತ್ತಿದೆ. ಮೇ 5 ಅನ್ನು `ವಿಶ್ವ ಕೈ ನೈರ್ಮಲ್ಯ ದಿನ’ವಾಗಿ ಆಚರಿಸಿ ಶುದ್ಧ ಕೈಗಳ ಮಹತ್ವ ಸಾರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಬುಧವಾರ ಕೈ ಶುದ್ಧತೆ ಕುರಿತಂತೆ ಒಂದು ದಿನದ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸೋಂಕು ನಿಯಂತ್ರಣ ಉತ್ಪನ್ನಗಳ ತಯಾ ರಿಕಾ ಸಂಸ್ಥೆಯಾದ ಶುಲ್ಕೆ…

ಮಕ್ಕಳಿಂದ ತಿರಸ್ಕರಿಸಲ್ಪಟ್ಟು ವೃದ್ಧಾಶ್ರಮ ಸೇರಿರುವ ಹಿರಿಯ ಮಹಿಳೆಯರಿಗೆ ಸನ್ಮಾನ
ಮೈಸೂರು

ಮಕ್ಕಳಿಂದ ತಿರಸ್ಕರಿಸಲ್ಪಟ್ಟು ವೃದ್ಧಾಶ್ರಮ ಸೇರಿರುವ ಹಿರಿಯ ಮಹಿಳೆಯರಿಗೆ ಸನ್ಮಾನ

May 16, 2019

ಮೈಸೂರು: ಮಕ್ಕಳಿಂದ ತಿರಸ್ಕರಿಸಲ್ಪಟ್ಟು ವೃದ್ಧಾಶ್ರಮದಲ್ಲಿ ಕಾಲ ದೂಡುತ್ತಿರುವ ವೃದ್ಧರನ್ನು ಸನ್ಮಾನಿಸುವ ಮೂಲಕ ಪಾತಿ ಫೌಂಡೇಷನ್ ವಿಶ್ವ ತಾಯಂದಿರ ದಿನವನ್ನು ವಿಶಿಷ್ಟವಾಗಿ ಆಚರಿಸಿತು. `ಜನನಿ ಜನ್ಮಭೂಮಿ’ ಕಾರ್ಯಕ್ರಮದಡಿ ಮೈಸೂರಿನ ಕನಕ ಗಿರಿಯಲ್ಲಿರುವ ಭಾರತಿ ಸೇವಾ ವೃದ್ಧಾಶ್ರಮದ ಏಳು ಮಂದಿ ಹಿರಿಯ ಮಹಿಳೆಯರಿಗೆ ಸನ್ಮಾನಿಸಿ, ಅವರಿಗೆ ಮಕ್ಕಳ ಪ್ರೀತಿ ತೋರಿದರು. ವೃದ್ಧ ಮಹಿಳೆಯರನ್ನು ಸನ್ಮಾನಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು, ನಮ್ಮ ಯಾವುದೇ ಸಾಧನೆ, ಕೀರ್ತಿಯ ಹಿಂದೆ ತಾಯಂದಿರು ಇದ್ದಾರೆ. ಅಂಬೆಗಾಲಿಡುವುದನ್ನು ಕಲಿಸಿ, ಇಂದಿನ ನಮ್ಮ ಶ್ರೇಯಸ್ಸಿಗೆ ತಾಯಿಯೇ ಮೂಲ….

ಮೇ 25ರೊಳಗೆ ಬಾಕಿ ಪಾವತಿಗೆ ಕಬ್ಬು ಬೆಳೆಗಾರರ ಆಗ್ರಹ
ಮೈಸೂರು

ಮೇ 25ರೊಳಗೆ ಬಾಕಿ ಪಾವತಿಗೆ ಕಬ್ಬು ಬೆಳೆಗಾರರ ಆಗ್ರಹ

May 16, 2019

ಮೈಸೂರು: ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಕೊಡಬೇಕಾದ ಬಾಕಿ ಹಣವನ್ನು ಮೇ 25ರೊಳಗೆ ಪಾವತಿಸದಿದ್ದರೆ, ಬೆಂಗಳೂರಿ ನಲ್ಲಿರುವ ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕುವು ದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ 67 ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ 4 ಸಾವಿರ ಕೋಟಿ ರೂ. ಹಣವನ್ನು ಬಾಕಿ ನೀಡಬೇಕಾಗಿದೆ. ಎಲ್ಲಾ…

1 990 991 992 993 994 1,611
Translate »