ಗಿಡ ನೆಡುವ, ಪೋಷಿಸುವ ಕಾರ್ಯಕ್ರಮ
ಮೈಸೂರು

ಗಿಡ ನೆಡುವ, ಪೋಷಿಸುವ ಕಾರ್ಯಕ್ರಮ

May 17, 2019

ಮೈಸೂರು: ಮೈಸೂರಿನ ಇಂಡಸ್ಟ್ರಿಯಲ್ ಸಬರ್ಬ್ 3ನೇ ಹಂತದಲ್ಲಿ ಶ್ರೀ ವಾಸವಿ ಟ್ರಸ್ಟ್ ಮೈಸೂರು ಸೌತ್ ವತಿಯಿಂದ ವಾಸವಿ ಜಯಂತಿ ಅಂಗವಾಗಿ ‘ಗಿಡ ನೆಡುವ ಮತ್ತು ಪೋಷಿಸುವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗಿಡಕ್ಕೆ ನೀರೆರೆಯುವ ಮೂಲಕ ಶಾಸಕ ಎಸ್.ಎ.ರಾಮದಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಶ್ರೀ ವಾಸವಿ ಟ್ರಸ್ಟ್ ಗಿಡಗಳನ್ನು ನೆಟ್ಟು ಬೆಳೆಸುವ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದ್ದು, ಇತರೆ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ಕೆ ಕೈ ಜೋಡಿಸಬೇಕು. ಮುಂದಿನ ದಿನಗಳಲ್ಲಿ ಒಂದು ಲಕ್ಷಗಿಡಗಳನ್ನು ನೆಟ್ಟು, ಬೆಳೆಸಬೇಕೆಂಬ ಯೋಜನೆಗೆ ಸ್ಫೂರ್ತಿ ದೊರೆತಂತಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ಆರ್.ಶಾಂತಮ್ಮ ವಡಿವೇಲು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಿ.ಕೆ.ಸುರೇಶ್ ಬಾಬು, ವಲಯ ಅರಣ್ಯಾಧಿಕಾರಿ ಜಿ.ಗೋವಿಂದರಾಜು, ಶ್ರೀ ವಾಸವಿ ಟ್ರಸ್ಟ್ ಮೈಸೂರು ಸೌತ್ ಅಧ್ಯಕ್ಷ ಎ.ಆರ್.ನಾಗೇಂದ್ರ ಶೆಟ್ಟಿ, ಬಿ.ಎಸ್.ರಮೇಶ್ ಇದ್ದರು.

Translate »