ಆರೋಗ್ಯದ ಮೊದಲ ಹಂತ ಕೈ ನೈರ್ಮಲ್ಯ ಕಾಯ್ದಿರಿಸಿಕೊಳ್ಳುವುದು
ಮೈಸೂರು

ಆರೋಗ್ಯದ ಮೊದಲ ಹಂತ ಕೈ ನೈರ್ಮಲ್ಯ ಕಾಯ್ದಿರಿಸಿಕೊಳ್ಳುವುದು

May 16, 2019

ಮೈಸೂರು: ಅಂಗೈ ಯಲ್ಲೇ ಆರೋಗ್ಯ! ಹೌದು, ಕೈ ಶುದ್ಧವಾಗಿ ದ್ದರೆ, ಅನಾರೋಗ್ಯ ಹರಡುವ ಸೋಂಕು ಗಳಿಂದ ಮುಕ್ತವಾಗಿ ಆರೋಗ್ಯವಂತರಾಗ ಬಹುದು. ಹೀಗಾಗಿಯೇ ಕೈಗಳ ಶುಚಿತ್ವದ ಬಗ್ಗೆ ಇದೀಗ ಹೆಚ್ಚಿನ ಜಾಗೃತಿ ಮೂಡುತ್ತಿದೆ.

ಮೇ 5 ಅನ್ನು `ವಿಶ್ವ ಕೈ ನೈರ್ಮಲ್ಯ ದಿನ’ವಾಗಿ ಆಚರಿಸಿ ಶುದ್ಧ ಕೈಗಳ ಮಹತ್ವ ಸಾರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಬುಧವಾರ ಕೈ ಶುದ್ಧತೆ ಕುರಿತಂತೆ ಒಂದು ದಿನದ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸೋಂಕು ನಿಯಂತ್ರಣ ಉತ್ಪನ್ನಗಳ ತಯಾ ರಿಕಾ ಸಂಸ್ಥೆಯಾದ ಶುಲ್ಕೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಕೈ ನೈರ್ಮಲ್ಯದ ಪ್ರಾಮುಖ್ಯತೆಗೆ ಸಂಬಂಧಿ ಸಿದಂತೆ ತಿಳುವಳಿಕೆ ಮೂಡಿಸಲಾಯಿತು. ವೈದ್ಯಕೀಯ ಸೇವಾ ವ್ಯವಸ್ಥೆಯಲ್ಲಿ ಇದರ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.

ಆಸ್ಪತ್ರೆಯ ವೈದ್ಯರು, ಶುಶ್ರೂಷಕರು, ರೋಗಿಗಳು ಹಾಗೂ ಅವರ ಸಹಾಯ ಕರು ಸೇರಿದಂತೆ ಎಲ್ಲರಿಗೂ ಕೈ ತೊಳೆ ಯುವುದರ ಮಹತ್ವ ತಿಳಿಸಿಕೊಡಲಾ ಯಿತು. ಕೈಗಳನ್ನು ಕೇವಲ ನೀರಿನಿಂದ ಮಾತ್ರವಲ್ಲದೆ, ಸೋಪಿನಿಂದ ಸ್ವಚ್ಛವಾಗಿ ಮತ್ತು ವೈಜ್ಞಾನಿಕ ವಿಧಾನದಲ್ಲಿ ತೊಳೆದು ಕೊಳ್ಳುವುದು ಮುಖ್ಯ ಎಂಬುದನ್ನು ತಿಳಿಸಲು ಕರಪತ್ರ ಹಂಚಲಾಯಿತು.

ಇದಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ಜೆಎಸ್‍ಎಸ್ ಆಸ್ಪತ್ರೆ ನಿರ್ದೇಶಕ ಡಾ.ಕರ್ನಲ್ ಎಂ.ದಯಾನಂದ್ ಮಾತನಾಡಿ, ಕೈಗಳು ಶುಚಿಯಾಗಿದ್ದರೆ, ಸೋಂಕುಗಳನ್ನು ನಿಯಂತ್ರಿಸಿ ಅನಾರೋಗ್ಯ ದಿಂದ ಪಾರಾಗಬಹುದು. ಹೀಗಾಗಿ ಕೈ ತೊಳೆಯುವ ವಿಧಾನದ ಬಗ್ಗೆ ತಿಳಿದುಕೊ ಳ್ಳುವುದು ಬಹಳ ಮುಖ್ಯ ಎಂದು ತಿಳಿಸಿದರು.

ಶುಲ್ಕೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಾರುಕಟ್ಟೆ ಉಪಾಧ್ಯಕ್ಷ ರೋಹಿತ್ ಭಾಟಿಯಾ ಮಾತನಾಡಿ, ಕಾಯಿಲೆ ಬಂದಾಗ ಪರಿತಪಿಸುವುದಕ್ಕಿಂತ ಬಾರದಂತೆ ಎಚ್ಚರ ವಹಿಸುವುದು ಮುಖ್ಯ ಎಂಬ ಮಾತಿದೆ. ಅದಕ್ಕೆ ಸೂಕ್ತ ಉದಾ ರಣೆ ಎಂದರೆ ಕೈಗಳನ್ನು ಶುದ್ಧವಾಗಿ ಇಟ್ಟುಕೊಳ್ಳುವುದಾಗಿದೆ. ಕೈಗಳು ಶುಚಿ ಇದ್ದರೆ, ಸೋಂಕುಗಳು ನಮ್ಮ ದೇಹವನ್ನು ಪ್ರವೇಶಿಸುವುದನ್ನು ತಡೆಗಟ್ಟಬಹುದು. ಕೈಗಳನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಸವಾಲಾಗಿದ್ದು, ಹೀಗಾಗಿ ಇದೊಂದು ಜಾಗತಿಕ ಸಮಸ್ಯೆಯಾಗಿದೆ ಎಂದು ಹೇಳಿದರು.
ಇದೇ ವೇಳೆ ಕೈ ನೈರ್ಮಲ್ಯ ಕಾಯ್ದುಕೊಳ್ಳು ವಲ್ಲಿ ಪರಿಣಾಮಕಾರಿ ವಿಧಾನಗಳನ್ನು ಅಳ ವಡಿಸಿಕೊಂಡಿರುವ ಆಸ್ಪತ್ರೆಯ ನರ್ಸಿಂಗ್ ವಿಭಾಗಕ್ಕೆ ಮೊದಲ ಹಾಗೂ ಹೌಸ್ ಕೀಪಿಂಗ್ ವಿಭಾಗಕ್ಕೆ ದ್ವಿತೀಯ ಬಹುಮಾನವಾಗಿ ಸ್ಮರಣ ಕಾಣಿಕೆಗಳನ್ನು ನೀಡಲಾಯಿತು. ಅಲ್ಲದೆ, ಕೈ ನೈರ್ಮಲ್ಯ ವಿಷಯ ಕುರಿತಂತೆ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಲವರಿಗೆ ಸ್ಮರಣ ಕಾಣಿಕೆಗಳನ್ನು ನೀಡಲಾಯಿತು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಗುರುಸ್ವಾಮಿ, ಮುಖ್ಯ ಆಡಳಿತಾ ಧಿಕಾರಿ ಬಸವರಾಜ್ ಕುಪ್ಪಸದ್, ಆಸ್ಪತ್ರೆಯ ಸೋಂಕು ನಿಯಂತ್ರಣ ಸಮಿತಿ ಅಧ್ಯಕ್ಷ ಡಾ.ಎಂ.ಡಿ.ರವಿ, ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥೆ ಡಾ.ಸುಮನಾ, ನರ್ಸಿಂಗ್ ಸೇವೆಗಳ ಮುಖ್ಯಸ್ಥೆ ಜಾನೆಟ್ ಮಥಿಯಾಸ್, ವೈದ್ಯೆ ಡಾ.ರಶ್ಮಿ ಮಹಲೆ ಮತ್ತಿತರರು ಹಾಜರಿದ್ದರು.

Translate »