News

ರಾಹುಲ್ ಗಾಂಧಿ ಏಕತಾ ಯಾತ್ರೆಗೆ ಸೆಡ್ಡು ಇಂದಿನಿಂದಬಿಜೆಪಿ ವಿಜಯ ಯಾತ್ರೆ
News

ರಾಹುಲ್ ಗಾಂಧಿ ಏಕತಾ ಯಾತ್ರೆಗೆ ಸೆಡ್ಡು ಇಂದಿನಿಂದಬಿಜೆಪಿ ವಿಜಯ ಯಾತ್ರೆ

October 11, 2022

ಬೆಂಗಳೂರು, ಅ.10 (ಕೆಎಂಶಿ)- ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ನಡೆಸಿರುವ ಭಾರತ್ ಜೋಡೋ ಯಾತ್ರೆಗೆ ಸೆಡ್ಡು ಹೊಡೆ ಯಲು ಮುಂದಾಗಿರುವ ಬಿಜೆಪಿ, ನಾಳೆಯಿಂದ ವಿಜಯ ಯಾತ್ರೆ ಹಮ್ಮಿಕೊಂಡಿದೆ. ಯಾತ್ರೆಯ ನಾಯಕತ್ವವನ್ನು ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ವಹಿಸಲಿದ್ದು, ಇವರ ಮಾರ್ಗದರ್ಶನದಲ್ಲಿ ಎರಡು ತಂಡಗಳು ರಾಜ್ಯದ 157 ಕ್ಷೇತ್ರಗಳಲ್ಲಿ ಯಾತ್ರೆ ಮಾಡಲಿವೆ. ರಾಹುಲ್‍ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಹೈದರಾಬಾದ್-ಕರ್ನಾಟಕಕ್ಕೆ ಕಾಲಿಡುವ ಮುನ್ನವೇ ಬಿಜೆಪಿಯ ವಿಜಯ ಯಾತ್ರೆ ಆ ಭಾಗ ದಲ್ಲಿ ಸಂಚರಿಸಲಿದೆ. ಯಡಿಯೂರಪ್ಪ ಹಾಗೂ…

ಮುಲಾಯಂ ಸಿಂಗ್ ಯಾದವ್ ಇನ್ನಿಲ್ಲ
News

ಮುಲಾಯಂ ಸಿಂಗ್ ಯಾದವ್ ಇನ್ನಿಲ್ಲ

October 11, 2022

ಲಕ್ನೊ, ಅ.10- ಹಿರಿಯ ರಾಜಕೀಯ ಮುತ್ಸದ್ದಿ, ಸಮಾಜ ವಾದಿ ಪಕ್ಷದ ಸಂಸ್ಥಾ ಪಕ, ಉತ್ತರ ಪ್ರದೇಶದ ಮಾಜಿ ಮುಖ್ಯ ಮಂತ್ರಿ ಮುಲಾಯಂ ಸಿಂಗ್ ಯಾದವ್ (82) ಸೋಮವಾರ ಬೆಳಗ್ಗೆ 8.16ರಲ್ಲಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಕೆಲ ದಿನಗಳ ಹಿಂದೆ ಗುರುಗ್ರಾಮ್‍ನ ವೇದಾಂತ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿ ಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಉತ್ತರ ಪ್ರದೇಶದ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರಾದ ಮುಲಾಯಂ ಸಿಂಗ್ ಯಾದವ್ ಅವರು ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತು ಭಾರತದ ರಕ್ಷಣಾ…

ಗುಜರಾತ್‍ನ ಮೋಧೇರಾ ಭಾರತದ  ಮೊದಲ ಸೌರಶಕ್ತಿ ಚಾಲಿತ ಗ್ರಾಮ
News

ಗುಜರಾತ್‍ನ ಮೋಧೇರಾ ಭಾರತದ ಮೊದಲ ಸೌರಶಕ್ತಿ ಚಾಲಿತ ಗ್ರಾಮ

October 10, 2022

ಮೋಧೇರಾ(ಗುಜರಾತ್), ಅ.9-ಗುಜರಾತ್‍ನ ಮೆಹ್ಸಾನಾ ಜಿಲ್ಲೆಯ ಮೋಧೇರಾ ಗ್ರಾಮವನ್ನು ಭಾರತದ ಮೊದಲ 24ಘಿ7 ಸೌರಶಕ್ತಿ ಚಾಲಿತ ಗ್ರಾಮ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಪ್ರಧಾನಿ ಮೋದಿ ಭಾನುವಾರ ಮೋಧೇರಾದಲ್ಲಿ ಅನೇಕ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದ್ದಾರೆ. ಇದಾದ ನಂತರ ಮೆಹ್ಸಾನಾದ ಮೋಧೇರಾ ದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾ ಡಿದ ಅವರು, ಸೂರ್ಯ ದೇವಾಲಯದೊಂದಿಗೆ ಸಂಬಂಧ ಹೊಂದಿರುವ ಮೋಧೇರಾ ಸೌರಶಕ್ತಿಯ ದಾಪುಗಾಲು ಗಳಿಗೂ ಹೆಸರುವಾಸಿಯಾಗಿದೆ. ಸೌರಶಕ್ತಿಯನ್ನು ಬಳಸಿ ಕೊಳ್ಳುವತ್ತ ದೊಡ್ಡ ಹೆಜ್ಜೆ ಇಟ್ಟಿರುವುದರಿಂದ ಮೋಧೇರಾಗೆ ಇದು…

ಜೆಡಿಎಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ಮಾದರಿ ಕೃಷಿ ಪಂಪ್‍ಸೆಟ್‍ಗೆ 24ಘಿ7 ಗುಣಮಟ್ಟದ ವಿದ್ಯುತ್ ಪೂರೈಕೆ
News

ಜೆಡಿಎಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ಮಾದರಿ ಕೃಷಿ ಪಂಪ್‍ಸೆಟ್‍ಗೆ 24ಘಿ7 ಗುಣಮಟ್ಟದ ವಿದ್ಯುತ್ ಪೂರೈಕೆ

October 7, 2022

ಬೆಂಗಳೂರು, ಅ.6(ಕೆಎಂಶಿ)-ತೆಲಂಗಾಣದ ಮಾದರಿಯಲ್ಲಿಯೇ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪ್‍ಸೆಟ್ಟುಗಳಿಗೆ 24ಘಿ7 ಗುಣಮಟ್ಟದ ಉಚಿತ ವಿದ್ಯುತ್ ಪೂರೈಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಂಶವನ್ನು ಚುನಾವಣಾ ಪ್ರಣಾಳಿಕೆಯಲ್ಲಿಯೂ ಸೇರಿಸಲಾಗುವುದು ಎಂದರಲ್ಲದೇ ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ `ಜನತಾ ಪಂಚರತ್ನ ರಥಯಾತ್ರೆ’ಗೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಚಾಲನೆ ನೀಡುವುದಾಗಿ ಘೋಷಿಸಿದರು. ಕರ್ನಾಟಕದ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಗಳನ್ನು ಕಣಕ್ಕಿಳಿಸುವ ಆಸಕ್ತಿ ಕೆ.ಚಂದ್ರಶೇಖರ್ ರಾವ್ ಅವರ ನೇತೃತ್ವದ…

ಎಸ್‍ಸಿ, ಎಸ್‍ಟಿಗೆ ಮೀಸಲಾತಿ ಹೆಚ್ಚಳ ಸಂಬಂಧ  ಅ.7ಕ್ಕೆಸರ್ವಪಕ್ಷಸಭೆ
News

ಎಸ್‍ಸಿ, ಎಸ್‍ಟಿಗೆ ಮೀಸಲಾತಿ ಹೆಚ್ಚಳ ಸಂಬಂಧ ಅ.7ಕ್ಕೆಸರ್ವಪಕ್ಷಸಭೆ

October 2, 2022

ಬೆಂಗಳೂರು, ಅ.1(ಕೆಎಂಶಿ)-ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಒಳ ಮೀಸಲಾತಿ ನೀಡುವ ಸಂಬಂಧ ಚರ್ಚಿ ಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕ್ಟೋಬರ್ 7ರ ಶುಕ್ರವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಮುಖ್ಯ ಮಂತ್ರಿಗಳ ಗೃಹ ಕಚೇರಿ ಕೃಷ್ಣಾ ದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ನಡೆಯ ಲಿದ್ದು, ಸಭೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ದವರಿಗೆ ಒಳಮೀಸಲಾತಿ ನೀಡುವ ಕುರಿ ತಂತೆ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ನೀಡಿರುವ ವರದಿಯ ಮೇಲೆ ಚರ್ಚೆ ನಡೆಯಲಿದೆ. ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ…

ಭಯೋತ್ಪಾದನೆಗೆ ಬೆಂಬಲ ಆರೋಪದಡಿ ಪಿಎಫ್‍ಐನ 45 ಮಂದಿ ಬಂಧನ
News

ಭಯೋತ್ಪಾದನೆಗೆ ಬೆಂಬಲ ಆರೋಪದಡಿ ಪಿಎಫ್‍ಐನ 45 ಮಂದಿ ಬಂಧನ

September 23, 2022

ಬೆಂಗಳೂರು, ಸೆ.22- ಭಯೋತ್ಪಾದನೆಗೆ ಬೆಂಬಲ ಆರೋಪದ ಮೇರೆಗೆ ದೇಶದಲ್ಲಿ ದಾಖಲಾಗಿದ್ದ 5 ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ), ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಹಾಗೂ ರಾಜ್ಯ ಪೊಲೀಸ್ ತಂಡಗಳು ಗುರುವಾರ ಕರ್ನಾಟಕವೂ ಸೇರಿದಂತೆ ದೇಶದ 15 ರಾಜ್ಯಗಳ 93 ಸ್ಥಳಗಳಲ್ಲಿ ಜಂಟಿ ದಾಳಿ ನಡೆಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‍ಐ) 45 ಮಂದಿಯನ್ನು ಬಂಧಿಸಲಾಗಿದೆ. ಕರ್ನಾಟಕದಲ್ಲಿ 7 ಮಂದಿಯನ್ನು ಬಂಧಿಸಿರುವ ಎನ್‍ಐಎ ಅಧಿಕಾರಿಗಳು ಅತೀ ಹೆಚ್ಚು ಅಂದರೆ ಕೇರಳದಲ್ಲಿ 2 ಪ್ರಕ ರಣಗಳಲ್ಲಿ ಒಟ್ಟು 19…

ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕ್ಯೂ ಆರ್ ಕೋಡ್ ಸಹಿತ ಕಾಂಗ್ರೆಸ್ ಅಭಿಯಾನ ಪೇ ಸಿಎಂ ಪೋಸ್ಟರ್ ವೈರಲ್
News

ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕ್ಯೂ ಆರ್ ಕೋಡ್ ಸಹಿತ ಕಾಂಗ್ರೆಸ್ ಅಭಿಯಾನ ಪೇ ಸಿಎಂ ಪೋಸ್ಟರ್ ವೈರಲ್

September 22, 2022

ಬೆಂಗಳೂರು, ಸೆ.21(ಕೆಎಂಶಿ)-ಬಿಜೆಪಿ ಸರ್ಕಾರ ದಲ್ಲಿನ 40 ಪರ್ಸೆಂಟ್ ಕಮಿಷನ್ ಹಣವನ್ನು ಪೆಟಿಎಂ ಬದಲು ಪೆಸೀಎಂ ಆ್ಯಪ್‍ಗೆ ಪಾವತಿಸಿ ಎಂಬ ಭಿತ್ತಿಪತ್ರಗಳನ್ನು ವಿಧಾನಸೌಧದ ಹೃದಯ ಭಾಗದ ಸುತ್ತಲೂ ಅಂಟಿಸುವ ಮೂಲಕ ಸರ್ಕಾರದ ವಿರುದ್ಧ ದೊಡ್ಡ ಸಮರ ಸಾರಿದೆ. ಪೇಸಿಎಂಗೆ ಹಣ ಪಾವತಿಸಿದರೆ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳಿಗೆ ತಲು ಪುತ್ತದೆ. ಈ ಆ್ಯಪ್‍ಗೆ ಹೋಗಿ ಎಂದು ಭಿತ್ತಿಪತ್ರಗಳಲ್ಲಿ ಮಾಹಿತಿ ನೀಡಿದೆ. ಇಂತಹ ಭಿತ್ತಿಪತ್ರಗಳನ್ನು ಮುಖ್ಯ ಮಂತ್ರಿಯವರ ಆರ್‍ಟಿ ನಗರದ ಖಾಸಗಿ ನಿವಾಸ, ರೇಸ್‍ಕೋರ್ಸ್‍ನ ಸರ್ಕಾರಿ ನಿವಾಸದ ಸುತ್ತಮುತ್ತಲೂ…

ಬಿಡಿಎ ಅವ್ಯವಹಾರದಲ್ಲಿನನ್ನ ಪಾತ್ರವಿಲ್ಲ
News

ಬಿಡಿಎ ಅವ್ಯವಹಾರದಲ್ಲಿನನ್ನ ಪಾತ್ರವಿಲ್ಲ

September 22, 2022

ಬೆಂಗಳೂರು,ಸೆ.21(ಕೆಎಂಶಿ)-ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ರಾಮ ಲಿಂಗ ಕನ್ಸ್‍ಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡುವ ವಿಚಾರದಲ್ಲಿ ನನ್ನ ಪಾತ್ರವಿಲ್ಲ ಎಂದಿರುವ ಸಹಕಾರಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಬೇಲ್ ಪಡೆಯುವ ಅಗತ್ಯವಿಲ್ಲ ಎಂದಿ ದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾ ಯುಕ್ತ ಪೆÇಲೀಸರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ವಿಜ ಯೇಂದ್ರ, ಸಚಿವ ಸೋಮಶೇಖರ್ ಸೇರಿ ದಂತೆ ಆರು ಮಂದಿಯ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಎಫ್‍ಐಆರ್…

ಪೌರ ಕಾರ್ಮಿಕರಸೇವೆ ಖಾಯಂಗೆಸಂಪುಟ ಒಪ್ಪಿಗೆ
News

ಪೌರ ಕಾರ್ಮಿಕರಸೇವೆ ಖಾಯಂಗೆಸಂಪುಟ ಒಪ್ಪಿಗೆ

September 20, 2022

ಬೆಂಗಳೂರು: ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ಪದ್ಧತಿಯಡಿ ವೇತನ ಪಡೆಯುತ್ತಿರುವ 11,133 ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವ ಮಹತ್ವದ ತೀರ್ಮಾ ನವನ್ನು ರಾಜ್ಯ ಸಚಿವ ಸಂಪುಟ ತೆಗೆದು ಕೊಂಡಿದೆ. ಇದರಿಂದ 302 ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾ ಯತಿ ವ್ಯಾಪ್ತಿಯಲ್ಲಿನ 5533, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ 3673 ಹಾಗೂ ರಾಜ್ಯದ ಇತರ 10 ಮಹಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿನ 1927 ಪೌರ ಕಾರ್ಮಿಕರ ಸೇವೆ…

ಪ್ರಕೃತಿ ವಿಕೋಪದಿಂದ ಬೆಳೆ ಹಾನಿಗೆ ತಿಂಗಳಲ್ಲೇ ಪರಿಹಾರ
News

ಪ್ರಕೃತಿ ವಿಕೋಪದಿಂದ ಬೆಳೆ ಹಾನಿಗೆ ತಿಂಗಳಲ್ಲೇ ಪರಿಹಾರ

September 20, 2022

ಬೆಂಗಳೂರು, ಸೆ.19(ಕೆಎಂಶಿ)-ಪ್ರಕೃತಿ ವಿಕೋಪ ದಿಂದ ಬೆಳೆ ಕಳೆದುಕೊಂಡ ರೈತರಿಗೆ ಒಂದೇ ತಿಂಗಳಲ್ಲಿ ಪರಿಹಾರ ನೀಡುವು ದಾಗಿ ಕಂದಾಯ ಸಚಿವ ಆರ್. ಅಶೋಕ್ ವಿಧಾನಸಭೆಯಲ್ಲಿಂದು ಪ್ರಕಟಿಸಿದ್ದಾರೆ. ಅತಿವೃಷ್ಟಿಯ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು ಈ ವಿಷಯ ತಿಳಿಸಿದರಲ್ಲದೆ ಈ ಹಿಂದೆ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದಾಗ ರೈತರಿಗೆ ಹತ್ತು ಹನ್ನೊಂದು ತಿಂಗಳ ನಂತರ ಪರಿಹಾರ ಸಿಗುತ್ತಿತ್ತು. ಆದರೆ ಅದು ಇನ್ನು ಮುಂದೆ ಒಂದೇ ತಿಂಗಳಲ್ಲಿ ಲಭ್ಯವಾಗಲಿದೆ ಎಂದರು. ಪರಿಹಾರಕ್ಕಾಗಿ ರೈತರು ಅಲೆದಾಡಬೇಕಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರಕ್ಕೆ ವರದಿ…

1 15 16 17 18 19 73
Translate »