News

ರೈತ ಕುಟುಂಬಗಳ ಸಮೀಕ್ಷೆ ನಡೆಸಲು ನಿರ್ಧಾರ
News

ರೈತ ಕುಟುಂಬಗಳ ಸಮೀಕ್ಷೆ ನಡೆಸಲು ನಿರ್ಧಾರ

January 31, 2022

Éಂಗಳೂರು, ಜ.30- ರೈತರ ಆದಾಯ ದ್ವಿಗುಣಗೊಳಿ ಸಲು ಕ್ರಮ ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರವು ರೈತ-ಕುಟುಂಬಗಳ ಬೃಹತ್ ಸಮೀಕ್ಷೆ ಯನ್ನು ನಡೆಸಲು ನಿರ್ಧರಿಸಿದೆ. ಪ್ರತಿಯೊಂದಕ್ಕೂ ಸೂಕ್ತವಾದ ಕಾರ್ಯ ಕ್ರಮವನ್ನು ರೂಪಿಸಿ, ಸಮೀಕ್ಷೆಯ ದತ್ತಾಂ ಶದ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲು ಮುಂದಾಗಿದೆ. ಮಾಧ್ಯಮಿಕ ಕೃಷಿ ನಿರ್ದೇಶನಾಲಯದ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಮೀಕ್ಷೆಯ ನಂತರ ಪ್ರತಿಯೊಬ್ಬ ರೈತನ ಕುಟುಂಬದಲ್ಲಿ ಲಭ್ಯವಿರುವ ಭೂಮಿ ಮತ್ತು ಮಾನವ ಸಂಪ ನ್ಮೂಲವನ್ನು ಆಧರಿಸಿ…

ದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಪ್ರದರ್ಶಿತ ಅದ್ಭುತ ‘ಕರ್ನಾಟಕ  ಕರಕುಶಲಗಳ ಬೀಡು’ ಸ್ತಬ್ಧಚಿತ್ರ ಕಲಾವಿದ ಮೈಸೂರಿನ ಅಕ್ಮಲ್ ಪಾಷಾ
News

ದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಪ್ರದರ್ಶಿತ ಅದ್ಭುತ ‘ಕರ್ನಾಟಕ ಕರಕುಶಲಗಳ ಬೀಡು’ ಸ್ತಬ್ಧಚಿತ್ರ ಕಲಾವಿದ ಮೈಸೂರಿನ ಅಕ್ಮಲ್ ಪಾಷಾ

January 30, 2022

ಈ ಬಾರಿಯ ನವದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ರಾಜ್ಯದ ಪರವಾಗಿ ಪ್ರದರ್ಶನಗೊಂಡ ‘ಕರ್ನಾಟಕ ಕರಕುಶಲಗಳ ಬೀಡು’ ಸ್ತಬ್ಧಚಿತ್ರದ ಕಲಾವಿದ ಅಕ್ಮಲ್ ಪಾಷಾ ನಮ್ಮ ಮೈಸೂರಿನವರು. ಮೈಸೂರಿನ ರಾಜೀವ್‍ನಗರದ ನಿವಾಸಿಯಾಗಿರುವ ಅಕ್ಮಲ್ ಪಾಷಾ, ಮೈಸೂರಿನ ಬಿಇಎಂಎಲ್ ಸಂಸ್ಥೆಯ ನಿವೃತ್ತ ನೌಕರ. ಇವರು ಕಲಾ ನಿರ್ದೇಶಕ ಶಶಿಧರ ಅಡಪ ಅವರ ಮಾರ್ಗದರ್ಶನದಲ್ಲಿ ಹಲವಾರು ವರ್ಷ ಗಳಿಂದ ನಾನಾ ರೀತಿಯ ಸ್ತಬ್ಧಚಿತ್ರ ರೂಪಿಸುವ ಕೌಶಲ್ಯ ವನ್ನು ಬೆಳೆಸಿಕೊಂಡಿದ್ದಾರೆ. ಅವರು ಕಳೆದ 15 ವರ್ಷ ಗಳಿಂದ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋ ತ್ಸವ ಪರೇಡ್‍ಗೆ ಸುಂದರ…

400 ಪಶುವೈದ್ಯರ ನೇಮಕ, ಸನ್ನಡತೆ ಆಧಾರದ  ಮೇಲೆ 166 ಕೈದಿಗಳ ಬಿಡುಗಡೆಗೆ ಸಂಪುಟ ಅಸ್ತು
News

400 ಪಶುವೈದ್ಯರ ನೇಮಕ, ಸನ್ನಡತೆ ಆಧಾರದ ಮೇಲೆ 166 ಕೈದಿಗಳ ಬಿಡುಗಡೆಗೆ ಸಂಪುಟ ಅಸ್ತು

January 28, 2022

ಬೆಂಗಳೂರು,ಜ.27-ಪಶು ಇಲಾಖೆಯಲ್ಲಿ 400 ಪಶುವೈದ್ಯರನ್ನು ಇಲಾಖೆ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಮತ್ತು ಸನ್ನಡತೆ ಆಧಾರದ ಮೇಲೆ 166 ಕೈದಿಗಳ ಬಿಡುಗಡೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಪಶು ಇಲಾಖೆಯಲ್ಲಿ ಸುಮಾರು 800 ಹುದ್ದೆಗಳು ಖಾಲಿ ಇದ್ದು, 400 ಪಶು ವೈದ್ಯರನ್ನು ನೇಮಕ ಮಾಡಲು ಸಚಿವ ಸಂಪುಟ…

ವಿಧಾನಪರಿಷತ್  ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್
News

ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್

January 28, 2022

ಬೆಂಗಳೂರು,ಜ.27-ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಹಿರಿಯ ಮುಖಂಡ ಬಿ.ಕೆ.ಹರಿ ಪ್ರಸಾದ್ ಅವರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶಿಸಿದ್ದಾರೆ. ಹಾಗೆಯೇ ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕರನ್ನಾಗಿ ಪ್ರಕಾಶ್ ರಾಠೋಡ್‍ರನ್ನು ನಿಯೋಜಿಸಲಾಗಿದೆ. ಇನ್ನು ಪರಿಷತ್ ವಿಪಕ್ಷಗಳ ಉಪನಾಯಕ ರನ್ನಾಗಿ ಕೆ.ಗೋವಿಂದರಾಜುರನ್ನು ನೇಮಕ ಮಾಡಲಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿರುವ ವಿಧಾನ ಪರಿಷತ್ ಅಧಿವೇಶನದಲ್ಲಿ ಈ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಅಧಿಕೃತವಾಗಿ ಪ್ರಕಟಣೆ ಮಾಡುವ ಸಾಧ್ಯತೆಗಳು ಇದೆ. ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನಕ್ಕೆ…

ಕಾಂಗ್ರೆಸ್‍ಗೆ ಸಿಎಂ ಇಬ್ರಾಹಿಂ ಗುಡ್‍ಬೈ
News

ಕಾಂಗ್ರೆಸ್‍ಗೆ ಸಿಎಂ ಇಬ್ರಾಹಿಂ ಗುಡ್‍ಬೈ

January 28, 2022

ಬೆಂಗಳೂರು,ಜ.27(ಕೆಎಂಶಿ) ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆಯಲಿದ್ದಾರೆ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯ ಕತ್ವ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ಅವರ ನೇಮಕವಾಗುತ್ತಿದ್ದಂತೆ ಸಿಡಿದೆದ್ದಿರುವ ಇಬ್ರಾಹಿಂ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ಗೂ ನನಗೂ ಮುಗಿದ ಅಧ್ಯಾಯ, ಮೂರು ವರ್ಷದ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದರು. ನನಗೆ ಸ್ಥಾನ ತಪ್ಪಿದ್ದರ ಬಗ್ಗೆ ಸಿದ್ದರಾಮಯ್ಯ ಉತ್ತರಿ ಸಬೇಕು. ದೆಹಲಿಯವರು ಏನು ಹೇಳಿದರು ಎನ್ನುವುದಕ್ಕೆ…

ವಿಧಾನಸಭಾ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಇಲ್ಲ
News

ವಿಧಾನಸಭಾ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಇಲ್ಲ

January 28, 2022

ಬೆಂಗಳೂರು, ಜ.27(ಕೆಎಂಶಿ)- ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳ ಮನೆ ಬಾಗಿಲಿಗೆ ಅಧಿಕಾರಕ್ಕಾಗಿ ಈವರೆಗೆ ಹೋಗಿಲ್ಲ. ಇನ್ನು ಮುಂದೆಯೂ ಹೋಗುವು ದಿಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳು ವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ರಾಷ್ಟ್ರೀಯ ಪಕ್ಷಗಳು ನಮ್ಮ ಮನೆ ಬಾಗಿಲಿಗೆ ಬಂದಿವೆ. 2023ರ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ ಗುರಿ ತಲುಪಲು ಶ್ರಮಿಸುತ್ತೇವೆ. 2023ಕ್ಕೆ ಕಾರ್ಯಕರ್ತರ ಶ್ರಮ…

ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರ
News

ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರ

January 28, 2022

ನವದೆಹಲಿ, ಜ.27- ಕೇಂದ್ರ ಸರ್ಕಾರ ಗುರುವಾರ ಅಧಿಕೃತವಾಗಿ ಏರ್ ಇಂಡಿಯಾ ವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿ ಸಿದೆ. 69 ವರ್ಷಗಳ ಬಳಿಕ ಪುನಃ ಟಾಟಾ ಮಡಿಲಿಗೆ ಏರ್ ಇಂಡಿಯಾ ಬಂದಿದೆ. ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಅಧಿಕೃತ ಹಸ್ತಾಂತರಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದರು. ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ. ಏರ್ ಇಂಡಿಯಾವನ್ನು ತನ್ನ ಮಡಿಲಿಗೆ ಮರಳಿ ಪಡೆದಿರುವುದಕ್ಕೆ ಟಾಟಾ ಸಮೂಹ ತುಂಬಾ…

ಮುಖ್ಯಮಂತ್ರಿಯಾಗಿ ಆರು ತಿಂಗಳಾದ ನಂತರ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿದ ಬೊಮ್ಮಾಯಿ
News

ಮುಖ್ಯಮಂತ್ರಿಯಾಗಿ ಆರು ತಿಂಗಳಾದ ನಂತರ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿದ ಬೊಮ್ಮಾಯಿ

January 25, 2022

ಬೆಂಗಳೂರು, ಜ.24(ಕೆಎಂಶಿ)- ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಕೊಂಡು ಆರು ತಿಂಗಳಾದ ನಂತರ ಬಸವರಾಜ ಬೊಮ್ಮಾಯಿ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕೋವಿಡ್-19 ನಿರ್ವಹಣೆ ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಬಾವುಟ ಹಾರಿಸಲೆಂದು ನಿಯೋಜಿಸಲಾಗಿದ್ದ ಬಹುತೇಕ ಸಚಿವರುಗಳಿಗೆ ಅದೇ ಜಿಲ್ಲೆಯ ಉಸ್ತುವಾರಿ ದೊರೆತಿದೆ. ಬೆಂಗಳೂರು ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳಲು ಕೆಲವು ಸಚಿವರಲ್ಲಿ ಭಾರೀ ಪೈಪೆÇೀಟಿ ನಡೆದಿತ್ತು. ಆದರೆ ಇದರ ಹೊಣೆಗಾರಿಕೆಯನ್ನು ಮುಖ್ಯಮಂತ್ರಿಯವರು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಬೆಂಗಳೂರು ನಗರದ ಉಸ್ತುವಾರಿ ಬಯಸಿದ್ದ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ…

ವಾರಾಂತ್ಯಕ್ಕೆ ಟಾಟಾ ಸಮೂಹಕ್ಕೆ  ಏರ್ ಇಂಡಿಯಾ ಹಸ್ತಾಂತರ ಸಾಧ್ಯತೆ
News

ವಾರಾಂತ್ಯಕ್ಕೆ ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರ ಸಾಧ್ಯತೆ

January 25, 2022

ನವದೆಹಲಿ: ಈ ವಾರದ ಅಂತ್ಯದ ವೇಳೆಗೆ ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಹಿರಿಯ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಸ್ಪರ್ಧಾ ತ್ಮಕ ಹರಾಜು ಪ್ರಕ್ರಿಯೆಯ ನಂತರ, ಸರ್ಕಾರವು ಕಳೆದ ವರ್ಷ ಅ.8ರಂದು ಏರ್ ಇಂಡಿಯಾವನ್ನು ಟಾಟಾ ಸಮೂಹದ ಅಂಗಸಂಸ್ಥೆಯಾದ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್‍ಗೆ 18,000 ಕೋಟಿ ರೂ.ಗೆ ಮಾರಾಟ ಮಾಡಿತ್ತು. ಆ ನಂತರ ಅ.11ರಂದು ಟಾಟಾ ಸಮೂಹಕ್ಕೆ ಲೆಟರ್ ಆಫ್ ಇಂಟೆಂಟ್ ಅನ್ನು ನೀಡಲಾಯಿತು. ಇದು ವಿಮಾನಯಾನ ಸಂಸ್ಥೆಯಲ್ಲಿ ತನ್ನ 100 ಪ್ರತಿಶತ ಪಾಲನ್ನು…

ಇಂಡಿಯಾ ಗೇಟ್‍ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್‍ರ  ಹಾಲೋಗ್ರಾಮ್ ಪ್ರತಿಮೆ ಅನಾವರಣ
News

ಇಂಡಿಯಾ ಗೇಟ್‍ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್‍ರ ಹಾಲೋಗ್ರಾಮ್ ಪ್ರತಿಮೆ ಅನಾವರಣ

January 24, 2022

ನವದೆಹಲಿ, ಜ.23- ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನದ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಪ್ರತಿಷ್ಠಿತ ಇಂಡಿಯಾ ಗೇಟ್ ವಲಯದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಹಾಲೋಗ್ರಾಮ್ ಪ್ರತಿಮೆಯನ್ನು ಅನಾವರಣ ಮಾಡಿದರು. ಇಂಡಿಯಾ ಗೇಟ್‍ನ ಹಿಂದೆ ಇರುವ ಮೇಲಾವರಣದ ಮಂಟಪ ದಲ್ಲಿ ಗ್ರಾನೈಟ್ ಪ್ರತಿಮೆ ನಿರ್ಮಾಣವಾಗುವವರೆಗೂ ಅವರ ಹಾಲೋಗ್ರಾಮ್ ಪ್ರತಿಮೆ ಇರಲಿದೆ ಎಂದು ಸರ್ಕಾರ ತಿಳಿಸಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು…

1 41 42 43 44 45 73
Translate »