ಮಡಿಕೇರಿ: ನಗರದ ವಿನಾ ಯಕ ಲಾಡ್ಜ್‍ನ 315ನೇ ನಂಬರ್ ಕೋಣೆ ಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇಹ ಲೋಕ ತ್ಯಜಿಸಿದ್ದ, ಕೊಡಗು ಮೂಲದ ಡಿವೈಎಸ್‍ಪಿ ಮಾದಪಂಡ ಗಣಪತಿ ಸಾವಿಗೆ ಜುಲೈ 7ಕ್ಕೆ ಬರೋಬ್ಬರಿ ಎರಡು ವರ್ಷ ತುಂಬುತ್ತಿದೆ. ರಾಜ್ಯ ಸರಕಾರವನ್ನು ತಲ್ಲಣಗೊಳಿಸಿದ್ದ ಡಿವೈಎಸ್‍ಪಿ ಸಂಶಯಾ ಸ್ಪದ ಸಾವಿನ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಚೆನೈನ ಸಿಬಿಐ ತಂಡ ತನಿಖೆ ನಡೆಸುತ್ತಿದ್ದು, ಪ್ರಸ್ತುತ ತನಿಖೆ ಮುಂದುವರಿದಿದೆ. ಚೆನೈ ಸಿ.ಬಿ.ಐ ತಂಡ ಹಲವು ಬಾರಿ ಕೊಡಗಿಗೆ ಆಗಮಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದು, ಅಂತಿಮ ವರದಿ ಜುಲೈ ತಿಂಗಳ ಅಂತ್ಯದೊಳಗೆ ಸುಪ್ರೀಂ ಕೋರ್ಟ್‍ಗೆ ಸಲ್ಲಿಕೆಯಾಗುವ ಕುರಿತು ಮೈಸೂರು ಮಿತ್ರನಿಗೆ ಮೂಲಗಳು ಮಾಹಿತಿ ನೀಡಿದೆ.
ಘಟನೆ ವಿವರ: ಮೂಲತಃ ಕುಶಾಲ ನಗರ ನಂಜರಾಯಪಟ್ಟಣದ ನಿವಾಸಿ ಮಾದಪಂಡ ಗಣಪತಿ ಮಂಗಳೂರು ವಲಯ ಪೊಲೀಸ್ ಕಮಿಷನರ್ ಕಚೇರಿ ಯಲ್ಲಿ ಡಿವೈಎಸ್‍ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಬೆಂಗ ಳೂರಿನ ಮಡಿವಾಳ ಪೊಲೀಸ್ ಠಾಣೆ ಯಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಮಾದಪಂಡ ಗಣಪತಿ ವಿರುದ್ಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪ ಹೊರಿಸಿ ಇಲಾಖಾ ತನಿಖೆ ನಡೆಸಲಾಗಿತ್ತು.
2016ರ ಜುಲೈ 7ರಂದು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಿಂದ ಮಡಿಕೇರಿಗೆ ಆಗಮಿಸಿದ್ದ ಡಿವೈಎಸ್‍ಪಿ ಗಣಪತಿ, ನಗರದ ವಿನಾಯಕ ಲಾಡ್ಜ್‍ನಲ್ಲಿ ರೂಂ ಪಡೆದುಕೊಂಡಿದ್ದರು. ಆ ಬಳಿಕ ತಮ್ಮ ಬಳಿಯಿದ್ದ ವಿವಿಧ ದಾಖಲೆಗಳ ಸಹಿತ ಸಮವಸ್ತ್ರದಲ್ಲೇ ಆಟೋ ಒಂದರಲ್ಲಿ ಜಿಲ್ಲೆಯ ಸುದ್ದಿವಾಹಿನಿಯಾದ ಟಿ.ವಿ.1 ಕಚೇರಿಗೆ ಆಗಮಿಸಿ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್, ಹಿರಿಯ ಐಪಿಎಸ್ ಅಧಿ ಕಾರಿಗಳಾದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಗುಪ್ತಚಾರ ಇಲಾಖೆಯ ಪ್ರಣಾವ್ ಮೋಹಂತಿ ವಿರುದ್ಧ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಇಲಾಖೆ ಒಳಗಿನ ಕಿರುಕುಳ, ಹಳೆಯ ಪ್ರಕರಣವೊಂದರಲ್ಲಿ ತಪ್ಪಿಲ್ಲದಿ ದ್ದರೂ, ತನ್ನನ್ನು ಸಿಲುಕಿಸುವ ಪ್ರಯತ್ನ, ಚರ್ಚ್ ಗಲಭೆ ವಿಚಾರದಲ್ಲಿ ಕಿರುಕುಳ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಮಗ್ರವಾಗಿ ವಿವರಿಸಿದ್ದರು. ಮಾತ್ರವಲ್ಲದೆ ತನ್ನ ಜೀವಕ್ಕೆ ಹಾನಿಯಾದರೆ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೆ ನೇರ ಕಾರಣವೆಂದು ನಿಖರವಾಗಿ ಹೇಳಿಕೆ ನೀಡಿ ನಂತರ ಲಾಡ್ಜ್‍ಗೆ ಆಗಮಿಸಿ ಆತ್ಮಹತ್ಯೆಗೆ ಶರಣಾಗಿದ್ದರು.
ಡಿವೈಎಸ್‍ಪಿ ಗಣಪತಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಮುಂದಾದ ಮಡಿಕೇರಿ ನಗರ ಪೊಲೀಸರು, ಅಂತಿಮ ವಾಗಿ ವಿನಾಯಕ ಲಾಡ್ಜ್‍ಗೆ ತೆರಳಿ ಡಿವೈ ಎಸ್‍ಪಿ ಗಣಪತಿ ರೂಂ ಪಡೆದಿರುವು ದನ್ನು ಪತ್ತೆ ಹಚ್ಚಿದ್ದರು. ಪಕ್ಕದಲ್ಲಿದ್ದ ಕಿಟಕಿ ಯಿಂದ ನೋಡಿದ ಸಂದರ್ಭ ಡಿವೈಎಸ್‍ಪಿ ಗಣಪತಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತ ಪಟ್ಟಿರುವುದು ಪತ್ತೆಯಾಗಿತ್ತು. ಆ ಬಳಿಕ ಮೃತರ ಪೋಷಕರ ಸಮ್ಮುಖದಲ್ಲಿ ವಿನಾಯಕ ಲಾಡ್ಜ್‍ನ ರೂಂ ನಂಬರ್ 315ರ ಬಾಗಿಲು ಒಡೆದು ಒಳ ತೆರಳಿದ ಪೊಲೀ ಸರು, ಮೃತರ ಪೋಷಕರ ಸಮ್ಮುಖದಲ್ಲಿ ಮೃತದೇಹವನ್ನು ಕೆಳಗಿಳಿಸಿ ಮಡಿಕೇರಿ ಜಿಲ್ಲಾ ಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದರು.
ಡಿವೈಎಸ್‍ಪಿ ಗಣಪತಿ ಸಾವಿಗೆ, ಅವರ ಅಂತಿಮ ಹೇಳಿಕೆಯಂತೆ ಗೃಹ ಸಚಿವ ಕೆ.ಜೆ.ಜಾರ್ಜ್, ಹಿರಿಯ ಐಪಿಎಸ್ ಅಧಿ ಕಾರಿಗಳಾದ ಎಡಿಜಿಪಿ ಎ.ಎಂ. ಪ್ರಸಾದ್ ಮತ್ತು ಪ್ರಣಾವ್ ಮೋಹಂತಿ ಕಾರಣ ವೆಂದು ಮಡಿಕೇರಿಯಲ್ಲಿ ಬೃಹತ್ ಪ್ರತಿ ಭಟನೆ ನಡೆಯಿತ್ತಲ್ಲದೆ, ಈ ವಿಚಾರ ರಾಜ್ಯವ್ಯಾಪಿ ತೀವ್ರ ಸ್ವರೂಪ ಪಡೆದು, ರಾಜ್ಯ ಸರಕಾರವನ್ನೇ ತಲ್ಲಣಗೊಳಿಸಿತ್ತು.
ಆ ಬಳಿಕ ಗೃಹ ಸಚಿವ ಸ್ಥಾನಕ್ಕೆ ಕೆ.ಜೆ. ಜಾರ್ಜ್ ರಾಜಿನಾಮೆ ನೀಡಿದರೆ ಹಿರಿಯ ಐಪಿಎಸ್ ಅಧಿಕಾರಿಗಳನ್ನು ರಜೆಯ ಮೇಲೆ ಕಳುಹಿಸಿ ಅಂದಿನ ರಾಜ್ಯದ ಕಾಂಗ್ರೆಸ್ ಸರಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. ತನಿಖೆ ನಡೆಸಿದ ಸಿಐಡಿ, ಡಿವೈಎಸ್‍ಪಿ ಗಣಪತಿ ಸಾವು, ಆತ್ಮಹತ್ಯೆ ಎಂದು ಹೇಳಿತ್ತಲ್ಲದೇ ಸಚಿವರು ಮತ್ತು ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿತ್ತು. ಆ ಬಳಿಕ ರಾಜ್ಯ ಹೈಕೋರ್ಟ್ ಮೊರೆ ಹೋದ ಗಣಪತಿ ಕುಟುಂಬಸ್ಥರು, ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಬಳಿಕ ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಮೂರ್ತಿ ಕೆ.ಎನ್.ಕೇಶವನಾರಾಯಣ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗ ನೇಮಿ ಸಿತ್ತು. ಆ ಬಳಿಕ ವಿಚಾರಣೆ ನಡೆಸಿದ ಆಯೋಗ ನೂರಕ್ಕೂ ಹೆಚ್ಚು ಸಾಕ್ಷಿಗಳು, ವಿವಿಧ ದಾಖಲೆ ಗಳ ಸಹಿತ ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದು, ಆ ವರದಿ ಎಲ್ಲಿಯೂ ಬಹಿರಂಗ ಗೊಂಡಿಲ್ಲ. ಈ ಬೆಳವಣ ಗೆಗಳ ನಡುವೆ ಡಿವೈಎಸ್‍ಪಿ ಮಾದಪಂಡ ಗಣಪತಿ ಪೋಷ ಕರು ಸುಪ್ರೀಂ ಕೋರ್ಟ್ ಮೊರೆ ಹೋಗಿ ಪ್ರಕರಣದ ಸತ್ಯಾಂಶ ಹೊರಬರಲು ಸಿಬಿಐ ತನಿಖೆಗೆ ಒಪ್ಪಿಸುವಂತೆ ಮನವಿ ಮಾಡಿ ದ್ದರು. ಸುಪ್ರೀಂ ಕೋರ್ಟ್‍ನ ಮೇಲ್ವಿಚಾ ರಣೆಯಲ್ಲಿ ಚೆನೈ ಸಿಬಿಐ ತಂಡ ಈ ಪ್ರಕ ರಣವನ್ನು ತನಿಖೆ ನಡೆಸುತ್ತಿದ್ದು, ಹಲವು ದಾಖಲೆಗಳನ್ನು ವಶಕ್ಕೆ ಪಡೆದು ಸಾಕ್ಷಿ ಕಲೆ ಹಾಕುವ ಕಾರ್ಯವನ್ನು ಮಾಡುತ್ತಿದೆ. ಬುಡಮಟ್ಟದಿಂದಲೇ ಪ್ರಕರಣದ ಬೆನ್ನು ಹತ್ತಿ ರುವ ಸಿಬಿಐ ತಂಡ, ಎಲ್ಲಾ ಕೋನಗಳಿಂ ದಲೂ ತನಿಖೆ ನಡೆಸುತ್ತಿದ್ದು, ಡಿವೈಎಸ್‍ಪಿ ಮಾದಪಂಡ ಗಣಪತಿ ಸಾವಿಗೆ ಪೊಲೀಸ್ ಇಲಾಖೆಯ ಕೆಲ ಲೋಪಗಳು ಕಾರಣ ವಿರುವ ಕುರಿತು ಮಾಹಿತಿ ಸಂಗ್ರಹಿಸಿದೆ ಎನ್ನಲಾಗಿದೆ. ಚೆನೈ ಸಿಬಿಐ ತಂಡ ತನ್ನ ತನಿಖಾ ವರದಿಯನ್ನು ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ ಬಳಿಕ ಡಿವೈಎಸ್‍ಪಿ ಮಾದಪಂಡ ಗಣಪತಿ ಸಾವಿನ ನಿಗೂಢ ರಹಸ್ಯ ಬಯಲಾಗಲಿದೆ.