ಚಾಮುಂಡಿ ಬೆಟ್ಟ ಭದ್ರತಾ ಸಿಬ್ಬಂದಿ ಮೇಲೆ ಕಾರು ಚಾಲಕ ಹಲ್ಲೆ
ಮೈಸೂರು

ಚಾಮುಂಡಿ ಬೆಟ್ಟ ಭದ್ರತಾ ಸಿಬ್ಬಂದಿ ಮೇಲೆ ಕಾರು ಚಾಲಕ ಹಲ್ಲೆ

May 13, 2019

ಮೈಸೂರು:ಚಾಮುಂಡಿ ಬೆಟ್ಟದ ದೇವಸ್ಥಾನದ ಬಳಿ ಪ್ರವಾಸಿಗರನ್ನು ಕರೆತಂದಿದ್ದ ಬಾಡಿಗೆ ಕಾರು ಬಿಡಲೊಲ್ಲದ ಭದ್ರತಾ ಸಿಬ್ಬಂದಿ ಮೇಲೆ ಕಾರಿನ ಚಾಲಕ ಹಲ್ಲೆ ಮಾಡಿರುವ ಘಟನೆ ಭಾನುವಾರ ನಡೆದಿದೆ.

ಮೈಸೂರಿನ ನಿವಾಸಿ ಆಯಜ್ ಷರೀಫ್ ಹಲ್ಲೆ ಮಾಡಿದ ಚಾಲಕ. ಚಾಮುಂಡಿಬೆಟ್ಟದ ಖಾಸಗಿ ಭದ್ರತಾ ಸಿಬ್ಬಂದಿ ಮಹೇಶ್ ಹಲ್ಲೆಗೊಳ ಗಾದವರು. ಷರೀಫ್ ಪ್ರವಾಸಿಗರನ್ನು ತನ್ನ ಇನೋವಾ ಕಾರಿನಲ್ಲಿ ದೇವಿ ದರ್ಶನಕ್ಕಾಗಿ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದಾನೆ. ಸೀದಾ ದೇವ ಸ್ಥಾನದ ಬಳಿ ತೆರಳಲು ಯತ್ನಿಸಿದಾಗ ಅಲ್ಲಿನ ಕರ್ತವ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿ ಕಾರನ್ನು ದೇವಸ್ಥಾನದ ಬಳಿ ಬಿಡಲು ಸಾಧ್ಯವಿಲ್ಲ. ಭಾನುವಾರ ರಜಾ ದಿನವಾದ್ದರಿಂದ ದೇವಸ್ಥಾನ ಆವರಣ ತುಂಬಾ ಜನಸಂದಣಿಯಿಂದ ಕೂಡಿದೆ ಎಂದು ಭದ್ರತಾ ಸಿಬ್ಬಂದಿ ಮಹೇಶ್, ಚಾಲಕನಿಗೆ ಮನವರಿಕೆ ಮಾಡಲು ಯತ್ನಿಸಿದರೂ ಕೇಳದ ಕಾರಿನ ಚಾಲಕ ಷರೀಫ್, ಮಹೇಶ್ ಮೇಲೆ ಹಲ್ಲೆಗೆ ಮುಂದಾಗಿ ದ್ದಾನೆ. ಸ್ಥಳೀಯ ನೆರವಿನೊಂದಿಗೆ ಷರೀಫ್ ನನ್ನು ಹಿಡಿದು ಕೆ.ಆರ್.ಪೊಲೀಸರಿಗೊಪ್ಪಿಸಿ ದ್ದಾರೆ. ವಿಚಾರಣೆ ನಡೆಸಿದ ಪೋಲೀಸರು, ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ಠಾಣಾ ಜಾಮೀನಿನ ಮೇಲೆ ಷರೀಫ್‍ನನ್ನು ಬಿಡುಗಡೆಗೊಳಿಸಿದ್ದಾರೆ.

.

Translate »