ಚಂದ್ರಯಾನ-2: 4ನೇ ಬಾರಿ ನೌಕೆಯ ಕಕ್ಷೆ ಎತ್ತರಿಸುವ ಕಾರ್ಯ ಯಶಸ್ವಿ
ಮೈಸೂರು

ಚಂದ್ರಯಾನ-2: 4ನೇ ಬಾರಿ ನೌಕೆಯ ಕಕ್ಷೆ ಎತ್ತರಿಸುವ ಕಾರ್ಯ ಯಶಸ್ವಿ

August 3, 2019

ಬೆಂಗಳೂರು,ಆ.2- ಇತ್ತೀಚಿಗೆ ಭಾರ ತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಉಡಾ ವಣೆ ಮಾಡಿದ ಚಂದ್ರಯಾನ-2 ನೌಕೆಯ ಕಕ್ಷೆ ಯನ್ನು 4ನೇ ಬಾರಿ ಎತ್ತ ರಿಸುವ ಕಾರ್ಯ ಶುಕ್ರವಾರ ಯಶಸ್ವಿ ಯಾಗಿದೆ. ಇಂದು ಮಧ್ಯಾಹ್ನ 3.27ಕ್ಕೆ ಈ ಕಾರ್ಯಾಚರಣೆ ನಡೆಸಲಾಗಿದೆ. ನೌಕೆಯಲ್ಲಿನ ಎಂಜಿನ್ ಅನ್ನು ಚಾಲೂ ಮಾಡಿ ಈ ಕಾರ್ಯಾಚರಣೆ ನಡೆಸಲಾಗಿದೆ. 4ನೇ ಬಾರಿ ಕಕ್ಷೆಗೇರಿಸುವ ಕಾರ್ಯ ಯಶಸ್ವಿ ಯಾಗಿದೆ ಎಂದು ಇಸ್ರೋ ತಿಳಿಸಿದೆ. ನೌಕೆಯ ಹಾದಿಗೆ ಕಣ್ಗಾವಲು ಇಡಲಾ ಗಿದ್ದು, ಪರಿಶೀಲಿಸಲಾಗುತ್ತಿದೆ ಎಂದೂ ಇಸ್ರೊ ಹೇಳಿದೆ. ಈ ಕುರಿತ ಫೆÇೀಟೋ, ಮಾಹಿತಿಯನ್ನು ಇಸ್ರೋ ಟ್ವೀಟ್ ಮಾಡಿದೆ. ಸರಿ ಸುಮಾರು 4 ಲಕ್ಷ ಕಿ.ಮೀ ದೂರ ದಲ್ಲಿರುವ ಚಂದ್ರನ ಮೇಲೆ ಲ್ಯಾಂಡರ್, ರೋವರ್ ಮತ್ತು ಆರ್ಬಿಟರ್ ಒಳಗೊಂಡ 3,850 ಕೆ.ಜಿ ತೂಕದ ಚಂದ್ರಯಾನ-2 ನೌಕೆಯನ್ನು ಚಂದ್ರನ ಮೇಲ್ಮೈ ಮೇಲೆ ಇಳಿ ಸಲು ಒಟ್ಟು 15 ಬಾರಿ ಎತ್ತರಿಸುವ, ಸರಿ ಯಾದ ದಿಕ್ಕಿನಲ್ಲಿ ಸಾಗುವಂತೆ ಸರಿಪಡಿಸುವ ಕಾರ್ಯವನ್ನು ಇಸ್ರೋ ನಡೆಸಲಿದೆ.

Translate »