`ಫನಿ’ ಚಂಡಮಾರುತ ಹಾನಿ ದುರಸ್ತಿ ಕಾರ್ಯದಲ್ಲಿ ಭಾಗವಹಿಸಿದ್ದ ಚೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನ
ಮೈಸೂರು

`ಫನಿ’ ಚಂಡಮಾರುತ ಹಾನಿ ದುರಸ್ತಿ ಕಾರ್ಯದಲ್ಲಿ ಭಾಗವಹಿಸಿದ್ದ ಚೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನ

June 11, 2019

ಮೈಸೂರು: ಒರಿಸ್ಸಾ ರಾಜ್ಯ ದಲ್ಲಿ “ಫನಿ” ಚಂಡಮಾರುತದಿಂದ ವಿದ್ಯುತ್ ಜಾಲ ಹಾನಿಗೊಳಗಾಗಿದ್ದ ಕಾರಣ ದುರಸ್ಥಿ ಕಾರ್ಯಕ್ಕೆ ಚೆಸ್ಕಾಂನ ಎನ್.ಆರ್. ಮೊಹಲ್ಲಾ ವಿಭಾಗದ 15 ಸಿಬ್ಬಂದಿಯನ್ನೊ ಳಗೊಂಡ ತಂಡವನ್ನು ನಿಯೋಜಿಸಲಾಗಿತ್ತು.
ನಿಯೋಜಿಸಲ್ಪಟ್ಟ ಸಿಬ್ಬಂದಿ ವರ್ಗದ ವರು ಒರಿಸ್ಸಾ ರಾಜ್ಯದಲ್ಲಿನ ಪೂರಿ ನಗ ರದ ಸುತ್ತಮುತ್ತಾ ಸ್ಥಳೀಯ ಅಧಿಕಾರಿಗಳ ಜೊತೆ ಕೈ ಜೋಡಿಸಿ ವಿದ್ಯುತ್ ಪುನರ್ ಪೂರೈಕೆ ವ್ಯವಸ್ಥೆ ಮಾಡುವಲ್ಲಿ ನೆರವಾ ಗಿದ್ದು, ಇವರನ್ನು ಎನ್.ಆರ್.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿ ಯರ್ ಹೆಚ್.ಎಸ್.ಸ್ವಾಮಿ ಅಧ್ಯಕ್ಷತೆಯಲ್ಲಿ ಜೂನ್ 3 ರಂದು ಗೌರವಿಸಲಾಯಿತು.

ಚಾಮುಂಡಿಪುರಂ ಉಪ ವಿಭಾಗದ ಅಸಿಸ್ಟೆಂಟ್ ಇಂಜಿನಿಯರ್ ಇ. ಮಂಜು (ಟೀಂ ಲೀಡರ್), ಕೋಡಬಲ್ ಬಸಪ್ಪ (ಟೀಮ್ ಅಸಿಸ್ಟೆಂಟ್), ನಾಗರಾಜು ಕಡ ಕೊಳ, ಆನಂದ್, ಗುರುರಾಜ್, ಮಂಜು ನಾಥ್ ಕೋವಿ, ವೀರೇಶ್, ಪ್ರಮೋದ್, ಗೋಪಾಲ್, ಗಣೇಶ್, ರಾಜೇಶ್, ಮಂಜುನಾಥ್, ಬಸವರಾಜು, ಶ್ರೀನಿವಾಸ ಮತ್ತು ನಾಗೇಂದ್ರ (ಎಲ್ಲರೂ ಪವರ್ ಮ್ಯಾನ್) ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಈ ವಿಭಾಗ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ನಿರ್ವಹಣಾ ಸಿಬ್ಬಂದಿ ವರ್ಗದವರಿಗೆ ವಿದ್ಯುತ್ ಸುರಕ್ಷತೆ ಕುರಿತು ಅರಿವು ಮೂಡಿಸಲಾಯಿತು. ಭಾಗ ವಹಿಸಿದ ಎಲ್ಲಾ ನಿರ್ವಹಣಾ ಸಿಬ್ಬಂದಿ ವರ್ಗದವರಿಗೆ ಕಾರ್ಯನಿರ್ವಾಹಕ ಇಂಜಿ ನಿಯರ್, ಎನ್.ಆರ್.ಮೊಹಲ್ಲಾ ವಿಭಾಗದ ವರು ಸಿದ್ಧಪಡಿಸಿರುವ “ಪವರ್ ಮ್ಯಾನ್‍ಗಳ ಸುರಕ್ಷತಾ ಕೈಪಿಡಿ”ಯನ್ನು ವಿತರಿಸಲಾಯಿತು.

ಎಲ್ಲಾ ನಿರ್ವಹಣಾ ಸಿಬ್ಬಂದಿಯವರಿಗೆ ವಿದ್ಯುತ್ ಅಪಘಾತಕ್ಕೆ ಕಾರಣಗಳೇನು, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ವಿದ್ಯುತ್ ಅಪಘಾತಗಳಿಂದ ಆಗುವ ಪರಿಣಾಮಗಳು, ವಿದ್ಯುತ್ ಅಪ ಘಾತಕ್ಕೆ ಸಾಮಾನ್ಯ ಕಾರಣಗಳು, ಸಿಬ್ಬಂದಿ ವರ್ಗದವರ ಸಾಮಾನ್ಯ ಜವಾಬ್ದಾರಿಗಳು ಹಾಗೂ ಸುರಕ್ಷತಾ ಸೂತ್ರಗಳ ಕುರಿತಂತೆ ವಿವರ ವಾದ ಕಾರ್ಯಾಗಾರವನ್ನು ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿ ವರ್ಗ ದವರಿಗೂ ಸುರಕ್ಷತೆ ಕುರಿತಂತೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಎನ್.ಆರ್. ಮೊಹಲ್ಲಾ ವಿಭಾಗದ ಚಾಮುಂಡಿಪುರಂ ಉಪವಿಭಾಗ ವ್ಯಾಪ್ತಿಯ ಕಡಕೊಳ ಶಾಖೆಯಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ಪವರ್‍ಮ್ಯಾನ್ ಪ್ರಕಾಶ್ ಅವರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವುದಕ್ಕೆ ಉತ್ತಮ ಪವರ್‍ಮ್ಯಾನ್ ಎಂದು ಗೌರವಿಸಲಾಯಿತು.

Translate »