ಅ.10ರಂದು `ಚಿಕಾಗೋ ವಿಶ್ವ  ವಿಜೇತ ವಿವೇಕ ವಾಣಿ-125’ ಚಾಲನೆ
ಮೈಸೂರು

ಅ.10ರಂದು `ಚಿಕಾಗೋ ವಿಶ್ವ  ವಿಜೇತ ವಿವೇಕ ವಾಣಿ-125’ ಚಾಲನೆ

September 28, 2018

ಮೈಸೂರು: ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೋ ದಲ್ಲಿ ವಿಶ್ವ ಧರ್ಮ ಸಮ್ಮೇಳನದಲ್ಲಿ ದೇಶದ ಗರಿಮೆ ಸಾರಿದ 125ನೇ ವರ್ಷಾಚರಣೆ ಸ್ವರಣಾರ್ಥ ಅ.10 ರಂದು ಬೆಳಿಗ್ಗೆ 11.30 ಗಂಟೆಗೆ ಮೈಸೂರಿನ ಚಾಮುಂಡಿಬೆಟ್ಟ ದಲ್ಲಿ `ಚಿಕಾಗೋ ವಿಶ್ವ ವಿಜೇತ ವಿವೇಕಾವಾಣಿ-125’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಸ್ತ್ರ ಭಾರತದ ವ್ಯವಸ್ಥಾಪಕ ಜೆ.ವಿನೋದ್‍ಕುಮಾರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರು ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವೇಕಾನಂದ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಮಹಾನ್ ಸೇನಾನಿ. ಅವರ ಗೌರವಾರ್ಥ ಈ ಕಾರ್ಯಕ್ರಮ ಏರ್ಪಡಿಸಿದ್ದು, ನಾಡಹಬ್ಬ ದಸರಾ ಉದ್ಘಾಟನೆಯ ನಂತರ ಈ ಕಾರ್ಯಕ್ರಮವನ್ನು ಉದ್ಘಾಟಿಸಲಾಗುವುದು. 6ರಿಂದ 60 ವರ್ಷದವರೆಗಿನ ಸುಮಾರು 125 ಜನರು ವಿವೇಕಾನಂದರ ಪೋಷಾಕಿನಲ್ಲಿ ಭಾಗವಹಿಸಲಿದ್ದಾರೆ. 3 ನಿಮಿಷದ ಭಾಷಣದ ಧ್ವನಿ ತುಣುಕನ್ನು ಈ ಸಂದರ್ಭದಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ಹೇಳಿದರು.

ಮೈಸೂರಿನ 19 ಕೇಂದ್ರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ವಿವೇಕಾನಂದರ ಪೋಷಾಕನ್ನು ಸಂಸ್ಥೆಯೇ ಒದಗಿಸಲಿದೆ. ಆಸಕ್ತ ವಿದ್ಯಾರ್ಥಿಗಳು, ನಾಗರಿಕರು, ಸಂಘ ಸಂಸ್ಥೆಗಳು 3 ದಿನ ಮೊದಲೇ ಹೆಸರು ನೋಂದಾಯಿಸಿಕೊಳ್ಳಬೇಕು. ವಿವರ ಗಳಿಗೆ ಮೊಬೈಲ್- 9886825741 ಅಥವಾ 9036833737 ಸಂಪರ್ಕಿಸಬೇಕು. ರಾಜ್ಯಾ ದ್ಯಂತವೂ ನಡೆಯಲಿರುವ ಈ ಕಾರ್ಯಕ್ರಮ ಜ.12ರಂದು ಸಮಾರೋಪಗೊಳ್ಳಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರೇಣುಕಾ ವೈಕುಂಠಯ್ಯ, ಅನೂಪ್ ರಮೇಶ್ ಕೌಶಿಕ್, ಜಿ.ಶ್ರೀಧರ್, ವಿವೇಕಾನಂದರ ವೇಷ ತೊಟ್ಟ ಚಿಣ್ಣರು ಉಪಸ್ಥಿತರಿದ್ದರು.

Translate »