ರಾಜ್ಯಸಭೆಯಲ್ಲೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ
ಮೈಸೂರು

ರಾಜ್ಯಸಭೆಯಲ್ಲೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ

December 12, 2019

ನವದೆಹಲಿ: ಭಾರೀ ವಿವಾದ ಸೃಷ್ಟಿಸಿ ರುವ ಪೌರತ್ವ ತಿದ್ದುಪಡಿ ಮಸೂದೆ ಬುಧವಾರ 8 ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ವಿರೋಧ ಪಕ್ಷಗಳ ವಿರೋಧದ ನಡುವೆಯೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದ ರಾಜ್ಯಸಭೆ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಿಕೊಟ್ಟಿತು.

ಮಸೂದೆಯ ಪರವಾಗಿ 125 ಸದ ಸ್ಯರು ಮತ ಹಾಕಿದರೆ, ಮಸೂದೆ ವಿರುದ್ಧ ವಾಗಿ 105 ಮತಗಳು ಚಲಾವಣೆಯಾ ದವು. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಸೂದೆಯನ್ನು ರಾಜ್ಯ ಸಭೆಯಲ್ಲಿ ಮಂಡಿಸಿದರು. ಈ ವೇಳೆ ಮಸೂದೆ ವಿರೋಧಿಸಿ ವಿರೋಧ ಪಕ್ಷ ಗಳು ಗಲಾಟೆ ಮಾಡಿದವು. ಶಿವಸೇನೆ ಸೇರಿ ಹಲವು ಪಕ್ಷಗಳು ಸಭಾತ್ಯಾಗ ಮಾಡಿ, ಮತದಾನ ಪ್ರಕ್ರಿಯೆಯಿಂದ ಹಿಂದೆ ಸರಿ ದವು. ಮಸೂದೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಅವರು, ದೇಶದಲ್ಲಿ ಖಾಯಂ ವಿಳಾಸ ಇಲ್ಲದೇ ಜೀವಿಸುತ್ತಿರುವ ಲಕ್ಷಾಂತರ ಮಂದಿಗೆ ಸಂವಿಧಾನಬದ್ಧವಾಗಿ ನಾಗರಿಕತ್ವ ನೀಡುವ ಉದ್ದೇಶದೊಂದಿಗೆ ಪೌರತ್ವ ತಿದ್ದುಪಡಿ ಮಸೂದೆ ತರಲಾಗುತ್ತಿದೆ. ಆದರೆ ಈ ಮಸೂದೆ ಮುಸ್ಲಿಮರ ವಿರುದ್ಧವಾಗಿದೆ ಎಂಬ ಸುಳ್ಳು ಮಾಹಿತಿಯನ್ನು ಎಲ್ಲೆಡೆ ಹಬ್ಬಿಸುವ ಪ್ರಯತ್ನ ನಡೆದಿದೆ. ಈ ಮಸೂದೆ ನೆರೆಯ ದೇಶಗಳ ಅಲ್ಪಸಂಖ್ಯಾತ ಸಮುದಾಯದವರಿಗೋಸ್ಕರ ಮಾತ್ರ. ಭಾರತದ ಮುಸ್ಲಿಮರಿಗೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ. ಭಾರ ತದ ಮುಸ್ಲಿಮರು ಸುರಕ್ಷಿತವಾಗಿರಲಿದ್ದಾರೆ ಮತ್ತು ಸುರಕ್ಷಿತವಾಗಿ ಉಳಿಯಲಿದ್ದಾರೆ. ನಾನು ಭಾರತದ ಮುಸ್ಲಿಮರಲ್ಲಿ ಮನವಿ ಮಾಡುತ್ತೇನೆ, ಯಾವುದೇ ಕಾರಣಕ್ಕೂ ತಪ್ಪು ಮಾಹಿತಿಗೆ ಒಳಗಾಗಬೇಡಿ. ದಯವಿಟ್ಟು ತಪ್ಪು ಮಾರ್ಗದರ್ಶನಕ್ಕೆ ಒಳಗಾಗಬೇಡಿ, ದಯ ವಿಟ್ಟು ಭಯದಿಂದ ಬದುಕಬೇಡಿ, ಭಯ ರಹಿತವಾಗಿ ಜೀವಿಸಿ ಎಂದು ಮನವಿ ಮಾಡಿದರು. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ 2015ಕ್ಕಿಂತ ಹಿಂದೆಯೇ ಭಾರತಕ್ಕೆ ಬಂದಿರುವ ಮುಸ್ಲಿಂಯೇತರರಿಗೆ ನಾಗರಿಕತ್ವ ನೀಡುವ ನಿಟ್ಟಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ. ಸೋಮವಾರ ಮಸೂದೆ ಲೋಕಸಭೆಯಲ್ಲಿ 334 ಮತಗಳೊಂದಿಗೆ ಅಂಗೀಕಾರ ಪಡೆದುಕೊಂಡಿದೆ. 7 ಗಂಟೆಗಳ ಸುದೀರ್ಘ ಚರ್ಚೆ ನಡೆದಿದ್ದು, 106 ಮತಗಳು ಮಸೂದೆ ವಿರುದ್ಧ ಚಲಾ ವಣೆಯಾಗಿದ್ದವು. ಇದೀಗ ರಾಜ್ಯಸಭೆಯಲ್ಲಿ 8 ಗಂಟೆಗಳ ಚರ್ಚೆ ಬಳಿಕ ಅಲ್ಲೂ ಅಂಗೀ ಕಾರಗೊಂಡಿದೆ. ಮಸೂದೆ ಶೀಘ್ರದಲ್ಲೇ ಕಾನೂನಾಗಿ ಜಾರಿಯಾಗಲಿದೆ. ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಗೊಂಡ ಬಳಿಕ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಅವರು ಭಾರತಕ್ಕೆ ಈ ದಿನ ಹೆಗ್ಗುರುತಾಗಲಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

Translate »