ಬಸ್ ಪ್ರಯಾಣ ದರ ಏರಿಕೆಗೆ ಸಿಎಂ ಬ್ರೇಕ್
ಮೈಸೂರು

ಬಸ್ ಪ್ರಯಾಣ ದರ ಏರಿಕೆಗೆ ಸಿಎಂ ಬ್ರೇಕ್

June 25, 2019

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಏರಿ ಕೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಅವರು ಸದ್ಯಕ್ಕೆ ಬ್ರೇಕ್ ಹಾಕಿದ್ದು, ಪ್ರಯಾಣಿಕರು ನಿರಾ ಳರಾಗಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ನೇತೃತ್ವದಲ್ಲಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಾರಿಗೆ ಇಲಾಖೆ ಮತ್ತು ರಸ್ತೆ ಸಾರಿಗೆ ಸಂಸ್ಥೆ ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದ್ಯಕ್ಕೆ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವವನ್ನು ಕೈಬಿಡಲಾಗಿದೆ. ಬಸ್ ದರ ಏರಿಕೆ ಅನಿ ವಾರ್ಯತೆ ಕುರಿತಂತೆ ಸೂಕ್ತ ಸಮರ್ಥನೆ ಗಳೊಂದಿಗೆ ಮರು ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಕುಮಾರ ಸ್ವಾಮಿ ಅವರು ಸಾರಿಗೆ ಇಲಾಖೆ ಅಧಿ ಕಾರಿಗಳಿಗೆ ಸೂಚಿಸಿದ್ದಾರೆ. ಬಸ್ ದರ ವನ್ನು ಶೇಕಡವಾರು ಏರಿಕೆಗೆ ಸಂಬಂಧಿ ಸಿದಂತೆ ಹೊಸ ಪ್ರಸ್ತಾವನೆ ಸಲ್ಲಿಸು ವಂತೆ ಸಿಎಂ ಕುಮಾರಸ್ವಾಮಿ ಅವರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ, ಸಾರಿಗೆ ಇಲಾಖೆ ನಷ್ಟದಿಂದ ಹೊರಬರುವ ಬಗ್ಗೆ ಮಾರ್ಗೋಪಾಯದ ಬಗ್ಗೆಯೂ ಅಧಿ ಕಾರಿಗಳನ್ನು ಸಿಎಂ ಕೇಳಿದ್ದಾರೆ. ಗಣನೀಯ ಪ್ರಮಾಣದಲ್ಲಿ ಏರುತ್ತಿರುವ ತೈಲಬೆಲೆ, ಕಳೆದ ಕೇಂದ್ರ ಬಜೆಟ್ ನಂತರ ಏರಿಕೆ ಆಗಿರುವ ವಾಹನ ಗಳ ಬಿಡಿ ಭಾಗಗಳು, ಏರಿಕೆ ಆಗಿರುವ ಸಾರಿಗೆ ನೌಕರರ ವೇತನ, ದುಬಾರಿ ಆಗಿರುವ ನಿರ್ವಹಣೆ ವೆಚ್ಚದ ಕುರಿತು ಅಧಿಕಾರಿ ಗಳು ಸಿಎಂಗೆ ಮಾಹಿತಿ ನೀಡಿದರು.

Translate »