ಮೈಸೂರಲ್ಲಿ ಸಿಎಂ ಕುಮಾರಸ್ವಾಮಿ ವಾಸ್ತವ್ಯ
ಮೈಸೂರು

ಮೈಸೂರಲ್ಲಿ ಸಿಎಂ ಕುಮಾರಸ್ವಾಮಿ ವಾಸ್ತವ್ಯ

May 19, 2019

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿ ದ್ದಾರೆ. ಶನಿವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ ಅವರು, ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದಾರೆ. ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಅವರೊಂದಿಗೆ ಸುದೀರ್ಘ ಸಭೆ ನಡೆಸಿದ್ದಾರೆಂದು ತಿಳಿದುಬಂದಿದೆ.

ನಾಳೆ (ಮೇ 19) ಬೆಳಿಗ್ಗೆ 11ಕ್ಕೆ ಮೈಸೂರಿನ ಕಲಾಮಂದಿರದಲ್ಲಿ ನಡೆಯಲಿರುವ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ಪುಸ್ತಕಗಳ ಬಿಡುಗಡೆ ಸಮಾ ರಂಭದಲ್ಲಿ ಭಾಗವಹಿಸಲಿದ್ದಾರೆ. ನಾಳೆಯೂ ಮೈಸೂರಿ ನಲ್ಲೇ ವಾಸ್ತವ್ಯ ಹೂಡಿ, ಮೇ 20ರಂದು ಬೆಳಿಗ್ಗೆ ಬೆಂಗ ಳೂರಿಗೆ ತೆರಳಲಿದ್ದಾರೆಂದು ಹೇಳಲಾಗಿದೆ.

`ಬದಲಾವಣೆ’ ಮೂಲಕ ಮೈಸೂರಿನ ಕೌಸ್ತುಭ್ ಹೊಸ ರ್ಯಾಪ್ ಪ್ರತಿಭೆ
ಮೈಸೂರು: ಮೈಸೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಕೌಸ್ತುಭ್, ರ್ಯಾಪ್ ಸಂಗೀತದ ಮೂಲಕ ಸಮಾಜದ `ಬದಲಾವಣೆ’ ಬಯಸಿದ್ದಾರೆ.

ಇತ್ತೀಚೆಗೆ ವಿಶಿಷ್ಟ ಶೈಲಿಯ ರ್ಯಾಪ್ ಸಂಗೀತ ಯುವ ಸಮುದಾಯಕ್ಕೆ ಹೆಚ್ಚು ಪ್ರಿಯವಾಗಿದೆ. ಎಲ್ಲಾ ವಯೋಮಾನ ದವರೂ ರ್ಯಾಪ್ ಹಾಡುಗಳನ್ನು ಆಲಿಸಿ, ಸಂಭ್ರಮಿಸುತ್ತಾರೆ. ಶೋಷಿತರು, ಬಡವರ ಪರವಾಗಿ ಹುಟ್ಟಿದ ವಿಭಿನ್ನ ರ್ಯಾಪ್ ಸಂಗೀತ, ಇಂಗ್ಲಿಷ್, ಹಿಂದಿ ಮಾತ್ರ ವಲ್ಲದೆ ಬಹುತೇಕ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲೂ ಹಾಸು ಹೊಕ್ಕಾಗಿದೆ. ಕನ್ನಡದಲ್ಲೂ ತನ್ನದೇ ಆದ ಛಾಪು ರೂಪಿಸಿದೆ. ರ್ಯಾಪ್ ಮೂಲಕವೇ ಅನೇಕ ಕಲಾವಿದರು ಪ್ರಸಿದ್ಧರಾಗಿದ್ದಾರೆ. ಹಾಗೆಯೇ ಮೈಸೂರಿನ ವಿದ್ಯಾವರ್ಧಕ ಇಂಜಿನಿಯ ರಿಂಗ್ ಕಾಲೇಜಿನ ಅಂತಿಮ ವರ್ಷದ ಮೆಕ್ಯಾನಿಕಲ್ ವಿದ್ಯಾರ್ಥಿ ಕೌಸ್ತುಭ, ಅರ್ಥ ಪೂರ್ಣ ಹಾಗೂ ಅವಶ್ಯಕ ಥೀಮ್ ಇಟ್ಟುಕೊಂಡು ರ್ಯಾಪ್ ಸಾಂಗ್ ಮಾಡಿ ದ್ದಾರೆ. ಹೆಣ್ಣಿನ ಮೇಲಿನ ದೌರ್ಜನ್ಯ ಖಂಡಿಸುವುದರ ಜೊತೆಗೆ ಸಹಿಸಿಕೊಂಡಿ ರುವ ಯುವ ಸಮುದಾಯವನ್ನು ಬಡಿದೆಬ್ಬಿಸುವ `ಬದಲಾವಣೆ’ ರ್ಯಾಪ್ ಸಾಂಗ್ ಯೂಟ್ಯೂಬ್, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಸ್ನೇಹಿತೆ ಮೇಲೆ ಅತ್ಯಾಚಾರ ನಡೆದಿದೆ ಎಂಬ ವಿಚಾರ ತಿಳಿದ ಯುವಕ ತೀಕ್ಷ್ಣ ಭಾಷೆಯಲ್ಲೇ ಸಮಾಜಕ್ಕೆ ಪಾಠ ಹೇಳು ವಂತಿದೆ ಈ ರ್ಯಾಪ್ ಸಾಂಗ್. ಹೆಣ್ಣಿನಿಂ ದಲೇ ಜೀವನ, ಆಕೆಯ ಬಾಳಲ್ಲಿ ಆಟವಾಡಬೇಡಿ, ದೇಶಕ್ಕೆ ಕೆಟ್ಟ ಹೆಸರು ತರಬೇಡಿ, ಹೆಣ್ಣಿನ ಬಗ್ಗೆ ನಿಮ್ಮಲ್ಲಿರುವ ಕೆಟ್ಟ ಯೋಚನೆಯನ್ನು ಬದಲಾಯಿಸಿ ಕೊಳ್ಳಿ, `ಬದಲಾವಣೆ’ಗೆ ಎಲ್ಲರೂ ಕೈ ಜೋಡಿಸಿ ಎಂದು ಜಾಗೃತಿ ಮೂಡಿಸು ವಂತಿದೆ. ಸಾಹಿತ್ಯ, ನಾಟಕ, ಬೀದಿ ನಾಟಕ, ಚಿತ್ರಗೀತೆಗಳ ಮೂಲಕ ಅನೇಕರು ಮಹಿಳಾ ದೌರ್ಜನ್ಯ ಖಂಡಿಸಿದ್ದಾರೆ. ಹಾಗೆಯೇ ಮೈಸೂರಿನ ಕೌಸ್ತುಭ ರ್ಯಾಪ್ ಸಂಗೀತದ ಮೂಲಕ ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ. ಮಹಿಳೆಗೂ ಸಮಾ ನತೆ ಬೇಕೆಂದು ಪ್ರತಿಪಾದಿಸಿದ್ದಾರೆ.

`ಕಿಲ್ಲಾ-ಕೆ ಎಕೆಎ ಕೌಸ್ತುಭ್’ ಎಂಬ ರ್ಯಾಪ್ ನೇಮ್ ಹೊಂದಿರುವ ಕೌಸ್ತುಭ್, `ಬದಲಾವಣೆ’ಯ ಗೀತ ರಚನೆಯೊಂ ದಿಗೆ ಸಂಗೀತ ಸಂಯೋಜಿಸಿ, ಹಾಡಿ, ನಟಿಸಿದ್ದಾರೆ. ಯಶಸ್‍ಗೌಡ `ಬದ ಲಾವಣೆ’ಯ ನಿರ್ಮಾಪಕರಾಗಿದ್ದು, ತೇಜಸ್ ಜೈನ್ ನಿರ್ದೇಶಿಸಿದ್ದಾರೆ.

ಅಶ್ವಿಜ್ ದೋಂಥಿ ಎಡಿಟಿಂಗ್, ಚಿನ್ಮಯ್ ಮೂರ್ತಿ ಸ್ಕ್ರೀನ್ ಪ್ಲೇ, ಎಂಸೀ ರಾಗ ಎಕೆಎ ಜೆ.ಕೆ.ರಘುನಾಥ್ ಕ್ರಿಯೇ ಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಈ ತಂಡ ಹಿಂದೆ ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ `ಯಾಕೆ?’ ರ್ಯಾಪ್ ಸಾಂಗ್ ಮೂಲಕ ನಿರಾಶ್ರಿತರಿಗೆ ನೆರವು ಕೋರಿತ್ತು. ಯೂಟ್ಯೂಬ್‍ನಲ್ಲಿ `ಃಚಿಜಚಿಟಚಿvಚಿಟಿe ಞಚಿಟಿಟಿಚಿಜಚಿ ಡಿಚಿಠಿ soಟಿg’ ಎಂದು ಟೈಪ್ ಮಾಡಿದರೆ `ಬದಲಾವಣೆ’ ನಿಮ್ಮ ಕಣ್ಮುಂದೆ ಮೂಡುತ್ತದೆ. ಮಹಿಳಾ ಸಬಲೀ ಕರಣ ಥೀಮ್‍ನಲ್ಲಿ `ಬದಲಾವಣೆ’ ಏಕ ವ್ಯಕ್ತಿ ರ್ಯಾಪ್ ಸಾಂಗ್ ಮಾಡಿರುವ ಕೌಸ್ತುಭ್, ಮೈಸೂರಿನ ರಾಮಕೃಷ್ಣನಗ ರದ ಪಿ.ಜಿ.ರಾಮನ್ ಹಾಗೂ ಎನ್. ಭಾರತಿ ದಂಪತಿ ಪುತ್ರ. ತಾಯಿ ವೀಣೆ, ಅಜ್ಜಿ ವಯೋಲಿನ್ ವಾದಕರು. ಕುಟುಂಬ ದಲ್ಲಿ ಕರ್ನಾಟಕ ಸಂಗೀತ ಬೆರೆತು ಹೋಗಿದೆ. ಕೌಸ್ತುಭ್ ಸಹ ವಿದ್ವಾನ್ ಹೆಚ್.ಕೆ.ನರಸಿಂಹ ಮೂರ್ತಿ ಅವರ ಬಳಿ ವಯೋಲಿನ್ ಕಲಿಯುತ್ತಿದ್ದಾರೆ. ಶಾಸ್ತ್ರೀಯ ಸಂಗೀತದ ಜೊತೆಗೆ ರ್ಯಾಪ್ ಸಂಗೀತದಲ್ಲಿ ಆಸಕ್ತಿ ಹೊಂದಿದ್ದು, ಎಮಿ ನಮ್, ಎಂ.ಸಿ.ಬಿಜ್ಜು ಅವರಂತೆ ಉತ್ತಮ ರ್ಯಾಪರ್ ಆಗಬೇಕೆಂದು ಮುನ್ನಡೆದಿದ್ದಾರೆ.

Translate »