ಸಂದೇಶ್ ಕುಟುಂಬದಿಂದ ಕೆಳ, ಮಧ್ಯಮ ವರ್ಗಕ್ಕೆ ಮತ್ತೊಂದು ಕೊಡುಗೆ `ಸಮಸ್ತ್’ ಕಲ್ಯಾಣ ಮಂಟಪ
ಮೈಸೂರು

ಸಂದೇಶ್ ಕುಟುಂಬದಿಂದ ಕೆಳ, ಮಧ್ಯಮ ವರ್ಗಕ್ಕೆ ಮತ್ತೊಂದು ಕೊಡುಗೆ `ಸಮಸ್ತ್’ ಕಲ್ಯಾಣ ಮಂಟಪ

May 19, 2019

ಮೈಸೂರು: ಮಧ್ಯಮ ಹಾಗೂ ಕೆಳವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಲಭಿಸಬೇಕೆಂಬ ಉದ್ದೇಶದಿಂದ ನೂತನವಾಗಿ ನಿರ್ಮಿಸಿರುವ `ಸಮಸ್ತ್ ಕಲ್ಯಾಣ ಮಂಟಪ’ವನ್ನು ಶುಕ್ರವಾರ ಲೋಕಾರ್ಪಣೆಗೊಳಿಸಲಾಯಿತು.

ರಿಂಗ್ ರಸ್ತೆಯ ಆಲನಹಳ್ಳಿ ದೇವೇ ಗೌಡ ವೃತ್ತದ ಬಳಿ ನಿರ್ಮಿಸಿರುವ ಅತ್ಯಾ ಧುನಿಕ ಹಾಗೂ ಸುಸಜ್ಜಿತ ವ್ಯವಸ್ಥೆಯುಳ್ಳ `ಸಮಸ್ತ್ ಕಲ್ಯಾಣ ಮಂಟಪ’ವನ್ನು ಸಂದೇಶ್ ಗ್ರೂಪ್ ಒಡೆತನದ ಮಾಲೀಕರು ಹಾಗೂ ವಿಧಾನಪರಿಷತ್ ಸದಸ್ಯ ಸಂದೇಶ್‍ನಾಗ ರಾಜ್ ಉದ್ಘಾಟಿಸಿದರು.

ನಂತರ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಮಾತನಾಡಿ, ಮಧ್ಯಮ ವರ್ಗದವರನ್ನು ದೃಷ್ಟಿಯಲ್ಲಿಟ್ಟು ಕೊಂಡು ಅತ್ಯಾಧುನಿಕ ಹಾಗೂ ಸುಸಜ್ಜಿತ ವ್ಯವಸ್ಥೆಯುಳ್ಳ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಸಾರ್ವಜನಿಕರು ಸದುಪ ಯೋಗಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಮಾಜಿ ಮೇಯರ್ ಸಂದೇಶ್‍ಸ್ವಾಮಿ ಮಾತನಾಡಿ, ಸಹೋದರ ಸಂದೇಶ್‍ನಾಗ ರಾಜ್ ಅವರು ಉದ್ಯಮ, ಚಲನಚಿತ್ರ, ರಾಜ ಕೀಯ ಕ್ಷೇತ್ರಗಳಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ. ಇಂದು ಕಲ್ಯಾಣ ಮಂಟಪ ನಿರ್ಮಿಸುವ ಮೂಲಕ ಮಧ್ಯಮ ಮತ್ತು ಕೆಳವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಮೇಯರ್ ಪುಷ್ಪಲತಾ ಜಗನ್ನಾಥ್, ಮಾಜಿ ಶಾಸಕರಾದ ಎಂ.ಕೆ.ಸೋಮ ಶೇಖರ್, ವಾಸು, ಜಯರಾಂ, ಬೃಂದಾ, ಜಯರಾಂ, ಮಂಜೇಶ್, ಸಮರ್ಥ್, ಸಾತ್ವಿಕ್, ನಗರಪಾಲಿಕೆ ಸದಸ್ಯರು ಸೇರಿ ದಂತೆ ಮತ್ತಿತರರು ಉಪಸ್ಥಿತರಿದ್ದರು.

Translate »