ಮೇ 23ರ ಮತ ಎಣಿಕಾ ಕೇಂದ್ರದಲ್ಲಿ ಶಿಸ್ತು, ಸುವ್ಯವಸ್ಥೆಗೆ ಸಹಕರಿಸಿ
ಮೈಸೂರು

ಮೇ 23ರ ಮತ ಎಣಿಕಾ ಕೇಂದ್ರದಲ್ಲಿ ಶಿಸ್ತು, ಸುವ್ಯವಸ್ಥೆಗೆ ಸಹಕರಿಸಿ

May 19, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕಾ ಕಾರ್ಯ ಮೇ 23ರಂದು ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿದ್ದು, ಎಲ್ಲಾ ಅಭ್ಯರ್ಥಿಗಳು ಹಾಗೂ ಏಜೆಂಟರು ಚುನಾವಣಾ ಆಯೋಗದ ನೀತಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಎಣಿಕಾ ಕೇಂದ್ರದಲ್ಲಿ ಶಿಸ್ತು, ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಲು ಬದ್ಧರಾಗ ಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೂಚಿಸಿದರು.

ಮತ ಎಣಿಕೆಗೆ ಕೇವಲ 5 ದಿನ ಇರುವ ಹಿನ್ನೆಲೆಯಲ್ಲಿ ಶನಿವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಏಜೆಂಟ ರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಮತ ಎಣಿಕಾ ಪ್ರಕ್ರಿಯೆ ಕುರಿತು ವಿವರಿಸಿದರು.

ಮತ ಎಣಿಕಾ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 14 ಕೊಠಡಿಗಳಲ್ಲಿ ಎಣಿಕೆ ನಡೆಸಲಾಗುತ್ತದೆ. ನರಸಿಂಹರಾಜ, ಕೃಷ್ಣರಾಜ, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ ಹಾಗೂ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆಗೆ ತಲಾ 2 ಕೊಠಡಿ ಹಾಗೂ ಚಾಮುಂಡೇಶ್ವರಿ ಮತ್ತು ಚಾಮರಾಜ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ ತಲಾ ಒಂದೊಂದು ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗುತ್ತದೆ ಯಾದರೂ, ಬೆಳಿಗ್ಗೆ 7.30ಕ್ಕೆ ಅಭ್ಯರ್ಥಿಗಳು ಅಥವಾ ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮನ್ನು ತೆರೆಯಲಾಗುತ್ತದೆ. ಅಂದು ಬೆಳಿಗ್ಗೆ 6ಕ್ಕೆ ಖಜಾನೆಯಲ್ಲಿರುವ ಅಂಜೆ ಮತ ವನ್ನು ಬಿಗಿ ಭದ್ರತೆಯೊಂದಿಗೆ ಎಣಿಕಾ ಕೇಂದ್ರಕ್ಕೆ ತರಲಾಗುತ್ತದೆ. 8ಗಂಟೆಗೆ ಆರಂಭ ವಾಗುವ ಎಣಿಕಾ ಕಾರ್ಯದಲ್ಲಿ ಮೊದಲಿಗೆ ಅಂಚೆ ಮತಪತ್ರಗಳ ಎಣಿಕೆ ಹಾಗೂ ಇಟಿಪಿ ಬಿಎಸ್ ಸ್ಕ್ಯಾನಿಂಗ್ ನಡೆಸಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಸಹಾ ಯಕ ಚುನಾವಣಾಧಿಕಾರಿಗಳ ಉಪಸ್ಥಿತಿ ಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಎಣಿಕಾ ಕೊಠಡಿಗೆ ತರಲಾಗುತ್ತದೆ ಎಂದರು.

ಎಲ್ಲಾ ವಿಧಾನಸಭಾ ಕ್ಷೇತ್ರಗಳ ವಿದ್ಯು ನ್ಮಾನ ಮತಯಂತ್ರದ ಎಣಿಕಾ ಕಾರ್ಯ ಪೂರ್ಣಗೊಂಡ ಬಳಿಕ ಲಾಟರಿ ಮೂಲಕ 5 ವಿವಿ ಪ್ಯಾಟ್‍ಗಳನ್ನು ಆಯ್ಕೆ ಮಾಡಲಾಗು ತ್ತದೆ. ಆಯ್ಕೆಯಾದ 5 ವಿವಿ ಪ್ಯಾಟ್‍ಗಳ ಚೀಟಿಯನ್ನು ಎಣಿಕೆ ಮಾಡಲಾಗುತ್ತದೆ. ಪ್ರತಿ ಟೇಬಲ್‍ಗೆ ಓರ್ವ ಪತ್ರಾಂಕಿತ ಅಧಿಕಾರಿ ಯನ್ನು ಎಣಿಕೆ ಮೇಲ್ವಿಚಾರಕರಾಗಿ, ಸಿ ವೃಂದದ ನೌಕರರನ್ನು ಎಣಿಕೆ ಸಹಾಯಕ ರಾಗಿ ನಿಯೋಜಿಸಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರದ ಅಧಿಕಾರಿ ಅಥವಾ ಕೇಂದ್ರ ಸರ್ಕಾರಿ ಸ್ವಾಮ್ಯದ ಇಲಾಖೆಯ ಅಧಿಕಾರಿಯನ್ನು ಮೈಕ್ರೋ ಅಬ್ಸರ್‍ವರ್ ಆಗಿ ನಿಯೋಜಿಸ ಲಾಗಿದೆ. ಎಣಿಕಾ ಕಾರ್ಯ ನಡೆಯುವ ಕೊಠಡಿಯಲ್ಲಿ ಸಿಸಿ ಕ್ಯಾಮರ ಅಳವಡಿಸಲಾ ಗಿದ್ದು, ಎಣಿಕಾ ಕಾರ್ಯದ ಸಂಪೂರ್ಣ ಚಿತ್ರೀಕರಣಕ್ಕಾಗಿ ಎಲ್ಲಾ ಕೊಠಡಿಗೂ ವಿಡಿಯೋಗ್ರಾಫರ್‍ಗಳನ್ನು ನಿಯೋಜಿಸ ಲಾಗಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ಹೊಂದಿರುವ ಅಭ್ಯರ್ಥಿ ಗಳು, ಏಜೆಂಟರನ್ನು ಮಾತ್ರ ಎಣಿಕಾ ಕೇಂದ್ರಕ್ಕೆ ಬಿಡಲಾಗುತ್ತದೆ. ಗುರುತಿನ ಚೀಟಿ ಹೊಂದಿಲ್ಲ ದವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಮೊಬೈಲ್ ಫೋನ್ ನಿಷೇಧಿಸಲಾಗಿದೆ. ಎಣಿಕಾ ಕೊಠಡಿ ಹಾಗೂ ಸ್ಟ್ರಾಂಗ್ ರೂಮ್ ಬಳಿ ಅನಗತ್ಯವಾಗಿ ಓಡಾಡುವುದನ್ನು ನಿರ್ಬಂ ಧಿಸಲಾಗಿದೆ. ಮತ ಎಣಿಕೆ ಆರಂಭವಾಗುತ್ತಿ ದ್ದಂತೆ ಪ್ರತಿಯೊಂದು ಮತಯಂತ್ರದ `ರಿಸೆಲ್ಟ್’ ಬಟನ್ ಒತ್ತಿ ಏಜೆಂಟರಿಗೆ ಯಾವ ಅಭ್ಯ ರ್ಥಿಗೆ ಎಷ್ಟೆಷ್ಟು ಮತ ಚಲಾವಣೆಯಾಗಿದೆ ಎಂದು ತೋರಿಸಲಾಗುತ್ತದೆ. ಏಜೆಂಟರ ಸಮ್ಮತಿ ಪಡೆದ ನಂತರವಷ್ಟೇ ಬೋರ್ಡ್ ಮೇಲೆ ಬರೆಯಲಾಗುತ್ತದೆ. ಪ್ರತಿಯೊಂದು ಸುತ್ತಿನ ಮತ ಎಣಿಕಾ ಕಾರ್ಯ ಮುಗಿದ ನಂತರ ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗು ತ್ತದೆ. ಎಣಿಕೆ ವೇಳೆ ಅನಗತ್ಯ ಗೊಂದಲ ಸೃಷ್ಟಿಸಬಾರದು. ಅನುಮಾನಗಳಿದ್ದರೆ ಅವು ಗಳನ್ನು ಶಾಂತಿಯುತವಾಗಿ ಸ್ಥಳದಲ್ಲಿಯೇ ಬಗೆಹರಿಸಿಕೊಳ್ಳಬೇಕು. ಎಣಿಕಾ ಕಾರ್ಯ ವನ್ನು ವೇಗವಾಗಿ ನಡೆಸುವಂತೆ ಸಿಬ್ಬಂದಿ ಗಳ ಮೇಲೆ ಒತ್ತಡ ಹಾಕಬಾರದು. ಆಯೋ ಗದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು.

ನಿಯಮಕ್ಕೆ ವಿರುದ್ಧವಾಗಿ ನಡೆದು ಕೊಂಡರೆ ಎಣಿಕಾ ಕೇಂದ್ರದಿಂದ ಹೊರ ಹಾಕಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಕಾಂಗ್ರೆಸ್ ಪಕ್ಷದ ಏಜೆಂಟ ರಾಗಿ ಮಾಜಿ ಮೇಯರ್ ನರಸಿಂಹ ಐಯ್ಯಂ ಗಾರ್, ಬಿಎಸ್ಪಿ ನಗರಾಧ್ಯಕ್ಷ ಎಂ.ಬಸವ ರಾಜು, ಬಿಜೆಪಿ ಅಭ್ಯರ್ಥಿ ಏಜೆಂಟರಾಗಿ ಮೈ.ವಿ.ರವಿಶಂಕರ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ಏಜೆಂಟರು ಪಾಲ್ಗೊಂಡಿದ್ದರು.

Translate »