ನಾಳೆ, ನಾಡಿದ್ದು ಸಿಎಂ ಕುಮಾರಸ್ವಾಮಿ ಮೈಸೂರು, ಮಂಡ್ಯ ಜಿಲ್ಲಾ ಪ್ರವಾಸ
ಮೈಸೂರು

ನಾಳೆ, ನಾಡಿದ್ದು ಸಿಎಂ ಕುಮಾರಸ್ವಾಮಿ ಮೈಸೂರು, ಮಂಡ್ಯ ಜಿಲ್ಲಾ ಪ್ರವಾಸ

August 9, 2018

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಆ.10 ಮತ್ತು 11ರಂದು ಮೈಸೂರು ಹಾಗೂ ಮಂಡ್ಯ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದು, ರೈತರ ಜೊತೆ ಭತ್ತದ ನಾಟಿ ಹಾಗೂ ಚುಂಚನಕಟ್ಟೆ ಜಲಪಾತೋತ್ಸವ ಉದ್ಘಾಟನೆ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ.

ಬೆಂಗಳೂರಿನಿಂದ ಆ.10ರಂದು ಸಂಜೆ 7.30ಕ್ಕೆ ಹೊರಡಲಿರುವ ಮುಖ್ಯ ಮಂತ್ರಿಗಳು ರಸ್ತೆ ಮೂಲಕ ರಾತ್ರಿ 10 ಗಂಟೆಗೆ ಮೈಸೂರು ತಲುಪಿ ವಾಸ್ತವ್ಯ ಹೂಡಲಿದ್ದಾರೆ. ಆ.11ರಂದು ಬೆಳಿಗ್ಗೆ 8.45ಕ್ಕೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ರುವ ಸುತ್ತೂರು ಮಠಕ್ಕೆ ಮುಖ್ಯಮಂತ್ರಿ ಗಳು ಭೇಟಿ ನೀಡಲಿದ್ದು, ಅಲ್ಲಿಂದ 10 ಗಂಟೆಗೆ ಹೊರಟು 10.45ಕ್ಕೆ ಶ್ರೀರಂಗಪಟ್ಟಣ ತಾಲೂಕು ಅರಳುಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀತಾಪುರ ಗ್ರಾಮ ತಲುಪ ಲಿದ್ದಾರೆ. ಅಲ್ಲಿ 11 ಗಂಟೆಗೆ ರೈತರೊಂದಿಗೆ ಭತ್ತದ ನಾಟಿ ಮಾಡುವ ಮೂಲಕ ಇಸ್ರೇಲ್ ಕೃಷಿ ಪದ್ಧತಿಗೆ ಚಾಲನೆ ನೀಡುವುದರ ಜೊತೆಗೆ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ಅಲ್ಲಿಂದ ಹೊರಟು ಸಂಜೆ 4.15ಕ್ಕೆ ಕೆ.ಆರ್.ನಗರ ತಾಲೂಕು ಚುಂಚನಕಟ್ಟೆ ತಲುಪುವರು. ಸಂಜೆ 7 ಗಂಟೆಗೆ ಚುಂಚನಕಟ್ಟೆಯಲ್ಲಿ ಜಲಪಾತೋತ್ಸವ ಉದ್ಘಾಟಿಸಿದ ನಂತರ 8.30ಕ್ಕೆ ಹೊರಟು ಮೈಸೂರಿಗೆ ಬಂದು ವಾಸ್ತವ್ಯ ಹೂಡಲಿದ್ದಾರೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಬಿ.ಪಿ.ಚನ್ನಬಸವೇಶ ತಿಳಿಸಿದ್ದಾರೆ.

Translate »