‘ಇಬ್ಬನಿ’ ರೆಸಾರ್ಟ್‍ನಿಂದ ಸಿಎಂ ಕುಮಾರಸ್ವಾಮಿ ನಿರ್ಗಮನ
ಮೈಸೂರು

‘ಇಬ್ಬನಿ’ ರೆಸಾರ್ಟ್‍ನಿಂದ ಸಿಎಂ ಕುಮಾರಸ್ವಾಮಿ ನಿರ್ಗಮನ

May 13, 2019

ಮಡಿಕೇರಿ: ಕಳೆದ ಎರಡು ದಿನಗಳಿಂದ ಮಡಿಕೇರಿ ಹೊರವಲಯದ ಪ್ರಶಾಂತ ಪರಿಸರದ ಇಬ್ಬನಿ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದ ರಾಜ್ಯ ಮೈತ್ರಿ ಸರಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಭಾನುವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ಇಬ್ಬನಿ ರೆಸಾರ್ಟ್‍ನಿಂದ ನಿರ್ಗಮಿಸಿದರು.

ಮಡಿಕೇರಿ ಹೊರ ವಲಯದ ಇಬ್ಬನಿ ರೆಸಾರ್ಟ್‍ನಿಂದ ಹೊರಬಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮಾಧ್ಯಮ ಪ್ರತಿನಿಧಿಗಳು ರೆಸಾರ್ಟ್ ವಾಸ್ತವ್ಯದ ಕುರಿತು ಪ್ರತಿಕ್ರಿಯೆ ಬಯಸಲು ಮುಂದಾದರೂ ಅವರು ಯಾವುದೇ ಸ್ಪಂದನೆ ತೋರದೇ ತೆರಳಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ, ಕುಟುಂಬ ಸದಸ್ಯರ ಕಾರ್ಯಕ್ರಮಕ್ಕೆಂದು ಮಂಡ್ಯ ಕಡೆ ಪ್ರಯಾಣ ಬೆಳೆಸಿದರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಹೆಸರಲ್ಲಿ ಇಬ್ಬನಿ ರೆಸಾರ್ಟ್‍ನ 5 ಪೂಲ್ ವಿಲ್ಲಾ ಐಷಾರಾಮಿ ರೂಂಗಳು ಹಾಗೂ ಸಂಪೂರ್ಣ ಖಾಸಗಿತನ ಹೊಂದಿರುವ ‘ಪಾಯಿಂಟ್ ಸೆಟ್ಟಾ’ ಹೆಸರಿನ ಒಂದು ವಿಶೇಷ ಖಾಸಗಿ ಕಾಟೇಜ್‍ಅನ್ನು ಸಿಎಂ ರೆಸಾರ್ಟ್ ವಾಸ್ತವ್ಯಕ್ಕಾಗಿ ಬುಕ್ ಮಾಡಲಾಗಿತ್ತು. ಮಾತ್ರವ ಲ್ಲದೇ, ರೆಸಾರ್ಟ್ ವಾಸ್ತವ್ಯ ಮುಖ್ಯಮಂತ್ರಿಗಳ ಖಾಸಗಿ ವಿಚಾರವಾದ ಹಿನ್ನಲೆಯಲ್ಲಿ ಪಕ್ಷದ ಯಾವುದೇ ಮುಖಂಡರಿಗೆ ರೆಸಾರ್ಟ್ ಪ್ರವೇಶಿಸಲು ಅನುಮತಿ ನಿರಾಕರಿಸ ಲಾಗಿತ್ತು. ರೆಸಾರ್ಟ್ ಮುಂಭಾಗ ಜಿಲ್ಲಾ ಪೊಲೀಸರಿಂದ ಭದ್ರತಾ ವ್ಯವಸ್ಥೆಯನ್ನೂ ಮಾಡಲಾಗಿತ್ತು. ರೆಸಾರ್ಟ್‍ನಲ್ಲಿದ್ದ 8 ಮಂದಿ ಸ್ಥಳೀಯ ಕೆಲಸಗಾರರಿಗೆ 3 ದಿನಗಳ ಕಡ್ಡಾಯ ರಜೆ, ರೆಸಾರ್ಟ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇತರ ಸಿಬ್ಬಂದಿಗಳಿಗೆ ವಿವಿಧ ನಿರ್ಬಂಧಗಳನ್ನು ಹೇರಲಾಗಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಪತ್ನಿ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್ ಕುಮಾರಸ್ವಾಮಿ, ಆಪ್ತರಾದ ಸಚಿವ ಸಾ.ರಾ. ಮಹೇಶ್, ಸಚಿವ ಪುಟ್ಟರಾಜು ಸೇರಿದಂತೆ ಮತ್ತಿತರರು ಸಾಥ್ ನೀಡಿದ್ದರು. ಈ ನಡುವೆ ರಾಜ್ಯ ರಾಜಕೀಯಗಳ ಬೆಳವಣಿಗೆ, ಮೇ 23ರ ನಂತರ ಮೈತ್ರಿ ಸರಕಾರದಲ್ಲಾಗ ಬಹುದಾದ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ನಡೆದಿರುವ ಸಾಧ್ಯತೆಯನ್ನು ತಳ್ಳಿಹಾಕು ವಂತಿಲ್ಲ. ಆದರೂ ಈ ಬಗ್ಗೆ ಯಾರೂ ಕೂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

Translate »