ರೈತರ ಸಾಲ ಮನ್ನಾ ಸಂಬಂಧ ಅಧಿಕಾರಿಗಳೊಂದಿಗೆ ಸಿಎಂ ಕುಮಾರಸ್ವಾಮಿ ಸುದೀರ್ಘ ಸಮಾಲೋಚನೆ
ಮೈಸೂರು

ರೈತರ ಸಾಲ ಮನ್ನಾ ಸಂಬಂಧ ಅಧಿಕಾರಿಗಳೊಂದಿಗೆ ಸಿಎಂ ಕುಮಾರಸ್ವಾಮಿ ಸುದೀರ್ಘ ಸಮಾಲೋಚನೆ

May 30, 2018

ಬೆಂಗಳೂರು: ವಾಣಿಜ್ಯ , ಸಹಕಾರಿ ಹಾಗೂ ಖಾಸಗಿ ಬ್ಯಾಂಕು ಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡುವ ನಿರ್ಧಾರ ವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ತೆಗೆದುಕೊಂಡಿದ್ದಾರೆ.

ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿ ಗಳೊಟ್ಟಿಗೆ ಸುದೀರ್ಘ ಸಮಾಲೋಚನೆ ನಡೆಸಿದ ನಂತರ ಈ ತೀರ್ಮಾನಕ್ಕೆ ಬಂದಿದ್ದಾರೆ.
ಕೃಷಿ ಸಾಲ ಮನ್ನಾ ಕುರಿತಂತೆ ಸಮಾ ಲೋಚನೆ ನಡೆಸಲು ನಾಳೆ ರೈತ ಮುಖಂಡರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಯಾವ ಯಾವ ರೂಪದಲ್ಲಿ ರೈತರು ಬ್ಯಾಂಕುಗಳಿಂದ ಪಡೆದಿರುವ ಸಾಲ ಮನ್ನಾ ಮಾಡಬಹುದು ಎಂಬುದರ ಬಗ್ಗೆ ಅವರಿಂದಲೇ ಮಾಹಿತಿ ಪಡೆಯಲಿದ್ದಾರೆ. ಸಾಲ ಮನ್ನಾ ಮಾಡು ವುದರ ಜೊತೆಗೆ ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಕಲ್ಪಿಸು ವುದು ಹಾಗೂ ಅವರ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಸರ್ಕಾರ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆಯೂ ರೈತರಿಂದಲೇ ಮಾಹಿತಿ ಪಡೆಯಲಿದ್ದಾರೆ. ಇದೆಲ್ಲವನ್ನೂ ಕ್ರೋಢೀಕರಿಸಿ, ಜೂನ್ ತಿಂಗಳಲ್ಲಿ ತಾವು ಮಂಡಿಸುತ್ತಿರುವ ಚೊಚ್ಚಲ ಮುಂಗಡ ಪತ್ರದಲ್ಲೇ ಸಾಲ ಮನ್ನಾ ಮತ್ತು ರೈತರ ಆರ್ಥಿಕ ಸಂಪನ್ಮೂಲ ಹೆಚ್ಚಿಸುವ ಸಂಬಂಧ ಸರ್ಕಾರದ ಯೋಜನೆಗಳನ್ನು ಅಧಿಕೃತ ವಾಗಿಯೇ ಪ್ರಕಟಿಸಲಿದ್ದಾರೆ.

ಮೇಲ್ನೋಟಕ್ಕೆ ರೈತರು ಬ್ಯಾಂಕುಗಳಿಂದ 53 ಸಾವಿರ ಕೋಟಿ ರೂ. ಸಾಲ ಪಡೆದಿ ದ್ದಾರೆ ಎಂದು ಕಂಡು ಬಂದರೂ, ಅದು ಕೇವಲ 20 ರಿಂದ 23 ಸಾವಿರ ಕೋಟಿ ರೂ. ಮಾತ್ರ. ಬ್ಯಾಂಕುಗಳ ಆಡಳಿತ ಮಂಡಳಿ ಜೊತೆ ಸಮಾಲೋಚನೆ ನಡೆಸಿ, ರೈತರು ಪಡೆದಿರುವ ಸಾಲವನ್ನು ಬಡ್ಡಿ, ಚಕ್ರಬಡ್ಡಿ ರಹಿತವಾಗಿ ಒಂದು ಬಾರಿಗೆ ಸಾಲ ಮನ್ನಾ ಮಾಡುವ (ಒಟಿಎಸ್) ತೀರ್ಮಾನ ತೆಗೆದು ಕೊಂಡಿದ್ದಾರೆ. ಇತ್ತೀಚೆಗೆ ಸಾಲ ವಸೂ ಲಾತಿಗೆ ಸಂಬಂಧಿಸಿದಂತೆ ಕೇಂದ್ರದ ಆರ್ಥಿಕ ಇಲಾಖೆ ಹೊರಡಿಸಿರುವ ಮಾರ್ಗ ಸೂಚಿಗಳನ್ನು ಮುಂದಿಟ್ಟುಕೊಂಡು ಒಟಿಎಸ್‍ನಡಿ ಸರ್ಕಾ ರವೇ ಬ್ಯಾಂಕುಗಳಿಗೆ ಸಾಲ ಮರು ಪಾವತಿ ಸುವುದು. ಈ ಬೃಹತ್ ಹಣವನ್ನು ಒಂದೇ ಬಾರಿ ಭರಿ ಸಲು ಸಾಧ್ಯವಾಗದ ಕಾರಣ ಮುಂದಿನ ಐದು ವರ್ಷಗಳಲ್ಲಿ ಕಂತಿನ ರೂಪದಲ್ಲಿ ಬ್ಯಾಂಕುಗಳಲ್ಲಿ ಹಣ ಪಾವತಿ ಸುವುದು. ಬ್ಯಾಂಕುಗಳಿಗೆ ಸರ್ಕಾರವೇ ಖಾತ್ರಿ ನೀಡುವುದರಿಂದ ಐದು ವರ್ಷಗಳಲ್ಲಿ ಆಯಾ ಬ್ಯಾಂಕುಗಳಿಗೆ ಸಾಲದ ಮೊತ್ತ ಭಾಗ ತಲುಪಲಿದೆ. ಇದರಿಂದ ಸರ್ಕಾರಕ್ಕೆ ಒಂದೇ ಬಾರಿ ಹೊರೆ ಬೀಳುವುದಿಲ್ಲ. ವಾಣಿಜ್ಯ ಬ್ಯಾಂಕು ಗಳ ಮೇಲಿರುವ ಹೊರೆ ತಪ್ಪಿಸಿ, ರೈತರನ್ನು ಸಾಲ ಮುಕ್ತವಾಗಿ ಮಾಡುವ ರೂಪು ರೇಷೆ ಸಿದ್ಧಪಡಿಸಿದ್ದಾರೆ. ಅಧಿಕಾರಿ ಗಳು ಮತ್ತು ಬ್ಯಾಂಕಿನ ಸಿಬ್ಬಂದಿ ನೀಡಿರುವ ಮಾಹಿ ತಿಯನ್ನು ಆಧರಿಸಿ, ಇಂತಹ ತೀರ್ಮಾ ನಕ್ಕೆ ಬಂದಿರುವ

ಮುಖ್ಯಮಂತ್ರಿಯವರು ಕೃಷಿಗೆ ಸಂಬಂಧಿಸಿದಂತೆ ರೈತರು ಮಾಡಿರುವ ಸಾಲ ಮಾತ್ರ ಮನ್ನಾವಾಗಲಿದೆ. ಮೈತ್ರಿ ಸರ್ಕಾರದಲ್ಲಿ ತಾವೊಬ್ಬರೇ ನಿರ್ಧಾರ ಕೈಗೊಳ್ಳುವುದು ಸಾಧ್ಯವಿಲ್ಲ ಎಂಬ ಹಿನ್ನೆಲೆಯಲ್ಲಿ ನಿನ್ನೆ ಕಾಂಗ್ರೆಸ್ ವರಿಷ್ಠ ಗುಲಾಮ್ ನಬೀ ಆಜಾದ್ ಅವರೊಟ್ಟಿಗೆ ಸಮಾಲೋಚನೆ ಸಂದರ್ಭದಲ್ಲಿ ಕೃಷಿ ಸಾಲದ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ನೀಡಿ, ಅವರ ಒಪ್ಪಿಗೆಯನ್ನೂ ಪಡೆದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಾಲ ಮನ್ನಾಕ್ಕಾಗಿ ನಿಗದಿಪಡಿಸಿರುವ ಹಣವನ್ನು ವಿವಿಧ ಮೂಲಗಳಿಂದ ಕ್ರೋಢೀಕರಿಸುವ ಬಗ್ಗೆಯೂ ಮುಖ್ಯಮಂತ್ರಿಯವರು ಚಿಂತನೆ ನಡೆಸಿದ್ದಾರೆ. ಸ್ವಲ್ಪ ಮಟ್ಟಿಗೆ ನಾಗರಿಕರ ಮೇಲೂ ಹೊರೆ ಬೀಳಿಸುವುದು, ಮತ್ತೊಂದೆಡೆ ಸೋರಿಕೆ ತಪ್ಪಿಸಿ, ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚು ಒತ್ತು ಕೊಡುವುದು. ಅಲ್ಲದೆ, ಅನಗತ್ಯವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಮತ್ತೆ ಕೆಲವು ಇಲಾಖೆಗಳಿಗೆ ನಿಗದಿಯಾದ ಅನುದಾನಕ್ಕೂ ಕತ್ತರಿ ಹಾಕಲು ತೀರ್ಮಾನಿಸಿದ್ದಾರೆ.

Translate »