ಹಾವು ಕಚ್ಚಿ ಯುವಕ ಸಾವು
ಮೈಸೂರು

ಹಾವು ಕಚ್ಚಿ ಯುವಕ ಸಾವು

May 31, 2018

ಸರಗೂರು: ಹಾವು ಕಚ್ಚಿ ಯುವಕ ನೊಬ್ಬ ಸಾವನ್ನ ಪ್ಪಿರುವ ಘಟನೆ ಸಮೀಪದ ಚೆನ್ನಿ ಪುರ ಗ್ರಾಮದಲ್ಲಿ ನಡೆದಿದೆ. ಯುವ ರೈತ ಮಧು(20) ಮೃತಪಟ್ಟವ. ಗ್ರಾಮದ ಬಳಿಯ ತನ್ನ ಜಮೀನಿನಲ್ಲಿ ದನ-ಕರು ಗಳನ್ನು ಮೇಯಿಸುತ್ತಿದ್ದಾಗ ಹಾವು ಕಚ್ಚಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡ ಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾ ಗದೆ ಮೃತಪಟ್ಟಿದ್ದಾನೆ. ಮಧು ನಿಧನಕ್ಕೆ ಮುಖಂಡ ಸುನೀಲ್ ಕುಮಾರ್, ಪಪಂ ಮಾಜಿ ಸದಸ್ಯ ಶ್ರೀನಿವಾಸ್, ಕರವೇ ಮಾಜಿ ಅಧ್ಯಕ್ಷ ಎಸ್.ಎಂ. ನಾಗೇಂದ್ರ, ತಾಲೂಕು ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ವನಸಿರಿ ಶಂಕರ್ ಸಂತಾಪ ಸೂಚಿಸಿದ್ದಾರೆ.

Translate »